ಆಧುನಿಕ ಸತಿ ಸಾವಿತ್ರಿ, ಅರಣ್ಯದೊಳಕ್ಕೆ ನುಗ್ಗಿ ಗಂಡನ ಬಿಡಿಸಿಕೊಂಡು ಬಂದ ಸುನೀತಾ!

Published : May 13, 2020, 10:58 PM ISTUpdated : May 13, 2020, 11:01 PM IST
ಆಧುನಿಕ ಸತಿ ಸಾವಿತ್ರಿ, ಅರಣ್ಯದೊಳಕ್ಕೆ ನುಗ್ಗಿ ಗಂಡನ ಬಿಡಿಸಿಕೊಂಡು ಬಂದ ಸುನೀತಾ!

ಸಾರಾಂಶ

ಗಂಡನ ರಕ್ಷಣೆ ಮಾಡಿದ ಆಧುನಿಕ ಸತಿ ಸಾವಿತ್ರಿ/  ಮಾವೋ ವಾದಿಗಳಿಂದ ಗಂಡನ ಕಾಪಾಡಿದ ಸುನೀತಾ/ ಲೋಕ ಅದಾಲತ್ ಕಾರಣಕ್ಕೆ ಪೊಲೀಸ್ ಅಧಿಕಾರಿ ಅಪಹರಿಸಿ ಅರಣ್ಯಕ್ಕೆ ಕರೆದೊಯ್ದಿದ್ದ ಮಾವೋಗಳು

ರಾಯಪುರ(ಮೇ 13) ಸಾವಿತ್ರಿಯ ಕತೆಯನ್ನು ಬಹಳ ಜನ ಕೇಳಿಯೇ ಇರುತ್ತೀರಿ. ಇದು ಸಹ ಅಂಥದ್ದೇ ಒಂದು ಉದಾಹರಣೆ.  ಮಾವೋಗಳ ಕೈಗೆ ಸಿಕ್ಕಿದ್ದ ಪೊಲೀಸ್ ಅಧಿಕಾರಿಯನ್ನು ಆತನ ಹೆಂಡತಿ ಮತ್ತು ಸ್ಥಳೀಯರು ಸೇರಿ ರಕ್ಷಣೆ ಮಾಡಿದ್ದಾರೆ.   ಛತ್ತೀಸ್ ಘಡದ ಬಿಜಾಪುರ್ ಜಿಲ್ಲೆಯ ಘಟನೆ ಇದು.  ಅರಣ್ಯ ಹಕ್ಕುಗಳಿಗೆ ಸಂಬಂಧಿಸಿದ ಜನ್ ಅದಾಲತ್ ಕಾರಣಕ್ಕೆ ಈ ಘಟನೆಯಾಗಿದೆ. 

48 ವರ್ಷದ ಸಂತೋಷ್ ಕಟ್ಟಮ್ ಪೊಲೀಸ್ ಇಲಾಖೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದವರು.  ಇವರನ್ನು ಅಪಹರಿಸಿತ ಮಾವೋಗಳು ದಟ್ಟ ಅರಣ್ಯದೊಳಕ್ಕೆ ಎಳೆದು ಒಯ್ದಿದ್ದರು. ಅಲ್ಲದೇ ಈ ಪೊಲೀಸ್ ಸಿಬ್ಬಂದಿಗೆ ಅಂತ್ಯ ಎಂದು ಸಾರಿದ್ದರು.

ಕೇಂದ್ರದ ಪ್ಯಾಕೇಜ್ ನಲ್ಲಿ ಯಾರ ಪಾಲು ಎಷ್ಟು?

ಮೇ 4 ರಂದೇ ಪೊಲೀಸ್ ಅಧಿಕಾರಿಯ ಅಪಹಣವಾಗಿತ್ತು. ಆದರೆ ಇತ್ತ ಗಂಡನ ಜೀವ ಉಳಿಸಿಕೊಳ್ಳಲು ಪಣ ತೊಟ್ಟ ಹೆಂಡತಿ ಹಳ್ಳಿಗರೊಂದಿಗೆ ಅರಣ್ಯದ ಒಳಕ್ಕೆ ನುಗ್ಗಿದ್ದರು. 

ಇದಾದ ಮೇಲೆ  ಜನ್ ಅದಾಲತ್ ನಲ್ಲಿ ಈತ ತಮ್ಮ ಪರವಾಗಿ ನಿಲ್ಲಬೇಕು ಎಂಬ ಬೇಡಿಕೆಯನ್ನು ಮಹಿಳೆ ಬಳಿ ಇಟ್ಟರು. ಮಹಿಳೆ ಸುನೀತಾ ನನ್ನ ಗಂಡ ಪೊಲೀಸ್ ಕೆಲಸವನ್ನು ತ್ಯಜಿಸುತ್ತಾರೆ. ಅವರ ಪ್ರಾಣಕ್ಕೆ ಏನು ಮಾಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರು. 

ಇದಾದ  ಮೇಲೆ  ಮಹಿಳೆ ಸ್ಥಳೀಯ ಮಾಧ್ಯಮದ ಮುಂದೆಯೂ ಬಂದಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿ ಹೋಗಿದೆ.  ಸದ್ಯ ಹೆಂಡತಿ ಮತ್ತು ಸ್ಥಳೀಯರು ಹಾಗೂ ಪೊಲೀಸರ ನೆರವಿನಲ್ಲಿ ಅಧಿಕಾರಿಯನ್ನು ರಕ್ಷಣೆ ಮಾಡಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?