* ಕೇರಳದಲ್ಲಿ ನಿಯಂತ್ರಣಕ್ಕೆ ಬಾರದ ಕೊರೋನಾ
* ಕೇರಳಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ ಕೇಂದ್ರ
* ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿ
* ಮೈಕ್ರೋ ಕಂಟೋನ್ಮೆಂಟ್ ಜೋನ್ ಗೆ ಒತ್ತು ನೀಡಿ
ನವದೆಹಲಿ(ಸೆ. 01) ಕೇರಳದಲ್ಲಿ ಕೊರೋನಾ ಸ್ಫೋಟವಾಗಿದೆ. ನಿಯಂತ್ರಣಕ್ಕೆ ಬರುತ್ತಿಲ್ಲ. ಇಡೀ ದೇಶದಲ್ಲಿ ಕೊರೋನಾ ಆತಂಕಕ್ಕೆ ಕೇರಳ ಕಾರಣವಾಗಿದೆ. ಈ ನಡುವೆ ಕೇರಳ ಸರ್ಕಾರಕ್ಕೆ ಕೇಂದ್ರ ಸರ್ಕಾರ ಖಡಕ್ ವಾರ್ನಿಂಗ್ ಕೊಟ್ಟಿದೆ.
ಶೇ.85 ಸೋಂಕಿತರು ಮನೆಗಳಲ್ಲಿ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇಂದ್ರ ನಿರ್ದೇಶನಗಳನ್ನು ಕೇರಳ ಸರ್ಕಾರ ಕಡೆಗಣಿಸಿದಂತೆ ಕಾಣುತ್ತಿದೆ. ಮೈಕ್ರೋ ಕಂಟೋನ್ಮೆಂಟ್ ಜೋನ್ ಗೆ ಒತ್ತು ನೀಡುತ್ತಿಲ್ಲ. ಕೇರಳದ ನಿರ್ಲಕ್ಷ್ಯ ಅಕ್ಕ-ಪಕ್ಕ ರಾಜ್ಯಗಳ ಮೇಲೆ ಪ್ರಭಾವ ತೋರುತ್ತಿದೆ ಎಂದು ಕೇಂದ್ರ ಹೇಳಿದೆ.
ಇನ್ನು ಮುಂದೆ ಪಿಪಿಇ ಕಿಟ್ ಧರಿಸುವ ಅಗತ್ಯ ಇಲ್ಲ
ಕೇರಳ ವಾರದ ಪಾಸಿಟಿವ್ ದರ ಶೇ.14 ರಿಂದ 19ರ ತನಕ ಇದೆ ಎಂದು ಆತಂಕ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ ಈ ಕೂಡಲೇ ನಿಯಂತ್ರಣ ಅಗತ್ಯ,ತುರ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ.
ದೇಶದಲ್ಲಿನ 2,10,040 ಪ್ರಕರಣಗಳಲ್ಲಿ ಕೇರಳವು ಅತಿ ಹೆಚ್ಚು ಸಕ್ರಿಯ ಪ್ರಕರಣಗಳನ್ನು (57 ಶೇಕಡಾ) ಹೊಂದಿದೆ ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (55,359) ಇದೆ. ಈ ಎರಡು ರಾಜ್ಯಗಳು ದೇಶ 72 ಶೇಕಡಾ ಸಕ್ರಿಯ ಪ್ರಕರಣಗಳನ್ನು ಹೊಂದಿವೆ. ಮೊದಲನೇ ಅಲೆಯನ್ನು ಯಶಸ್ವಿಗಾಗಿ ನಿಭಾಯಿಸಿದ್ದ ಕೇರಳ ಈಗ ತೀವ್ರ ಸಂಕಷ್ಟ ಅನುಭವಿಸುತ್ತಿದೆ. ಕರ್ನಾಟಕ ಮತ್ತು ಕೇರಳ ಗಡಿಯನ್ನು ಬಂದ್ ಮಾಡಬೇಕು ಎಂಬ ಮಾತುಗಳು ಕೇಳಿ ಬಂದಿವೆ.