ಸರ್ಕಾರದ ಅಬಕಾರಿ ನೀತಿಯ ಬಗ್ಗೆ ಸಿಬಿಐ ತನಿಖೆಗೆ ದೆಹಲಿ LG ಶಿಫಾರಸು!

By Santosh NaikFirst Published Jul 22, 2022, 1:15 PM IST
Highlights

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರು ಕೇಜ್ರಿವಾಲ್ ಸರ್ಕಾರದ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ದೆಹಲಿ ಸರ್ಕಾರದ ಅಬಕಾರಿ ನೀತಿ ವಿರುದ್ಧ ಎಲ್‌ಜಿ ವಿನಯ್ ಕುಮಾರ್ ಸಕ್ಸೇನಾ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ.
 

ನವದೆಹಲಿ (ಜುಲೈ 22): ದೆಹಲಿಯಲ್ಲಿ ಮುಖ್ಯಮಂತ್ರಿ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ಸಂಬಂಧದಲ್ಲಿ ಮತ್ತೊಮ್ಮೆ ಬಿರುಕು ಮೂಡಿದ್ದು, ಪರಸ್ಪರ ಮುಖಾಮುಖಿಯಾಗಿ ನಿಂತಿದ್ದಾರೆ. ಶುಕ್ರವಾರ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಕೇಜ್ರಿವಾಲ್ ಸರ್ಕಾರದ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ದೆಹಲಿ ಸರ್ಕಾರದ ಅಬಕಾರಿ ನೀತಿ ವಿರುದ್ಧ ಎಲ್‌ಜಿ ವಿನಯ್ ಕುಮಾರ್ ಸಕ್ಸೇನಾ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ. ಈ ನೀತಿಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರವಾಗಿರುವ ಸೂಚನೆ ಸಿಕ್ಕಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ನೀಡಿದ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯ ಕಾರ್ಯದರ್ಶಿಯವರು 2022ರ ಜುಲೈ 8ರಂದು ಈ ವರದಿಯನ್ನು ಸಲ್ಲಿಸಿದ್ದಾರೆ. ಜಿಎನ್‌ಸಿಟಿಡಿ ಕಾಯಿದೆ 1991, ವ್ಯವಹಾರ ನಿಯಮಗಳ ವಹಿವಾಟು 1993, ದೆಹಲಿ ಅಬಕಾರಿ ಕಾಯ್ದೆ 2009 ಮತ್ತು ದೆಹಲಿ ಅಬಕಾರಿ ನಿಯಮಗಳು 2010 ಅನ್ನು ಮದ್ಯದ ಪರವಾನಗಿದಾರರಿಗಾಗಿ ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.  ಹೊಸ ಅಬಕಾರಿ ನೀತಿಯಡಿಯಲ್ಲಿ, ಕೇಜ್ರಿವಾಲ್ ಸರ್ಕಾರವು ಮದ್ಯದ ಅಂಗಡಿಗಳ ಟೆಂಡರ್‌ನಲ್ಲಿ ಅಡಚಣೆ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಹೊಸ ಅಬಕಾರಿ ನೀತಿಯಲ್ಲಿ ನಿಯಮಗಳನ್ನು ನಿರ್ಲಕ್ಷಿಸಿ ಮದ್ಯದಂಗಡಿಗಳ ಟೆಂಡರ್ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಮನೀಶ್ ಸಿಸೋಡಿಯಾ ಕೂಡ ಭಾಗಿ: ಇದು ಮುಖ್ಯವಾಗಿ ಉನ್ನತ ಮಟ್ಟದ ರಾಜಕೀಯದಿಂದ ಹಣಕಾಸಿನ ಕ್ವಿಡ್‌ ಪ್ರೋ ಕ್ವೊ ಸಂಕೇತವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದನ್ನು ಅಬಕಾರಿ ಇಲಾಖೆ ಉಸ್ತುವಾರಿ ಸಚಿವ ಮನೀಶ್ ಸಿಸೋಡಿಯಾ ಅಂತಿಮಗೊಳಿಸಿದ್ದಾರೆ. ರಾಜಕೀಯದಲ್ಲಿ ಕ್ವಿಡ್ ಪ್ರೊ ಕ್ವೊ ಅರ್ಥವು ಪರಸ್ಪರ ಲಾಭಕ್ಕಾಗಿ ವಹಿವಾಟು ಅಥವಾ ಇತರ ಪ್ರಯೋಜನಕ್ಕೆ ಸಂಬಂಧಿಸಿದ್ದು ಎನ್ನುವುದಾಗಿದೆ. ಟೆಂಡರ್ ನೀಡಿದ ಬಳಿಕವೂ ಮದ್ಯದಂಗಡಿ ಪರವಾನಗಿದಾರರಿಗೆ ಅನಗತ್ಯವಾಗಿ ಆರ್ಥಿಕ ನೆರವು ನೀಡಿ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮುಖ್ಯ ಕಾರ್ಯದರ್ಶಿಯವರ ಈ ವರದಿಯು TOBR 1993 ರ ನಿಯಮ 57 ರ ಅನುಸಾರವಾಗಿದೆ. ಇದನ್ನು ಲೆಫ್ಟಿನೆಂಟ್ ಗವರ್ನರ್ ಮತ್ತು ಮುಖ್ಯಮಂತ್ರಿ ಇಬ್ಬರಿಗೂ ಕಳುಹಿಸಲಾಗಿದೆ.

Latest Videos

ಬಿಜೆಪಿ ಮೊದಲಿನಿಂದಲೂ ವಿರೋಧಿಸಿತ್ತು: ದೆಹಲಿ ಸರ್ಕಾರದ (Delhi Government) ಹೊಸ ಅಬಕಾರಿ ನೀತಿಗೆ (New excise policy) ಸಂಬಂಧಿಸಿದಂತೆ ಬಿಜೆಪಿ ಜನವರಿಯಲ್ಲಿ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿತ್ತು. ರಾಜಧಾನಿ ದೆಹಲಿಯಲ್ಲಿ ಹೊಸ ಅಬಕಾರಿ ನೀತಿಯನ್ನು ಬಿಜೆಪಿ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ. ಇದರಿಂದ ದೆಹಲಿಯಲ್ಲಿ ಮದ್ಯದಂಗಡಿ ಹೆಚ್ಚಾಗಲಿದೆ ಎಂದು ಬಿಜೆಪಿ ದೆಹಲಿ ಅಧ್ಯಕ್ಷ ಆದೇಶ್ ಗುಪ್ತಾ ಹೇಳಿದ್ದರು. ಈ ನೀತಿಯಲ್ಲಿ, ಹಣ ಫಿಕ್ಸ್ ಮಾಡುವುದರಿಂದ ಹಿಡಿದು ಬ್ರ್ಯಾಂಡ್ ಫಿಕ್ಸ್ ಮಾಡುವವರೆಗೆ ಅಧಿಕಾರ ಗುತ್ತಿಗೆದಾರರ ಬಳಿ ಇರುತ್ತದೆ. ಮೊದಲು ದೆಹಲಿಯಲ್ಲಿ 250 ಖಾಸಗಿ ಒಪ್ಪಂದಗಳು ಇದ್ದವು, ಹೊಸ ಅಬಕಾರಿ ನೀತಿಯ ನಂತರ ಈ ಸಂಖ್ಯೆ 850 ಕ್ಕೆ ಏರಿತು. ನಾವು ಔತಣಕೂಟ ಹಾಲ್‌ಗಳು, ಬಾರ್‌ಗಳು, ವಿಮಾನ ನಿಲ್ದಾಣಗಳು ಮತ್ತು ಇತರ ಸ್ಥಳಗಳನ್ನು ಲೆಕ್ಕ ಹಾಕಿದರೆ, ಈ ಸಂಖ್ಯೆ 3000 ರ ಸಮೀಪದಲ್ಲಿದೆ ಎಂದು ಹೇಳಲಾಗಿದೆ.

 

ಕೇಜ್ರಿವಾಲ್‌ ವಿರುದ್ಧ ಗೌತಮ್ ಗಂಭೀರ್ ಗರಂ, ಉಚಿತ ವಿದ್ಯುತ್ ಸೌಲಭ್ಯದ 'ಕಪ್ಪು ಸತ್ಯ' ಬಹಿರಂಗ!

ಕುಮಾರ್ ವಿಶ್ವಾಸ್ ಕೂಡ ಪ್ರತಿಭಟನೆ ನಡೆಸಿದ್ದರು: ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿಯ ವಿರುದ್ಧ ಕುಮಾರ್ ವಿಶ್ವಾಸ್ (Kumar Vishwas) ಕೂಡ ಪ್ರತಿಭಟಿಸಿದ್ದರು. ದೆಹಲಿ ಮದ್ಯ ಮಾಫಿಯಾ ಹೇಗಿದೆ ಎಂದರೆ 2016 ರಲ್ಲಿ ಕುಡಿಯುವವರ ವಯಸ್ಸನ್ನು 21 ರಿಂದ 18 ಕ್ಕೆ ಹೆಚ್ಚಿಸುವ ಮತ್ತು 1,000 ಹೊಸ ಒಪ್ಪಂದಗಳನ್ನು ತೆರೆಯುವ ನೀತಿಯನ್ನು ಜಾರಿಗೆ ತರಲು ಶಿಫಾರಸು ಮಾಡುವ ಮೂಲಕ, ಮದ್ಯದಂಗಡಿ ಮಾಲೀಕನೊಬ್ಬ ಎಂಎಲ್ ಎ ಜೊತೆ ನನ್ನ ಬಳಿ ಬಂದಿದ್ದ. ನಾನು ಅವರಿಗೆ ಛೀಮಾರಿ ಹಾಕಿದ್ದೆ ಮತ್ತು ನಾಯಕರಿಬ್ಬರಿಗೂ ಎಚ್ಚರಿಕೆ ನೀಡಿದ್ದೆ. ಇದೀಗ 'ಛೋಟೆವಾಲೆ'ಯ ಸೋದರ ಮಾವ 500 ಕೋಟಿ ಡೀಲ್ ನಲ್ಲಿ ಮ್ಯಾಟರ್ ಸೆಟ್ ಮಾಡಿದ್ದಾರೆ ಎಂದು ಹೇಳಿದ್ದರು.

 

ದೆಹಲಿ ಟ್ರಿಪ್ ಪ್ಲಾನ್ ಇದೆಯಾ? ವಿಶೇಷ ಉಡುಗೊರೆಯೊಂದಿಗೆ ಸ್ವಾಗತಿಸಲು ಸಜ್ಜಾದ ರಾಜಧಾನಿ!

ಏನಿದು ಹೊಸ ಮದ್ಯ ನೀತಿ: ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿಯ ಅಡಿಯಲ್ಲಿ, 260 ಖಾಸಗಿ ಅಂಗಡಿಗಳು ಸೇರಿದಂತೆ ಎಲ್ಲಾ 864 ಮದ್ಯದ ಅಂಗಡಿಗಳನ್ನು ಮುಕ್ತ ಟೆಂಡರ್ ಮೂಲಕ ಖಾಸಗಿ ಕಂಪನಿಗಳಿಗೆ ನೀಡಲಾಗುತ್ತದೆ. ಹೊಸ ವ್ಯವಸ್ಥೆಯಿಂದ ದೆಹಲಿ ಸರ್ಕಾರವು ಚಿಲ್ಲರೆ ಮದ್ಯದ ವ್ಯವಹಾರದಿಂದ ಹೊರಗುಳಿಯಲಿದೆ. ಈಗ ಕನಿಷ್ಠ 500 ಚದರ ಅಡಿ ಪ್ರದೇಶದಲ್ಲಿ ಮದ್ಯದ ಅಂಗಡಿಗಳನ್ನು ತೆರಯಬೇಕು ಎನ್ನಲಾಗಿದೆ. ಅಂಗಡಿಗಳು ಈಗ ಹವಾನಿಯಂತ್ರಿತವಾಗಿದ್ದು, ಸಿಸಿಟಿವಿ ಅಳವಡಿಸಲಾಗಿದೆ. ಆದರೆ, ದೆಹಲಿ ಸರ್ಕಾರವು ಹೊಸ ಅಂಗಡಿಯಿಂದ ರಸ್ತೆಯಲ್ಲಿ ಯಾವುದೇ ದಟ್ಟಣೆ ಇರುವುದಿಲ್ಲ, ಏಕೆಂದರೆ ಅಂಗಡಿಗಳ ಒಳಗೆ ಮದ್ಯ ಮಾರಾಟ ಮಾಡಲಾಗುತ್ತದೆ ಎಂದು ವಾದಿಸುತ್ತಿದೆ. ಹೊಸ ಅಬಕಾರಿ ನೀತಿಯ ಅಡಿಯಲ್ಲಿ, 2,500 ಚದರ ಅಡಿ ವಿಸ್ತೀರ್ಣದ 5 ಸೂಪರ್-ಪ್ರೀಮಿಯಂ ಚಿಲ್ಲರೆ ಮಳಿಗೆಗಳನ್ನು ತೆರೆಯಲಾಗಿದೆ, ಅಲ್ಲಿ ಕೂಡ ಮದ್ಯ ಲಭ್ಯವಿರುತ್ತದೆ.
 

click me!