ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಅನುಮತಿ ಕೋರಿದ ಜಾನ್ಸನ್‌ ಕಂಪನಿ!

By Suvarna NewsFirst Published Aug 21, 2021, 3:05 PM IST
Highlights

* ತಾನು ತಯಾರಿಸಿರುವ ಕೋವಿಡ್‌19 ಲಸಿಕೆಯನ್ನು ಭಾರತದಲ್ಲಿ 12-17 ವರ್ಷದ ಮಕ್ಕಳ ಮೇಲೆ ಪ್ರಯೋಗಿಸಲು ಅನುಮತಿ ಕೇಳಿದ ಕಂಪನಿ

* ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ 

* ಕೋವಿಡ್‌ 19 ವಿರುದ್ಧ ಸಾಮೂಹಿಕ ಪ್ರತಿರೋಧ ಶಕ್ತಿ ಬೆಳೆಸುವುದು ಅನಿವಾರ್ಯ

ನವದೆಹಲಿ(ಆ.21): ಅಮೆರಿಕ ಮೂಲದ ಔಷಧ ತಯಾರಿಕಾ ಕಂಪನಿ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ತಾನು ತಯಾರಿಸಿರುವ ಕೋವಿಡ್‌19 ಲಸಿಕೆಯನ್ನು ಭಾರತದಲ್ಲಿ 12-17 ವರ್ಷದ ಮಕ್ಕಳ ಮೇಲೆ ಪ್ರಯೋಗಿಸಲು ಅನುಮತಿ ಕೋರಿ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದೆ.

‘ಕೋವಿಡ್‌ 19 ವಿರುದ್ಧ ಸಾಮೂಹಿಕ ಪ್ರತಿರೋಧ ಶಕ್ತಿ ಬೆಳೆಸುವುದು ಅನಿವಾರ್ಯವಾಗಿದೆ. ಹಾಗಾಗಿ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡಲು ಅನುಮತಿ ಕೋರಿ ಆ.17ರಂದು ಮನವಿ ಸಲ್ಲಿಸಲಾಗಿದೆ. ಎಲ್ಲಾ ವಯೋಮಾನದವರಿಗೂ ಲಸಿಕೆ ಸಿಗುವಂತೆ ಮಾಡಲು ನಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ’ ಎಂದು ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪನಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪನಿಯ ಸಿಂಗಲ್‌ ಡೋಸ್‌ ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು.

click me!