ಗುಡ್ ನ್ಯೂಸ್; ಇನ್ಮುಂದೆ ಪಿಎಫ್ ಎರಡೂ ಮೊತ್ತವನ್ನು ಕೇಂದ್ರವೇ ಭರಿಸಲಿದೆ!

Published : Aug 21, 2021, 10:43 PM ISTUpdated : Aug 21, 2021, 10:45 PM IST
ಗುಡ್ ನ್ಯೂಸ್; ಇನ್ಮುಂದೆ ಪಿಎಫ್ ಎರಡೂ ಮೊತ್ತವನ್ನು ಕೇಂದ್ರವೇ ಭರಿಸಲಿದೆ!

ಸಾರಾಂಶ

* ಕಾರ್ಮಿಕ ವಲಯಕ್ಕೆ ಶುಭ ಸುದ್ದಿ ನೀಡಿದ ಕೇಂದ್ರ ಸರ್ಕಾರ *  ಸಣ್ಣ ಮತ್ತು ಮಧ್ಯಮ ವಲಯದ ಸಂಸ್ಥೆಗಳಲ್ಲಿ ದುಡಿಯುವ ನೌಕರರಿಗೆ ಲಾಭ * ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಘೋಷಣೆ

ನವದೆಹಲಿ(ಆ. 21) ಕೊರೋನಾ ಕಾಲಕ್ಕೆ ಕೆಲಸ ಕಳೆದುಕೊಂಡು ಮತ್ತೆ ಕೆಲಸಕ್ಕೆ ಕರೆಸಿಕೊಂಡಿರುವ ಅಥವಾ ಸೇರಿಕೊಂಡಿರುವ ಉದ್ಯೋಗಿಗಳ ಪಿಎಫ್‌ ಪಾಲಿನ ಎರಡು  ಮೊತ್ತವನ್ನು ಮುಂದಿನ ವರ್ಷದವರೆಗೆ ಕೇಂದ್ರ ಸರ್ಕಾರವೇ ಭರಿಸಲಿದೆ.  ಉದ್ಯೋಗದಾತರು ಮತ್ತು ಉದ್ಯೋಗಿಯ ಪಾಲಿನ ಹಣದ ಮೊತ್ತವನ್ನು 2022ರ ತನಕ ಕೇಂದ್ರ ಸರಕಾರವೇ ಭರಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಕೆಲಸ ಕಳೆದುಕೊಂಡಿರುವ ಉದ್ಯೋಗಿಯನ್ನು ಸಂಸ್ಥೆ ಅಥವಾ ಕಂಪನಿಯು ಮರಳಿ ಸೇರಿಸಿದರೆ ಮಾತ್ರ ಕೇಂದ್ರ ಸರಕಾರ ಈ ನೆರವು ಸಿಗಲಿದೆ  ಎಂದು ಸ್ಪಷ್ಟಪಡಿಸಿದ್ದಾರೆ.

ಅಂಚೆ ಇಲಾಖೆಯ  ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ

ನೋಂದಾಯಿತ ಸಂಘಟಿತ ವಲಯದ ಸಂಸ್ಥೆಗಳು, ಅದರಲ್ಲೂ ಸಣ್ಣ ಮತ್ತು ಮಧ್ಯಮ ವಲಯದ ಸಂಸ್ಥೆಗಳಲ್ಲಿ ದುಡಿಯುವ ನೌಕರರಿಗೆ ಮತ್ತು ಅಂಥ ಸಂಸ್ಥೆಗಳಿಗೆ ಈ ನೆರವು ಸಿಗಲಿದೆ ಎಂದು ಹಣಕಾಸು ಸಚಿವೆ ತಿಳಿಸಿದ್ದಾರೆ.

ಯಾವುದಾರೂ ಜಿಲ್ಲೆಯೊಂದರಲ್ಲಿ ಅಸಂಘಟಿತ ವಲಯದ 25,000ಕ್ಕೂ ಹೆಚ್ಚು ವಲಸಿಗ ಕಾರ್ಮಿಕರು ಕೆಲಸ ಮಾಡುತ್ತಿದ್ದು ಅವರು ಕೊರೋನಾ ಕಾರಣಕ್ಕೆ ಸ್ವಂತ ಊರಿಗೆ ಹಿಂದಿರುಗಿದ್ದರೆ ಅವರಿಗೆ  ಕೇಂದ್ರದ 16 ಯೋಜನೆಗಳ ಪ್ರಯೋಜನ ಸಿಗಲಿದೆ ಎಂದು ತಿಳಿಸಿದ್ದಾರೆ.

ಸ್ಯಾಂಡ್ ಅಪ್ ಇಂಡಿಯಾ, ಮುದ್ರಾ ಯೋಜನೆ, ಜನ್ ಧನ್ ಯೋಜನೆ, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣದ ವಿಚಾರದ ಬಗ್ಗೆಯೂ ನಿರ್ಮಲಾ ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆಗೆ ನೀಡುತ್ತಿದ್ದ ಅನುದಾನ ಹೆಚ್ಚಳ ಮಾಡಲಾಗಿದೆ.  ಒಂದು ಜಿಲ್ಲೆ ಒಂದು ಕಾರ್ಯಕ್ರಮ ಎಂಬ ಧ್ಯೇಯದೊಂದಿಗೆ ಕೇಂದ್ರ ಸರ್ಕಾರ ಹೆಜ್ಜೆ ಇಡಲಿದೆ ಎಂದು ತಿಳಿಸಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್