ಮಹದೇವ್‌ ಬೆಟ್ಟಿಂಗ್‌ ಆ್ಯಪ್‌ ಹಗರಣ: ದುಬೈಗೆ ಪರಾರಿಯಾಗಲು ಹೇಳಿದ್ದೇ ಸಿಎಂ ಬಘೇಲ್‌: ಶುಭಂ ಸೋನಿ

By Kannadaprabha News  |  First Published Nov 6, 2023, 8:59 AM IST

ಮಹದೇವ ಬೆಟ್ಟಿಂಗ್‌ ಆ್ಯಪ್‌ನ ಪ್ರವರ್ತಕರು, ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಘೇಲ್‌ಗೆ 508 ಕೋಟಿ ರು. ಕೊಟ್ಟಿದ್ದಾರೆ ಎಂಬ ಜಾರಿ ನಿರ್ದೇಶನಾಲಯದ ಮೂಲಗಳ ಮಾಹಿತಿ ನಡುವೆಯೇ, ದುಬೈಗೆ ಪರಾರಿಯಾಗುವಂತೆ ತನಗೆ ಹೇಳಿದ್ದೇ ಬಘೇಲ್‌ ಎಂದು ಆ್ಯಪ್‌ನ ಮುಖ್ಯಸ್ಥ ಶುಭಂ ಸೋನಿ (Shubham Soni) ಸ್ಫೋಟಕ ಹೇಳಿಕೆ ನೀಡಿದ್ದಾನೆ.


ನವದೆಹಲಿ: ಮಹದೇವ ಬೆಟ್ಟಿಂಗ್‌ ಆ್ಯಪ್‌ನ ಪ್ರವರ್ತಕರು, ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಘೇಲ್‌ಗೆ 508 ಕೋಟಿ ರು. ಕೊಟ್ಟಿದ್ದಾರೆ ಎಂಬ ಜಾರಿ ನಿರ್ದೇಶನಾಲಯದ ಮೂಲಗಳ ಮಾಹಿತಿ ನಡುವೆಯೇ, ದುಬೈಗೆ ಪರಾರಿಯಾಗುವಂತೆ ತನಗೆ ಹೇಳಿದ್ದೇ ಬಘೇಲ್‌ ಎಂದು ಆ್ಯಪ್‌ನ ಮುಖ್ಯಸ್ಥ ಶುಭಂ ಸೋನಿ (Shubham Soni) ಸ್ಫೋಟಕ ಹೇಳಿಕೆ ನೀಡಿದ್ದಾನೆ.

ಈ ಕುರಿತು ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಸೋನಿ, ಮಹದೇವ ಬೆಟ್ಟಿಂಗ್‌ ಆ್ಯಪ್‌ನ (Mahadev Betting App) ನಿಜವಾದ ಮಾಲಿಕ ನಾನೇ. ಪ್ರಕರಣ ಬೆಳಕಿಗೆ ಬಂದ ಬಳಿಕ ದುಬೈಗೆ ತೆರಳುವಂತೆ ನನಗೆ ಸೂಚಿಸಿದ್ದೇ ಬಘೇಲ್‌. ಅವರ ಸೂಚನೆ ಅನ್ವಯವೇ ನಾನು ದುಬೈಗೆ ತೆರಳಿದ್ದೆ ಎಂದು ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.

Tap to resize

Latest Videos

ಕರ್ನಾಟಕ ಸೇರಿ ದೇಶವ್ಯಾಪಿ ದಾಳಿಗೆ ಸಂಚು: 7 ಶಂಕಿತ ಐಸಿಸ್‌ ಉಗ್ರರ ವಿರುದ್ಧ ಚಾರ್ಜ್‌ಶೀಟ್‌

ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ (Chhattisgarh assembly elections) ಮೊದಲ ಹಂತದ ಮತದಾನ ನ.7ರಂದು ನಡೆಯಲಿದ್ದು, ಅದಕ್ಕೆ ಎರಡು ದಿನ ಮೊದಲು ಸ್ವತಃ ಮುಖ್ಯಮಂತ್ರಿ ವಿರುದ್ಧವೇ ಈ ಗಂಭೀರ ಆರೋಪ ಕೇಳಿಬಂದಿದೆ. ಮಹದೇವ ಬೆಟ್ಟಿಂಗ್‌ ಆ್ಯಪ್‌ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿರುವ ಇ.ಡಿ. ಅಧಿಕಾರಿಗಳು ಅದರಲ್ಲಿ ಶುಭಂ ಸೋನಿಯನ್ನು ಪ್ರಮುಖ ಆರೋಪಿಯಾಗಿ ಪರಿಗಣಿಸಿದ್ದು, ಆತ ತಲೆ ಮರೆಸಿಕೊಂಡಿದ್ದಾನೆ.

ಅಯೋಧ್ಯೆ ರಾಮಮಂದಿರದಲ್ಲಿ ಅಕ್ಷತೆ ಪೂಜೆ: ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ

click me!