Nehru Point in Moon: ಭೂಮಿಯ ಮೇಲೆ ಇಂದಿರಾ ಪಾಯಿಂಟ್‌, ಚಂದ್ರನ ಮೇಲಿದೆ ನೆಹರು ಪಾಯಿಂಟ್‌!

Published : Aug 24, 2023, 04:13 PM ISTUpdated : Aug 24, 2023, 04:17 PM IST
Nehru Point in Moon: ಭೂಮಿಯ ಮೇಲೆ ಇಂದಿರಾ ಪಾಯಿಂಟ್‌, ಚಂದ್ರನ ಮೇಲಿದೆ ನೆಹರು ಪಾಯಿಂಟ್‌!

ಸಾರಾಂಶ

ಚಂದ್ರಯಾನ-3 ಸಾಫ್ಟ್‌ ಲ್ಯಾಂಡಿಂಗ್‌ ಆದ ಬೆನ್ನಲ್ಲಿಯೇ ಅದರ ಕ್ರೆಡಿಟ್‌ ವಾರ್‌ ಕೂಡ ಶುರುವಾಗಿದೆ. ಕಾಂಗ್ರೆಸ್‌ ಈ ಸಾಧನೆಗೆಲ್ಲಾ ಇಸ್ರೋ ಸ್ಥಾಪನೆ ಮಾಡಿದ ನೆಹರೂ ಅವರೇ ಕಾರಣ ಎಂದಿದ್ದಲ್ಲದೆ, ಚಂದ್ರಯಾನ-3 ಸಾಫ್ಟ್‌ ಲ್ಯಾಂಡ್‌ ಆದ ಬೆನ್ನಲ್ಲಿಯೇ ಪ್ರಧಾನಿ ಮೋದಿ ಮಾತನಾಡಿದ್ದಕ್ಕೂ ವ್ಯಂಗ್ಯವಾಡಿದೆ.  

ನವದೆಹಲಿ (ಆ.24):ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ, ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣ, ಕೋಲ್ಕತ್ತಾದ ನೆಹರು ಮಕ್ಕಳ ವಸ್ತುಸಂಗ್ರಹಾಲಯ, ಕೋಲ್ಕತ್ತಾದ ಜವಾಹರಲಾಲ್ ನೆಹರು ರಸ್ತೆ.. ಹೀಗೆ ಭಾರತದ ವಿವಿಧ ಭಾಗಗಳಲ್ಲಿ ದೇಶದ ಮೊದಲ ಪ್ರಧಾನಿಯವರ ಹೆಸರಿನ ಸಂಸ್ಥೆಗಳು, ಕ್ರೀಡಾಂಗಣಗಳು ಮತ್ತು ವಿಶ್ವವಿದ್ಯಾಲಯಗಳಿವೆ. ದೇಶದಲ್ಲಿ ಮಾತ್ರವಲ್ಲ, ಚಂದ್ರನಲ್ಲೂ ಕೂಡ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಹೆಸರಿನ ವಿಶೇಷ ಸ್ಥಾನವಿದೆ. 2008ರಲ್ಲಿ ಈ ಸ್ಥಳಕ್ಕೆ ನೆಹರೂ ಅವರ ಹೆಸರನ್ನು ಇಡಲಾಗಿದೆ. ಆ ಸಮಯದಲ್ಲಿ ಚಂದ್ರನ ಮೇಲೆ ಭಾರತ ಚಂದ್ರಯಾನ-1ರ ಮೂನ್‌ ಇಂಪ್ಯಾಕ್ಟರ್‌ ಪ್ರೋಬ್‌ಅನ್ನು ಅಪ್ಪಳಿಸುವ ಮೂಲಕ ಚಂದ್ರನನ್ನು ಮೊದಲ ಬಾರಿಗೆ ಮುಟ್ಟಿತ್ತು. 2008ರ ನವೆಂಬರ್‌ 14 ರಂದು ಎಂಐಪಿಯನ್ನು ಚಂದ್ರನ ನೆಲದ ಮೇಲೆ ಅಪ್ಪಳಿಸಿತ್ತು. ಅಂದು ಭಾರತದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಈ ಸ್ಥಳಕ್ಕೆ ಜವಾಹರ್‌ ಪಾಯಿಂಟ್‌ ಎಂದು ಹೆಸರಿಡಲು ತೀರ್ಮಾನ ಮಾಡಲಾಗಿತ್ತು.

ಚಂದ್ರಯಾನ-1 ಎನ್ನುವುದು ಮೊದಲಿಗೆ ಕೇವಲ ಆರ್ಬಿಟರ್‌ಅನ್ನು ಚಂದ್ರನ ಕಕ್ಷಗೆ ಕಳಿಸುವ ಯೋಜನೆಯಾಗಿತ್ತು. ಆದರೆ, ಅಂದಿನ ರಾಷ್ಟ್ರಪತಿಯಾಗಿ ವಿಜ್ಞಾನಿ ಎಪಿಜೆ ಅಬ್ದುಲ್‌ ಕಲಾಂ ಅವರು ಇಸ್ರೋ ಸಭೆಯಲ್ಲಿ ಭಾಗವಹಿಸಿದ್ದ ವೇಳೆ, ಚಂದ್ರನ ಕಕ್ಷೆಯವರೆಗೆ ಹೋಗುತ್ತಿದ್ದೇವೆ. ಅಷ್ಟು ದೂರವೇ ಹೋಗುತ್ತಿರುವಾಗ ಚಂದ್ರನ ಮೇಲೆ ನಮ್ಮದೊಂದು ಮಾರ್ಕ್‌ ಮೂಡಿಸುವುದು ಒಳ್ಳೆಯದು ಎಂದು ಸಲಹೆ  ನೀಡಿದ್ದರು. ಅದರ ಬೆನ್ನಲ್ಲಿಯೇ ಇಸ್ರೋ ಮೂನ್‌ ಇಂಪ್ಯಾಕ್ಟರ್‌ ಪ್ರೋಬ್‌ (ಎಂಐಪಿ) ಕಳಿಸುವ ತೀರ್ಮಾನ ಮಾಡಿತ್ತು.

2008ರ ನವೆಂಬರ್‌  14 ರಂದು ಈ ಎಂಐಪಿ ಚಂದ್ರನ ಮೇಲೆ ಬಿದ್ಧ ಸ್ಥಳವನ್ನು ಜವಾಹರ್‌ ಪಾಯಿಂಟ್‌ ಎಂದು ಹೆಸರಿಸಲಾಗಿದೆ. ಈ ಸ್ಥಳ ಚಂದ್ರನ ದಕ್ಷಿಣ ಧ್ರುವದ ಸನಿಹದಲ್ಲಿರುವ ಶಾಕಲ್ಟನ್ ಕ್ರೇಟರ್‌ನ ಸನಿಹಕ್ಕೆ ಬರುತ್ತದೆ. ಈ ಸ್ಥಳವನ್ನು ಈ ಕೋ ಆರ್ಡಿನೇಟ್‌ ನಂಬರ್‌ 89.76°S 39.40°W ನಲ್ಲಿ (89.76°S 39.40°W on moon) ವೀಕ್ಷಣೆ ಮಾಡಬಹುದು. ಇದೇ  'ಇಂಪ್ಯಾಕ್ಟ್ ಸೈಟ್'ಗೆ 'ಜವಾಹರ್‌ ಪಾಯಿಂಟ್' ಎಂದು ಹೆಸರಿಸಲಾಯಿತು. ಅಂದರೆ, ಚಂದ್ರನ ಮಣ್ಣಿನಲ್ಲಿರುವ 'ಇಂಪ್ಯಾಕ್ಟ್ ಪ್ರೋಬ್' (ಮೂನ್ ಇಂಪ್ಯಾಕ್ಟ್ ಪ್ರೋಬ್ ಅಥವಾ ಎಂಐಪಿ) ಅನ್ನು ಗುರುತಿಸಲು ಈ ಹೆಸರನ್ನು ನೀಡಲಾಗಿದೆ.

ಚಂದ್ರಯಾನ-1 ಎಂಐಪಿ ಕ್ರ್ಯಾಶ್‌ ಆಗಿದ್ದೇಕೆ: ಚಂದ್ರಯಾನ-1 ಎಂಪಿಐನ ಉದ್ದೇಶವೇ ಚಂದ್ರನ ಮೇಲೆ ಕ್ರ್ಯಾಶ್‌ ಲ್ಯಾಂಡ್‌ ಆಗುವುದಾಗಿತ್ತು. ಆ ಮೂಲಕ ಚಂದ್ರನತ್ತ ಹೋದ ಮೊದಲ ಯತ್ನದಲ್ಲಿಯೇ ಚಂದ್ರನ ಮೇಲೆ ಗುರುತು ಮೂಡಿಸುವುದು ಭಾರತದ ಇರಾದೆಯಾಗಿತ್ತು.2008ರ ನವೆಂಬರ್‌ 14 ರಂದು ಅಅಂದಾಜು 25 ನಿಮಿಷಗಳ ಕಾಲ ಚಂದ್ರನ ಕಕ್ಷೆಯಿಂದ ಕೆಳಗೆ ಇಳಿದ ಎಂಐಪಿ 100 ಕಿಲೋಮೀಟರ್‌ ಎತ್ತರದಿಂದ ರಾತ್ರಿ 8.31ರ ಸುಮಾರಿಗೆ ಸೆಕೆಂಡ್‌ಗೆ 1.69 ಕಿಲೋಮೀಟರ್‌ ಅಂದರೆ ಗಂಟೆಗೆ 6100 ಕಿಲೋಮೀಟರ್‌ ವೇಗದಲ್ಲಿ ಶಾಕಲ್ಟನ್ ಕ್ರೇಟರ್ ಅಂದರೆ ಚಂದ್ರನ ದಕ್ಷಿಣ ಧ್ರುವದಲ್ಲಿನ ಪ್ರದೇಶಕ್ಕೆ ಬಂದು ಅಪ್ಪಳಿಸುತ್ತದೆ.

Chandrayaan 3: ಕೊನೆಗೂ ಚಂದ್ರನ ಮೇಲೆ ಇಳಿಯಿತು ಪ್ರಗ್ಯಾನ್‌ ರೋವರ್‌, ಮೂಡಿತು ಇಸ್ರೋ ಚಿತ್ರ! 

ತಾನು ಚಂದ್ರನ ನೆಲಕ್ಕೆ ಅಪ್ಪಳಿಸುವವರೆಗೆ ಎಂಐಪಿ ಸಾಲು ಸಾಲು ಚಿತ್ರಗಳನ್ನು ಇಸ್ರೋಗೆ ಕಳಿಸಿತ್ತು. ಇದರ ಆಧಾರದ ಮೇಲೆಯೇ ಚಂದ್ರನ ನೆಲದ ಮೇಲೆ ನೀರಿನ ಅಂಶವಿದೆ ಎಂದು ಭಾರತ ಮೊಟ್ಟಮೊದಲ ಬಾರಿಗೆ ವಿಶ್ವಕ್ಕೆ ತಿಳಿಸಿತ್ತು. ಇದಾದ ಒಂದು ವರ್ಷದ ಬಳಿಕ ಚಂದ್ರಯಾನ-1ನ ಆರ್ಬಿಟರ್‌ ಕೂಡ ತನ್ನ ಕೆಲಸ ನಿಲ್ಲಿಸಿತ್ತು.

Chandrayaan Mission: ಕನಸು ಕಂಡಿದ್ದು ವಾಜಪೇಯಿ, ನೆಹರು ಜನ್ಮದಿನಕ್ಕೆ ಚಂದ್ರನಲ್ಲಿತ್ತು ಇಸ್ರೋ!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ