ಐಷಾರಾಮಿ ವಕೀಲರ ಕೊಠಡಿ ನಿರೀಕ್ಷಿಸಬೇಡಿ, ಮರದ ಕೆಳಗೆ ನಿಂತು ಕಾನೂನು ಅಭ್ಯಾಸ ಮಾಡಿದ್ದೆವು: ಸಿಜೆಐ

Published : Jul 22, 2022, 12:01 PM IST
ಐಷಾರಾಮಿ ವಕೀಲರ ಕೊಠಡಿ ನಿರೀಕ್ಷಿಸಬೇಡಿ, ಮರದ ಕೆಳಗೆ ನಿಂತು ಕಾನೂನು ಅಭ್ಯಾಸ ಮಾಡಿದ್ದೆವು: ಸಿಜೆಐ

ಸಾರಾಂಶ

ಹೆಚ್ಚುವರಿ ಸಂಕೀರ್ಣ ಕಟ್ಟಡದಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಚೇಂಬರ್ ಹಂಚಿಕೆಗೆ ಸಂಬಂಧಿಸಿದಂತೆ ವಕೀಲರೊಬ್ಬರು ತಕರಾರು ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.  

ನವದೆಹಲಿ (ಜುಲೈ 22): ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಎನ್‌ವಿ ರಮಣ ಗುರುವಾರ  ಪ್ರಕರಣವೊಂದರ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ನಲ್ಲಿ ತಮ್ಮ ಕಾನೂನು ಅಭ್ಯಾಸದ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಂದು ವಕೀಲರಿಗೆ ಕಾನೂನು ಅಭ್ಯಾಸ ಮಾಡಲು ಚೇಬರ್‌ ಹೋಗಲಿ, ಕೋರ್ಟ್‌ ಆವರಣದಲ್ಲಿಯೇ ಸ್ಥಳವಿರಲಿಲ್ಲ. ಮರದ ಅಡಿಯಲ್ಲಿ ನಿಂತು ಕಾನೂನು ಅಭ್ಯಾಸ ಮಾಡಿದ್ದೆವು ಎಂದು ಹೇಳಿದ್ದಾರೆ. ಇಂದು ದೇಶದ ಬಹುತೇಕ ಕೋರ್ಟ್‌ಗಳಲ್ಲಿ ವಕೀಲರಿಗೆ ಅವರದೇ ಆದ ಚೇಂಬರ್‌ಗಳಿಲ್ಲ, ಆದರೆ ಸುಪ್ರೀಂ ಕೋರ್ಟ್‌ ಹಾಗಲ್ಲ. ಇಲ್ಲಿ ಕಾನೂನು ಅಭ್ಯಾಸ ಮಾಡಲು ವಕೀಲರಿಗೆ ಚೇಂಬರ್‌ ಸಿಗುತ್ತದೆ ಎಂದು ಹೇಳಿದ್ದಾರೆ. "ಬೇಕಾದರೆ ನೀವೇ ಪರೀಕ್ಷೆ ಮಾಡಿ, ಸುಪ್ರೀಂ ಕೋರ್ಟ್‌ ಹೊರತಾಗಿ ಬೇರೆ ಯಾವ ಕೋರ್ಟ್‌ನಲ್ಲೂ ನಿಮಗೆ ಚೇಂಬರ್‌ಗಳು ಸಿಗೋದಿಲ್ಲ. ನಾವೆಲ್ಲ ಮರದ ಕೆಳಗೆ ನಿಂತು ಕಾನೂನು ಅಭ್ಯಾಸ ಮಾಡಿದ್ದೆವು' ಎಂದು ಸಿಜೆಐ ತಮ್ಮ ಹಳೇ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಹೆಚ್ಚುವರಿ ಸಂಕೀರ್ಣ ಕಟ್ಟಡದಲ್ಲಿ ಚೇಂಬರ್ ಹಂಚಿಕೆಗೆ ಸಂಬಂಧಿಸಿದಂತೆ ವಕೀಲರೊಬ್ಬರು ತಕರಾರು ಎತ್ತಲು ಯತ್ನಿಸಿದ ಉಲ್ಲೇಖವನ್ನು ವಿಚಾರಣೆ ನಡೆಸುತ್ತಿದೆ.

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ನ ಹೊಸ ಕಟ್ಟಡದಲ್ಲಿ 400ಕ್ಕೂ ಹೆಚ್ಚು ವಕೀಲರ ಚೇಂಬರ್‌ಗಳ ಪಟ್ಟಿಯನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿತ್ತು. ಈ ಕುರಿತಾಗಿ ವಕೀಲರು ಪ್ರಕರಣದ ತುರ್ತು ವಿಚಾರಣೆಯನ್ನು ಕೋರಿದರು, ಅವರು ನಮ್ಮೊಳಗೆ "ಮುಕ್ತ ಸಂವಾದ"ಕ್ಕಾಗಿ ಮಾತ್ರ ಎದುರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ರೀತಿಯಲ್ಲಿ ಕಂಡ ಸಿಜೆಐ ರಮಣ ಅವರು, ಬಹುಕಾಲದ ಬೇಡಿಕೆಯಾಗಿದ್ದ ಹೆಚ್ಚುವರಿ ಕೊಠಡಿಗಳ ಹಂಚಿಕೆ ಕೊನೆಗೂ ಆಗಿರುವಾಗ ಇಂತಹ ಪ್ರಕರಣ ಏಕೆ ದಾಖಲಿಸಲಾಗುತ್ತಿದೆ ಎಂದು (Chief Justice of India NV Ramana) ಕೇಳಿದರು.

ಸೋಮವಾರ ಮುಂದಿನ ವಿಚಾರಣೆ: "ನಿಮಗೆ ಕೋಣೆಗಳ ಹಂಚಿಕೆ ಬೇಡ ಎಂದಾದಲ್ಲಿ ಇಲ್ಲಿನ ಆಸ್ತಿಯನ್ನು ಆನಂದಿಸಿ. ನಾನು ಸಿಜೆಐ ಆಗಿ ಮಾತನಾಡುತ್ತಿಲ್ಲ, ನಾವೆಲ್ಲರೂ ಇದರಿಂದ ಬಳಲಿದ್ದೇವೆ ಮತ್ತು ಬಹಳ ಕಷ್ಟದಿಂದ ಇದರ ಹಂಚಿಕೆಯೂ ಆಗಿದೆ. ವಕೀಲರು ಚೇಂಬರ್‌ಗಳ ರೂಪದಲ್ಲಿ ಅರಮನೆಗಳನ್ನು ನಿರೀಕ್ಷೆ ಮಾಡಬೇಡಿ' ಎಂದು ಹೇಳಿದರು. ಸಿಜೆಐ ರಮಣ ಅವರು ತಮ್ಮ ಅಭ್ಯಾಸದ ಆರಂಭಿಕ ವರ್ಷಗಳಲ್ಲಿ, ವಕೀಲರು ತಮ್ಮ ವ್ಯವಹಾರಗಳನ್ನು ನಡೆಸಲು ಮರಗಳ ನೆರಳನ್ನು ಆಶ್ರಯಿಸಬೇಕಾಗಿತ್ತು.  ಮರದ ಕೆಳಗೆ ನಿಂತು ನಮ್ಮ ಕೆಲಸ ಮಾಡುತ್ತಿದ್ದೆವು. "ಈಗ ಇಲ್ಲಿ ಸುಮಾರು 400 ರಿಂದ 500 ಜನರಾದರೂ ಸ್ವಲ್ಪ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಈಗ (ಅದರ ವಿರುದ್ಧ) ಏನನ್ನಾದರೂ ಏಕೆ ಮಾಡಬೇಕು" ಎಂದು ಸಿಜೆಐ ಟೀಕಿಸಿದರು. ಸಂಕ್ಷಿಪ್ತ ವಿಚಾರಣೆಯ ನಂತರ, ಸಿಜೆಐ ರಮಣ ಭಾಗವಾಗದ ಪೀಠದ ಮುಂದೆ ಈ ವಿಷಯವನ್ನು ಮುಂದಿನ ಸೋಮವಾರ ವಿಚಾರಣೆಗೆ ಒಳಪಡಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ
ಬಿಜೆಪಿಗರ ಬಳಿ 1 ಕೋಟಿ 2 ಕೋಟಿ ಮೊತ್ತದ ದುಬಾರಿ ವಾಚ್‌ಗಳಿವೆ ಚೆಕ್ ಮಾಡಿ: ಕಾಂಗ್ರೆಸ್ ಶಾಸಕ