
ಲಕ್ನೋ (ಏ.16): ಮೂರು ತಿಂಗಳ ನಂತರ ಮತ್ತೊಮ್ಮೆ ಕಾನ್ಪುರ (Kanpur) ಮತ್ತೆ ಸುದ್ದಿಯಲ್ಲಿದೆ. ಹಮೀರ್‌ಪುರದ (Hamirpur) ತಂಬಾಕು ವ್ಯಾಪಾರಿಗಳ ಕಪ್ಪು ಹಣದ ನೇರ ಸಂಪರ್ಕ ಕಾನ್ಪುರದಿಂದ ಪತ್ತೆಯಾಗಿದೆ. ಬಿರ್ಹಾನಾ ರಸ್ತೆ ಮತ್ತು ನಯಾಗಂಜ್‌ನಲ್ಲಿ ನಡೆದ ದಾಳಿಯ ನಂತರ, ಕೇಂದ್ರ ಜಿಎಸ್‌ಟಿ ಕಾನ್ಪುರದ ತಂಡದಿಂದ ಕೋಟಿಗಟ್ಟಲೆ ನಗದು ವ್ಯವಹಾರವನ್ನು ಭೇದಿಸಲಾಗಿದೆ. ಇದರೊಂದಿಗೆ ಇನ್ನೂ ಹಲವು ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ.
ಏಪ್ರಿಲ್ 12ರ ರಾತ್ರಿ ದಾಳಿ ನಡೆದಿದ್ದು, 6.31 ಕೋಟಿ ರೂಪಾಯಿ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಡ್ ಅಡಿ ರಾಶಿ ರಾಶಿ ಹಣ ಪತ್ತೆಯಾದ ಹಿನ್ನಲೆಯಲ್ಲಿ ಅಧಿಕಾರಿಗಳು ನೋಟು ಎಣಿಸುವ ಯಂತ್ರವನ್ನು ತಂದಿದ್ದರು. ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದ ಮೂವರು ಉದ್ಯೋಗಿಗಳು ನೋಟು ಎಣಿಕೆ ಮಾಡುವ ಯಂತ್ರವನ್ನು ತಂದು ಸುಮಾರು 18 ಗಂಟೆಗಳ ಕಾಲ ಹಣ ಎಣಿಸಿ ಟ್ರಂಕ್ ನಲ್ಲಿ ತುಂಬಿದ್ದಾರೆ. ದಾಳಿ ನಡೆದಿದ್ದ ಅಧಿಕಾರಿಗಳ ತಂಡದ ಜೊತೆಯಿದ್ದ ಜಿಲ್ಲಾಧಿಕಾರಿಗಳು ವಿವರ ನೀಡಲು ನಿರಾಕರಿಸಿದ್ದಾರೆ. ಒಟ್ಟು 15 ಸದಸ್ಯರ ಸಿಜಿಎಸ್ ಟಿ ತಂಡ ಏಪ್ರಿಲ್ 12ರ ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿದರೆ, ಏಪ್ರಿಲ್ 13ರ ಸಂಜೆಯ ವೇಳೆ ದಾಳಿಯನ್ನು ಮುಗಿಸಿದೆ.
ಕೆಲ ತಿಂಗಳ ಹಿಂದೆ ಸುಗಂಧದ್ರವ್ಯದ ವ್ಯಾಪಾರಿ ಪಿಯೂಷ್ ಜೈನ್ ಅವರ ಮನೆಯ ಮೇಲೆ ದಾಳಿ ಮಾಡಲಾಗಿತ್ತು. ಅವರಂತೆ ಜಗತ್ ಗುಪ್ತಾ (Jagat Gupta) ಮತ್ತು ಪ್ರದೀಪ್ ಗುಪ್ತಾ (Pradip Gupta) ಕೂಡ ತುಂಬಾ ಸರಳವಾಗಿ ಬದುಕಿದ್ದರು. ಪೀಯುಷ್ ಜೈನ್ ಅವರಂತೆ, ಗುಪ್ತಾ ಸಹೋದರರು ಕೂಡ ತಮ್ಮ ಮಲಗುವ ಕೋಣೆಯನ್ನು ಕಪ್ಪುಹಣದ ಸ್ಥಳವನ್ನಾಗಿ ಮಾಡಿಕೊಂಡಿದ್ದರು. 20 ಕೋಟಿಗೂ ಹೆಚ್ಚು ವಹಿವಾಟು ನಡೆಯುತ್ತಿದ್ದರೂ ಜಿಎಸ್ ಟಿ ರಿಟರ್ನ್ಸ್ ನಲ್ಲಿ 10ರಿಂದ 15 ಸಾವಿರ ರೂಪಾಯಿ ಮಾತ್ರ ತೋರಿಸುತ್ತಿದ್ದರು.
ಹಾಸಿಗೆಯ ಅಡಿಯಲ್ಲಿ ಕೋಟಿಗಟ್ಟಲೆ ತುಂಬಿಕೊಂಡು ಮಲಗುತ್ತಿದ್ದ ಗುಪ್ತಾ ಸಹೋದರರ ಜೀವನ ಸ್ಥಿತಿ ತುಂಬಾ ಸರಳವಾಗಿದೆ. ಸಿಜಿಎಸ್‌ಟಿ ಮೂಲಗಳ ಪ್ರಕಾರ, ಕೆಳ ಮಧ್ಯಮ ವರ್ಗದ ಕುಟುಂಬಗಳಂತೆ ವಾಸಿಸುವ ಉದ್ಯಮಿಗಳಿಂದ ಕೋಟಿಗಟ್ಟಲೆ ನಗದು ವಶಪಡಿಸಿಕೊಂಡಾಗ ಸ್ಥಳೀಯರಿಗೆ ದೊಡ್ಡ ಮಟ್ಟದ ಅಚ್ಚರಿ ಉಂಟಾಗಿದೆ. ಮನೆಯಲ್ಲಿ ಒಟ್ಟು ನಾಲ್ಕು ಕೋಣೆಗಳಿದ್ದು, ಸಹೋದರರಿಬ್ಬರಿಗೂ ಒಂದೊಂದು ಕೋಣೆಗಳಿವೆ. ಇದಲ್ಲದೇ ಪ್ರತ್ಯೇಕವಾಗಿ ಎರಡು ಚಿಕ್ಕ ಕೋಣೆಗಳಿವೆ. ಸಹೋದರರಿಬ್ಬರೂ ಕೋಟಿಗಟ್ಟಲೆ ವ್ಯವಹಾರ ನಡೆಸುತ್ತಿದ್ದರು ಎನ್ನವುದು ಸ್ಥಳೀಯರ ಮಟ್ಟಿಗೆ ಊಹೆ ಮಾಡುವುದೇ ಕಷ್ಟವಾಗಿದೆ.
IT Raid: ಮಾಡೋದು ಪರ್ಫ್ಯೂಮ್ ಬ್ಯುಸಿನೆಸ್, ಕೋಟಿ ಕುಬೇರ, ಓಡಾಡೋದು ಹಳೇ ಸ್ಕೂಟರ್‌ನಲ್ಲಿ!
95ರಷ್ಟು ವ್ಯವಹಾರ ನಗದಿನಲ್ಲಿ ಅಂದರೆ ನಗದು ರೂಪದಲ್ಲಿ ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ. ಕಾರ್ಖಾನೆಯಿಂದ ನಿತ್ಯ ಎರಡರಿಂದ ಮೂರು ಟ್ರಕ್‌ಗಳ ಸರಕು ಸಾಗಣೆಯಾಗುತ್ತಿತ್ತು. ಒಂದು ದಿನದಲ್ಲಿ ಕನಿಷ್ಠ 6 ರಿಂದ 8 ಲಕ್ಷದ ವ್ಯವಹಾರ ನಡೆಯುತ್ತಿತ್ತು. ಅಂದರೆ, ಗುಪ್ತಾ ಸಹೋದರರು ಒಂದು ವರ್ಷದಲ್ಲಿ ಕನಿಷ್ಠ 20 ಕೋಟಿ ಮೌಲ್ಯದ ಸರಕುಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ ಜಿಎಸ್‌ಟಿ ರಿಟರ್ನ್ 5 ಸಾವಿರದಿಂದ 20 ಸಾವಿರ ರೂಪಾಯಿಗಳವರೆಗೆ ಮಾತ್ರ ತೋರಿಸಲಾಗುತ್ತಿದೆ. ಇಂತಹ ಕಡಿಮೆ ಆದಾಯದ ಕಾರಣ ಸಿಜಿಎಸ್‌ಟಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಗುಪ್ತಚರ ಇಲಾಖೆ ತನಿಖೆ ನಡೆಸಿದ್ದು, ಅಸಲಿ ದಂಧೆ ಬಯಲಾಗಿದೆ. ನಗದು ವಹಿವಾಟಿನಿಂದಾಗಿ ಬ್ಯಾಂಕ್ ಗಳಲ್ಲಿ ಇವರ ವಹಿವಾಟು ಕೂಡ ಕಡಿಮೆಯಾಗಿತ್ತು.
Raid On Piyush Jain: 50 ದೇಶಗಳಲ್ಲಿ ಪಿಯೂಷ್ ಜೈನ್ ಉದ್ಯಮ, ಮನೆ ಲ್ಯಾಬ್‌ನಲ್ಲೇ ರಿಸರ್ಚ್!
ಕಾನ್ಪುರ ಸಿಜಿಎಸ್‌ಟಿ ಆಯುಕ್ತರ ಕಚೇರಿಯಿಂದ ಐದು ವಾಹನಗಳಲ್ಲಿ ಬಂದ ತಂಡವು ಸುಮೇರ್‌ಪುರದ ಓಲ್ಡ್ ಗಲ್ಲಾ ಮಂಡಿಯಲ್ಲಿರುವ ತಂಬಾಕು ಉದ್ಯಮಿ ಜಗತ್ ಗುಪ್ತಾ ಅವರ ನಿವಾಸ ಮತ್ತು ಕಾರ್ಖಾನೆಯ ಮೇಲೆ ದಾಳಿ ನಡೆಸಿತು. ಉದ್ಯಮಿ ಮನೆಯ ಗೇಟ್ ತೆರೆಯಲು ನಿರಾಕರಿಸಿದರು, ಆದರೆ ತಂಡವು ಕಠಿಣ ನಿಲುವು ತೆಗೆದುಕೊಂಡಾಗ, ಗೇಟ್ ತೆರೆಯಲಾಯಿತು. 18 ಗಂಟೆಗಳ ದಾಳಿಯ ನಂತರ ಮೂರು ಬಾಕ್ಸ್‌ಗಳನ್ನು ತುಂಬಿಸಿ ಎಸ್‌ಬಿಐನಲ್ಲಿ ಜಮಾ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ