1364 ಜೀವಂತ ನಕ್ಷತ್ರ ಆಮೆಗಳ ಜಪ್ತಿ
ಮಲೇಷ್ಯಾಕ್ಕೆ ಕಳ್ಳಸಾಗಣೆ ಮಾಡಲು ಯತ್ನ
ಚೆನ್ನೈ ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ
ಚೆನ್ನೈ(ಜ.5): ಚೆನ್ನೈ ವಿಮಾನ ನಿಲ್ದಾಣದಲ್ಲಿ ಭಾರಿ ಪ್ರಮಾಣದ ಕಳ್ಳ ಸಾಗಣೆ ಜಾಲವನ್ನು ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳು ಬೇಧಿಸಿದ್ದು, ಲಕ್ಷಾಂತರ ರೂಪಾಯಿ ಮೊತ್ತದ ಕಡಲಾಮೆ ಅಥವಾ ನಕ್ಷತ್ರ ಆಮೆಗಳನ್ನು ಜಪ್ತಿ ಮಾಡಿದ್ದಾರೆ. ಒಟ್ಟು 1364 ಜೀವಂತ ನಕ್ಷತ್ರ ಆಮೆಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬಿಳಿ ಬಣ್ಣದ ಥರ್ಮಕೋಲ್ ಬಾಕ್ಸ್‌ಗಳಲ್ಲಿ ಇವುಗಳನ್ನು ತುಂಬಿಡಲಾಗಿತ್ತು. ಇದನ್ನು ತೆರೆದು ನೋಡಿದ ಕಸ್ಟಮ್ ಅಧಿಕಾರಿಗಳು ಇಷ್ಟು ಪ್ರಮಾಣದ ನಕ್ಷತ್ರ ಆಮೆಗಳನ್ನು ನೋಡಿ ಅಚ್ಚರಿ ಗೊಂಡಿದ್ದಾರೆ. ಈ ನಕ್ಷತ್ರ ಆಮೆಗಳನ್ನು 230 ಕಿ.ಲೋ ತೂಕದ ಜೀವಂತ ಏಡಿಗಳು ಎಂದು ಮೊದಲಿಗೆ ಹೇಳಲಾಗಿತ್ತು.
ಜನವರಿ 4 ರಂದು ಚೆನ್ನೈ(Chennai) ಏರ್ ಕರ್ಗೋ ಕಸ್ಟಮ್ಸ್ ಅಧಿಕಾರಿಗಳು ಚೆನ್ನೈ ವಿಮಾನ ನಿಲ್ದಾಣದ ಸಮೀಪವಿರುವ ಮೀನಂಬಾಕ್ಕಂ (Meenambakkam) ನಲ್ಲಿರುವ ಏರ್ ಕಾರ್ಗೋ ರಫ್ತು ಶೆಡ್‌ನಲ್ಲಿ ವನ್ಯಜೀವಿ ಪ್ರಭೇದಗಳನ್ನು ಹೊಂದಿರುವ ಡಬ್ಬಿಗಳಿರುವ ಬಗ್ಗೆ ಶಂಕಿಸಿ ಅವುಗಳ ರವಾನೆಯನ್ನು ತಡೆದಿದ್ದಾರೆ. ಈ ನಕ್ಷತ್ರ ಆಮೆಗಳನ್ನು ಮಲೇಷ್ಯಾಕ್ಕೆ ಕಳುಹಿಸಲು ನಿರ್ಧರಿಸಲಾಗಿತ್ತು ಎಂದು ತಿಳಿದು ಬಂದಿದೆ.
21 ಆಮೆ, ಲ್ಯಾಬ್ರಡಾರ್ ವರದಕ್ಷಿಣೆ ಕೇಳಿದ ವರ..!
ಶಿಪ್ಪಿಂಗ್ ಬಿಲ್‌ನಲ್ಲಿ, ಈ ನಕ್ಷತ್ರ ಆಮೆಗಳಿದ್ದ ಸರಕುಗಳನ್ನು 230 ಕಿಲೋ ತೂಕದ ಜೀವಂತ ಏಡಿಗಳು ಎಂದು ಘೋಷಿಸಲಾಗಿತ್ತು. ಸಬ್ಜೆಕ್ಟ್ ಶಿಪ್‌ಮೆಂಟ್ ಎಂಬುದು ರಿಸ್ಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (RMS) ಅನ್ನು ಸುಗಮಗೊಳಿಸುವಂತಾದ್ದಾಗಿದ್ದು, ಇದರ ಪ್ರಕಾರ ಇಲ್ಲಿ ಸರಕುಗಳನ್ನು ತಪಾಸಣೆಗೆ ಒಳಪಡಿಸುವುದಿಲ್ಲ. ಅದಾಗ್ಯೂ ಶಂಕೆ ಬಂದ ಹಿನ್ನೆಲೆಯಲ್ಲಿ ಚೆನ್ನೈ ಏರ್‌ಪೋರ್ಟ್‌ನ ಕಾರ್ಗೋ ಇಂಟೆಲಿಜೆನ್ಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಸರಕುಗಳನ್ನು ಪರಿಶೀಲಿಸಿದರು. ಈ ವೇಳೆ 13 ಪ್ಯಾಕೇಜ್‌ಗಳಲ್ಲಿ 7 ಪ್ಯಾಕೇಜ್‌ಗಳಲ್ಲಿ 1,364 ಜೀವಂತ ಭಾರತೀಯ ನಕ್ಷತ್ರ ಆಮೆಗಳು ಇರುವುದು ಅವರಿಗೆ ತಿಳಿದು ಬಂದಿದೆ.
ಹಾರುವ ಗೋಲ್ಡನ್ ಆಮೆ ಕಂಡು ಬೆರಗಾದ ಮಂದಿ, ವೈರಲ್ ಆಯ್ತು ವಿಡಿಯೋ!
ಜಪ್ತಿ ಮಾಡಿದ ಜೀವಂತ ಸ್ಟಾರ್ ಆಮೆಗಳನ್ನು ಅವುಗಳ ನೈಸರ್ಗಿಕ ಆವಾಸ ಸ್ಥಾನದಲ್ಲಿ ಪುನರ್ವಸತಿ ಕಲ್ಪಿಸಲು ತಮಿಳುನಾಡು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ನಕ್ಷತ್ರ ಆಮೆಗಳನ್ನು ಅಳಿವಿನಂಚಿನಲ್ಲಿರುವ ಪ್ರಭೇದಗಳು ಎಂದು ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶದಲ್ಲಿ ( CITES) ಅನುಬಂಧ 1ರ ಅಡಿ ಪಟ್ಟಿ ಮಾಡಲಾಗಿದೆ.
ವಾಸ್ತುವಿನಲ್ಲಿ ಆಮೆಗೆ ಅಪಾರ ಮಹತ್ವವಿದೆ. ಆಮೆಯು ಒಂದು ಜೀವಿಯಾಗಿ ದೀರ್ಘಾಯುಷ್ಯವನ್ನು ಹೊಂದಿದೆ ಮತ್ತು ಆದ್ದರಿಂದ ವಾಸ್ತುವಿನಲ್ಲಿ, ಇದು ದೀರ್ಘಾಯುಷ್ಯವನ್ನು ಸೂಚಿಸುತ್ತದೆ. ವಾಸ್ತು ಶಾಸ್ತ್ರದಲ್ಲಿ ಆಮೆ ದೀರ್ಘಾಯುಷ್ಯಕ್ಕೆ ಸಮಾನಾರ್ಥಕವಾಗಿದೆ. ಪುರಾಣಗಳ ಪ್ರಕಾರ, ಸಾಗರ ಮಂಥನ ಸಮಯದಲ್ಲಿ ಭೂಮಿಯನ್ನು ಎತ್ತಿಹಿಡಿಯಲು ಭಗವಾನ್ ವಿಷ್ಣುವು ಆಮೆ(Tortoise) ಅಥವಾ ಕುರ್ಮಾ ಅವತಾರವನ್ನು ತೆಗೆದುಕೊಂಡನು. ಇದು ಕೃಷ್ಣನ ಹತ್ತು ಅವತಾರಗಳಲ್ಲಿ ಒಂದಾಗಿದೆ. ಆಮೆ ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
ರೆಸಿನ್ , ಲೋಹ, ಗಾಜು, ಮಣ್ಣು, ಹರಳುಗಳು ಅಥವಾ ಮರದಿಂದ ಮಾಡಿದ ಆಮೆಯನ್ನು ಮನೆ ಮತ್ತು ಕಚೇರಿಯಲ್ಲಿ ಇರಿಸಬೇಕು. ಸುತ್ತಮುತ್ತಲಿನ ಪ್ರದೇಶದಲ್ಲಿ ಆಮೆಯನ್ನು ಇರಿಸಲು ಕೆಲವು ವಾಸ್ತು (Vaastu) ಸಲಹೆಗಳು ಇಲ್ಲಿವೆ. ಅವುಗಳನ್ನು ಪಾಲಿಸಿ ವಾಸ್ತು ದೋಷ ನಿವಾರಿಸಿ. ಲೋಹ (Metal)ದ ಆಮೆಯನ್ನು ಮನೆಯ ಉತ್ತರ (North) ಮತ್ತು ವಾಯುವ್ಯ ದಿಕ್ಕಿನಲ್ಲಿ ಇರಿಸಬೇಕು. ರೆಸಿನ್ ಅಥವಾ ಮಣ್ಣಿನಿಂದ ಮಾಡಿದ ಆಮೆಯನ್ನು ಈಶಾನ್ಯ, ಕೇಂದ್ರ ಅಥವಾ ಮನೆಯ ನೈಋತ್ಯ ಭಾಗದಲ್ಲಿ ಇರಿಸಬೇಕು. ಇದು ಮನೆಯಲ್ಲಿ ನೆಮ್ಮದಿಯನ್ನು ತರುವುದರ ಸಂಕೇತವಾಗಿದೆ.
ಮನೆಯಲ್ಲಿ ಏನಾದರೂ ಸಮಸ್ಯೆಗಳು ಕಾಣಿಸಿಕೊಂಡಿವೆಯೇ? ಹಾಗಿದ್ರೆ ರೆಸಿನ್ ಹರಳುಗಳಿಂದ ಮಾಡಿದ ಆಮೆಯನ್ನು ನೈಋತ್ಯ ಅಥವಾ ವಾಯುವ್ಯದಲ್ಲಿ ಇರಿಸಬೇಕು. ಮರ(Wood)ದ ಆಮೆಯನ್ನು ಪೂರ್ವದಲ್ಲಿ ಅಥವಾ ಆಗ್ನೇಯದಲ್ಲಿ ಇರಿಸಬೇಕು.