ರೌಡಿಯ ಹತ್ಯೆಗೆ ಪ್ರೇಮದ ಬಲೆ: ನಂಬಿಸಿ ಕೊಂದ ಸುಂದರಿ ಮಾಡೆಲ್ ಅಂದರ್‌

Published : Sep 19, 2023, 01:45 PM IST
ರೌಡಿಯ ಹತ್ಯೆಗೆ ಪ್ರೇಮದ ಬಲೆ: ನಂಬಿಸಿ ಕೊಂದ ಸುಂದರಿ ಮಾಡೆಲ್ ಅಂದರ್‌

ಸಾರಾಂಶ

ಯುವ ರೌಡಿಯೊರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಮಿಜೋರಾಂ ಮೂಲದ ಯುವತಿ ಹಾಗೂ ಆಕೆಯ ಗೆಳೆಯನನ್ನು ಬಂಧಿಸಿದ್ದು, ಈ ಕೊಲೆಯ ಹಿಂದೆ ರೋಚಕ ಕಹಾನಿ ಇದೆ.

ಚೆನ್ನೈ: ಯುವ ರೌಡಿಯೊರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಮಿಜೋರಾಂ ಮೂಲದ ಯುವತಿ ಹಾಗೂ ಆಕೆಯ ಗೆಳೆಯನನ್ನು ಬಂಧಿಸಿದ್ದು, ಈ ಕೊಲೆಯ ಹಿಂದೆ ರೋಚಕ ಕಹಾನಿ ಇದೆ. ಚೆನ್ನೈನ 24 ವರ್ಷದ ರೌಡಿ ಸತ್ಯ (Rowdy Satya) ಎಂಬಾತನನ್ನು ಸೆಪ್ಟೆಂಬರ್ 10 ರಂದು ರಾತ್ರಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಚೆನ್ನೈನ ಪುಝಲ್ ಕವಂಕರೈ 15ನೇ ಬೀದಿಯ ನಿವಾಸಿಯಾಗಿದ್ದ ರೌಡಿ ಸತ್ಯನನ್ನು ಚೆನ್ನೈನ ಎಗ್ಮೋರ್‌ನಲ್ಲಿ (Egmore) ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.  ಈತನ ಹತ್ಯೆಯ ಆರೋಪಿಗಳ ಪತ್ತೆಗೆ ಎಗ್ಮೋರ್ ಇನ್ಸ್ ಪೆಕ್ಟರ್ ತಿರುಮಲ್ ನೇತೃತ್ವದಲ್ಲಿ ವಿಶೇಷ ಪಡೆ ರಚಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು  ಬಂಧಿಸಿ ವಿಚಾರಣೆ ನಡೆದ ಪೊಲೀಸರಿಗೆ ಈ ಪ್ರಕರಣಕ್ಕೂ ಮಿಜೋರಾಂ ಮೂಲದ ಮಾಡೆಲ್‌ (Mizoram model) ಒಬ್ಬಳಿಗೂ ಲಿಂಕ್ ಇರುವ ವಿಚಾರ ತಿಳಿದು ಬಂದಿತು. ಈ ವಿಚಾರ ಬೆನ್ನತಿದ್ದ  ಪೊಲೀಸರು ಮಿಜೋರಾಂ ಮೂಲದ ಮಾಡೆಲ್ ಜ್ಯೂಲಿ ಹಾಗೂ ಆತನ ಬಾಯ್‌ಫ್ರೆಂಡ್ ಕಿಶೋರ್ ಎಂಬಾತನನ್ನು ಬಂಧಿಸಿದ್ದು,  ಅಲ್ಲೊಂದು ಸಿನಿಮಾವನ್ನು ಮೀರಿಸುವ ರೋಚಕ ಕ್ರೈಂ ಪ್ರೇಮ ಕಹಾನಿ ಬೆಳಕಿಗೆ ಬಂದಿದೆ. ಅಲ್ಲದೇ ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಕೊಲೆ ನಡೆದಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ. 

2016ರಲ್ಲಿ ಶಿವರಾಜ್ ಎಂಬ ರೌಡಿಯನ್ನು ಚೆನ್ನೈನ (Chennai) ಬೇಸಿನ್‌ ಬ್ರಿಡ್ಜ್‌ನ (Chennai Basin Bridge) ಬಳಿ ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿವರಾಜ್‌ ಮಿತ್ರರು ತಮ್ಮ ಆಪ್ತನ ಕೊಲೆಗೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದರು. ಶಿವರಾಜ್ (Sivaraj) ಕೊಲೆಯಲ್ಲಿ ಭಾಗಿಯಾಗಿದ್ದ ವಕೀಲ ಅಖಿಲನ್ ಹಾಗೂ ನಾಯಿ ರಮೇಶ್‌ನನ್ನು ಈಗಾಗಲೇ ಮುಗಿಸಿದ್ದ ಈ ತಂಡದ ರೌಡಿ ಸತ್ಯ ಜೈಲಿನಿಂದ ಬಿಡುಗಡೆಯಾಗುವುದಕ್ಕೆ ಕಾಯುತ್ತಿತ್ತು.  ಆತ ಬಿಡುಗಡೆಯಾಗುವುದು ತಿಳಿಯುತ್ತಿದ್ದಂತೆ ಈ ಶಿವರಾಜ್‌ ತಂಡ ಆತನನ್ನು ಮುಗಿಸಲು ಪ್ರೇಮದ ಜಾಲವನ್ನು ಹೆಣೆದಿತ್ತು. 

ಹುಡುಗರೇ ಈ ಹಕ್ಕಿ ಮುಂದೆ ನೀವ್ಯಾವ ಲೆಕ್ಕ: ಮನದರಸಿಯ ಒಲಿಸಿಕೊಳ್ಳಲು ಪಡ್ತಿರುವ ಪಾಡು ನೋಡಿ : ವೀಡಿಯೋ

ರೌಡಿಗಳು ಹೆಣೆದ ಪ್ರೇಮದ ಜಾಲಕ್ಕೆ ಪ್ರೇಯಸಿಯಾದ ಜೂಲಿ

ರೌಡಿ ಸತ್ಯನ ಬಲೆಗೆ ಕೆಡವಲು ಪ್ರೇಮ ಜಾಲ ಹೆಣೆದ ವಿರೋಧಿ ಶಿವರಾಜ್ ಬಣ ಇದಕ್ಕೆ ಮೀಜೋರಾಂ ಮೂಲದ ಜೂಲಿಯನ್ನು ಬಳಸಿಕೊಂಡಿತ್ತು. ಶಿವರಾಜ್ ಬಣದ ಅಣತಿಯಂತೆ ಪ್ರೀತಿಯ ನಾಟಕವಾಡಿ ರೌಡಿ ಸತ್ಯನನ್ನು ಬಲೆಗೆ ಕೆಡವಿದ ಜ್ಯೂಲಿ ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು. ಫೋನ್ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿಯೂ ಆತನೊಂದಿಗೆ ಟಚ್‌ನಲ್ಲಿದ್ದ ಜ್ಯೂಲಿ ಆತನನ್ನು  ಮನಸಾರೆ ಪ್ರೀತಿಸುವುದಾಗಿ ನಟಿಸುತ್ತಿದ್ದಳು.  ಸುಂದರವಾದ ಹೆಣ್ಣೊಬ್ಬಳು ಬಂದು ಪ್ರೇಮಿಸುವೆ ಎಂದು ಹಿಂದೆ ಬಿದ್ದರೆ ಯಾವ ಗಂಡು ತಾನೇ ಬೇಡ ಎನ್ನುತ್ತಾನೆ. ಅದೇ ರೀತಿ ಇಲ್ಲಿ ಜ್ಯೂಲಿಯ ಪ್ರೇಮ ನಿವೇದನೆಗೆ ಕರಗಿದ್ದ ಸತ್ಯ, ಆಕೆ ತನ್ನನ್ನು ಪ್ರೀತಿಸುತ್ತಾಳೆ ಎಂದು ಬಲವಾಗಿ ನಂಬಿದ್ದ. ಇದೇ ಆತ ಮಾಡಿದ ತಪ್ಪು..

ಕಳೆದ ಸೆಪ್ಟೆಂಬರ್ 8 ರಂದು  ಸತ್ಯನಿಂದ ಕೊಲೆಯಾಗಿದ್ದ ಶಿವರಾಜ್‌ ಹತ್ಯೆಯಾದ ದಿನವಾಗಿದ್ದು, ಅಂದೇ ಶಿವರಾಜ್ ಆಪ್ತರು ಸತ್ಯನ ಹತ್ಯೆಗೆ ಜಾಲ ಹೆಣೆದಿದ್ದರು. ಅಂದು ಜ್ಯೂಲಿ ಸತ್ಯಗೆ ಕರೆ ಮಾಡಿ ಮಾತನಾಡಿದ್ದು, ಇಗ್ಮೋರೆಗೆ ಬರುವಂತೆ ಮನವಿ ಮಾಡಿದ್ದಳು. ಆದರೆ ಸೆಪ್ಟೆಂಬರ್‌ 8 ರಂದು ಬಾರದ ಆತ ಜ್ಯೂಲಿ ಮನವಿಯಂತೆ ಸೆಪ್ಟೆಂಬರ್ 10 ರ ರಾತ್ರಿ ಜ್ಯೂಲಿಯನ್ನು ನೋಡಲು ಇಗ್ಮೋರೆಗೆ ಆಗಮಿಸಿದ್ದ. ಅದು ಕೇವಲ ಫೋನ್‌ನಲ್ಲಿ ಮಾತ್ರ ಸಂಪರ್ಕದಲ್ಲಿದ್ದ ಜ್ಯೂಲಿ ಹಾಗೂ ರೌಡಿ ಸತ್ಯನ ಮೊದಲ ಭೇಟಿ ಅದಾಗಿತ್ತು. ಇದೇ ವೇಳೆ ಸತ್ಯಗೆ ಸ್ಕೆಚ್ ಹಾಕಿದ ಶಿವರಾಜ್ ಬಣ ಅವನ್ನು ಕಟ್ಟಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದರು. 

ಕೆಣಕಿದವರ ಸುಮ್ಮನೆ ಬಿಡಲ್ಲ, 5 ದಿನದಲ್ಲಿ ದೇಶ ಬಿಟ್ಟು ಹೋಗಿ: ಕೆನಡಾ ಏಟಿಗೆ ಭಾರತದ ಎದಿರೇಟು

ಸತ್ಯನನ್ನು ಪ್ರೀತಿಸುವ ಕಪಟ ನಾಟಕವಾಡಿ ಆತನ ಹತ್ಯೆಗೆ ಸಹಕರಿಸಿದ ಜ್ಯೂಲಿಯನ್ನು ಹಾಗೂ ಆಕೆಯ ಬಾಯ್‌ಫ್ರೆಂಡ್ ಕಿಶೋರ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 9 ಜನರ ಬಂಧನವಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?