ಯೋಗಿ ಮಹತ್ವಾಕಾಂಕ್ಷೆ, ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಮಹತ್ವದ ಬದಲಾವಣೆ!

By Suvarna NewsFirst Published Dec 14, 2020, 4:54 PM IST
Highlights

ರಾಮ ಮಂದಿರ ವಿಚಾರವಾಗಿ ಮಹತ್ವದ ಬದಲಾವಣೆ| ಎಪ್ಪತ್ತು ಎಕರೆಡ ಅಲ್ಲ, ರಾಮ ಮಂದಿರ ನಿರ್ಮಾಣ ಪ್ರದೇಶ ವಿಸ್ತರಿಸಲು ಚಿಂತನೆ| ಚರ್ಚೆ, ಮಾತುಕತೆ ಬಳಿಕ ಈ ನಿರ್ಧಾರ

ಅಯೋಧ್ಯೆ(ಡಿ.14): ರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣ ಸಂಬಂಧ ಹಲವಾರು ಸುತ್ತಿನ ಚರ್ಚೆ, ಮಾತುಕತೆಯ ಬಳಿಕ ಇಡೀ ಕ್ಯಾಂಪಸ್ ಅನ್ನು ಹೊಸದಾಗಿ ವಿಸ್ತರಿಸಲು ಈಗ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಎಪ್ಪತ್ತು ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲು ಯೋಚಿಸಿದ್ದ ಮಂದಿರದ ಆವರಣವನ್ನು 108 ಎಕರೆ ಪ್ರದೇಶಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ.  ಇದಕ್ಕಾಗಿ ದೇಗುಲದ ಆಸುಪಾಸಿನ ಈ ಪ್ರದೇಶದಲ್ಲಿರುವ ಮನೆ, ಜಮೀನನ್ನು ಖರೀದಿಸುವ ಹಾಗೂ ದಾನವಾಗಿ ಪಡೆದುಕೊಳ್ಳುವ ಪ್ರಕ್ರಿಯೆ ಆರಂಭಗೊಂಡಿದೆ. ಕಮಿಷನರ್, ಡಿಎಂ, ಎಸ್‌ಡಿಎಂ, ಮೇಯರ್, ನಗರ ಆಯುಕ್ತ ಹಾಗೂ ರಾಮ್‌ಕೋಟ ಕ್ಷೇತ್ರದ ಕೌನ್ಸಿಲರ್ ರಮೇಶ್ ದಾಸ್ ತಪಾಸಣೆ ಆರಂಭಿಸಿದ್ದಾರೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಕೋಶಾಧಿಕಾರಿ ಸ್ವಾಮಿ ಗೋವಿಂದ ದೇವ್‌ಗಿರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ವಾಸ್ತು ಅನ್ವಯ ಪ್ಲಾಟ್‌ ಒಂದು ಸಮತಟ್ಟಾಗಿರಬೇಕು. ಆದರೀಗ ಈ ಪ್ಲಾಟ್ ಹಾಗಿಲ್ಲ., ಹೀಗೆ ಎಲ್ಲಾ ದಿಕ್ಕುಗಳಿಂದ ಇದನ್ನು ಸಮತಟ್ಟು ಮಾಡುವ ನಿಟ್ಟಿನಲ್ಲಿ ಕೆಲಸ ಆರಂಭವಾಗಿದೆ. ದೇವಾಲಯದ ಸರ್ಕ್ಯೂಟ್ ಕೆಲಸ ಮೊದಲ ಹಂತದಲ್ಲಿ ನಡೆಯಲಿದೆ. ಇದರ ಹೊರಗಿನ ಎಪ್ಪತ್ತು ಎಕರೆ ಪ್ರದೇಶದ ಅಭಿವೃದ್ಧಿ ಎರಡನೇ ಹಾಗೂ ಮೂರನೇ ಹಂತದಲ್ಲಿ ನಡೆಡಯಲಿದೆ ಎಂದಿದ್ದಾರೆ.

ರಾಮಮಂದಿರ ನಿಧಿ ಸಂಗ್ರಹಕ್ಕೆ ಉದ್ಯಮಿಗಳ ಸಮಾವೇಶ: ಪೇಜಾವರ ಶ್ರೀ ಸಾರಥ್ಯ

ಇಡೀ ನಗರ ಮಂದಿರದಂತೆ ಕಾಣಬೇಕು

ಯಾವ ರೀತಿ ಮಂದಿರ ನಿರ್ಮಾಣವಾಗುತ್ತದೋ ಅದೇ ರೀತಿ ನಗರದಲ್ಲಿರುವ ಕಟ್ಟಡಗಳನ್ನೂ ನಿರ್ಮಿಸಲಾಗುತ್ತದೆ. ಆದರೆ ಇದು ಆಡಳಿತ ಅಧಿಕಾರಿಗಳ ಕೆಲಸವಾಗಿದೆ. ಹೊರಗಿನ ಮಾರ್ಗಗಳು ದೇವಾಲಯಕ್ಕೆ ಹೊಂದಿಕೊಂಡಿರಬೇಕು. ಹೊರಗಿನ ಕಟ್ಟಡಗಳು ದೇಗುಲದ ಪ್ರಭಾವ ಹಾಗೂ ಸೌಂದರ್ಯ ಕಡಿಮೆಗೊಳಿಸಬಾರದು, ಈ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಸಭೆಯೂ ನಡೆದಿದೆ. ಇಡೀ ನಗರ ಮಂದಿರದಂತೆ ಕಾಣುವ ನಿಟ್ಟಿನಲ್ಲಿ ಇಂತಹುದ್ದೊಂದು ಸಲಹೆ ನೀಡಿದ್ದಾರೆನ್ನಲಾಘಿದೆ.
 

click me!