ZyCoV-D vaccine| ಮಕ್ಕಳಿಗೆ ನೀಡುವ ಲಸಿಕೆ ದರ ಡೋಸ್‌ಗೆ 358 ರು.!

By Suvarna NewsFirst Published Nov 9, 2021, 8:23 AM IST
Highlights

* ಮೂರು ಡೋಸ್‌ನ ಝೈಕೋವ್‌ ಡಿ ಲಸಿಕೆ

* ಮಕ್ಕಳಿಗೆ ನೀಡುವ ಲಸಿಕೆ ದರ ಡೋಸ್‌ಗೆ 358 ರು.

* ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ಗಿಂತ ದುಬಾರಿ

* ಕೋವಿಶೀಲ್ಡ್‌ 2 ಡೋಸ್‌ 430 ರು.

* ಕೋವ್ಯಾಕ್ಸಿನ್‌ 2 ಡೋಸ್‌ 450 ರು.

* ಝೈಕೋವ್‌ ಡಿ 3 ಡೋಸ್‌ 1058 ರು.

ನವದೆಹಲಿ(ನ.09): 12 ವರ್ಷ ಮೇಲ್ಪಟ್ಟಮಕ್ಕಳು ಸೇರಿ ಎಲ್ಲರಿಗೂ ನೀಡಬಹುದಾದ ದೇಶೀಯ ‘ಝೈಕೋವ್‌ ಡಿ’ ಲಸಿಕೆಯ ಪ್ರತೀ ಡೋಸ್‌ಗೆ 265 ರು. ದರ ನಿಗದಿ ಪಡಿಸಲಾಗಿದೆ. ಇದು ಸಿರಿಂಜ್‌ರಹಿತವಾಗಿದ್ದು, ಈ ಲಸಿಕೆ ನೀಡಲು ಫಾರ್ಮಾಜೆಟ್‌ ಎಂಬ ಅಪ್ಲಿಕೇಟರ್‌ ಬಳಸಲಾಗುತ್ತದೆ. ಇದಕ್ಕೆ ಪ್ರತ್ಯೇಕ 93 ರು. ಇದೆ. ಹೀಗಾಗಿ ಒಂದು ಡೋಸ್‌ಗೆ ಒಟ್ಟಾರೆ 358 ರು. ಆಗಲಿದೆ. ಇದು ಮೂರು ಡೋಸ್‌ನ ಲಸಿಕೆಯಾದ ಕಾರಣ, ಮೂರೂ ಡೋಸ್‌ಗೆ ಒಟ್ಟಾರೆ 1058 ರು. ಆಗಲಿದೆ.

ಈಗಾಗಲೇ ಭಾರತದಲ್ಲಿ ಬಳಕೆಯಲ್ಲಿರುವ ಕೋವಿಶೀಲ್ಡ್‌ನ 1 ಡೋಸ್‌ಗೆ 215 ರು. ದರ ನಿಗದಿ ಮಾಡಲಾಗಿದೆ. ಅಂದರೆ 2 ಡೋಸ್‌ಗೆ 430 ರು. ಆಗುತ್ತದೆ. ಇನ್ನು ಕೋವ್ಯಾಕ್ಸಿನ್‌ ಪ್ರತಿ ಡೋಸ್‌ ಅನ್ನು ಸರ್ಕಾರ 225 ರು. ನಂತೆ ಖರೀದಿಸಿತ್ತು. ಅಂದರೆ 2 ಡೋಸ್‌ಗೆ 450 ರು. ಹೀಗಾಗಿ ಈ ಲಸಿಕೆಗಳಿಗೆ ಹೋಲಿಸಿದರೆ ಸರ್ಕಾರ ಪ್ರತಿ ವ್ಯಕ್ತಿಗೆ ನೀಡಲು ಝೈಡಸ್‌ ಲಸಿಕೆಗೆ ಕನಿಷ್ಠ 600 ರು. ಹೆಚ್ಚು ಹಣ ಪಾವತಿ ಮಾಡಬೇಕಾಗಲಿದೆ. ಈಗಾಗಲೇ ಇದೇ ದರದಲ್ಲಿ 1 ಕೋಟಿ ಡೋಸ್‌ ಝೈಡಸ್‌ ಲಸಿಕೆ ಖರೀದಿಗೆ ಸರ್ಕಾರ ಬೇಡಿಕೆ ಸಲ್ಲಿಸಿದೆ.

ಝೈಕೋವ್‌ -ಡಿ ವಿಶ್ವದ ಮೊಟ್ಟಮೊದಲ ಪ್ಲಾಸ್ಮಾಯ್ಡ್‌ ಡಿಎನ್‌ಎ ಲಸಿಕೆಯಾಗಿದೆ. ಪ್ರತಿ ಡೋಸ್‌ ಅನ್ನು 28 ದಿನಗಳ ಅಂತರದಲ್ಲಿ ಪಡೆದುಕೊಳ್ಳಬೇಕು. ಭಾರತದಲ್ಲಿ ಮಕ್ಕಳಿಗೆ ನೀಡಲು ಬಳಸಲು ಅನುಮತಿ ಪಡೆದ ಮೊದಲ ಲಸಿಕೆ ಇದು.

ಮಕ್ಕಳಿಗೂ ಕೊವ್ಯಾಕ್ಸಿನ್‌ಗೆ ಅನುಮತಿ

ಸಂಭವನೀಯ ಮೂರನೇ ಕೊರೋ​ನಾ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕ ಎದುರಾಗಿದೆ. ಇದೀಗ ಮಕ್ಕಳಿಗೂ ಕೊವ್ಯಾಕ್ಸಿನ್‌ ಲಸಿಕೆ ನೀಡಲು ತಜ್ಞರ ಸಮಿತಿ ಮಕ್ಕಳ ಮೇಲೆ ತುರ್ತು ಬಳಕೆಗೆ ಅನುಮತಿ ನೀಡಿದೆ. ಇದರಿಂದ ಮಕ್ಕಳು ಮತ್ತು ಪೋಷಕರು ನಿಟ್ಟಿಸಿರುವ ಬಿಡುವಂತಾಗಿದೆ.

ಈ ಕುರಿತು ಬೆಳಗಾವಿ ನಗರದ ಜೀವನ್‌ ರೇಖಾ ಆಸ್ಪತ್ರೆ ವೈದ್ಯ ಡಾ. ಅಮಿತ್‌ ಭಾತೆ ಮಾಹಿತಿ ನೀಡಿದ್ದು, ಎರಡರಿಂದ 18 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್‌ಲಸಿಕೆ ತುರ್ತು ಬಳಕೆಗೆ ಅನುಮತಿ ಸಿಕ್ಕಿದೆ.

ವಯಸ್ಕರ ಕ್ಲಿನಿಕಲ್ ಟ್ರಯಲ್ರೀ ತಿಯೇ ಮಕ್ಕಳ ಮೇಲೂ ಪ್ರಯೋಗ ಮಾಡಲಾಗಿತ್ತು. ವಯಸ್ಕರಂತೆ ಮಕ್ಕಳಿಗೂ 0.5ಮಿ ಡೋಸ್‌ ಕೊಡಲಾಗಿತ್ತು. ಮೊದಲ, ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ದತ್ತಾಂಶ ಸಲ್ಲಿಸಲಾಗಿತ್ತು. ಈಗ ವಿಷಯ ತಜ್ಞರ ಸಮಿತಿ ಮಕ್ಕಳ ಮೇಲೆ ಕೊವ್ಯಾಕ್ಸಿನ್‌ ತುರ್ತು ಬಳಕೆಗೆ ಅನುಮತಿ ನೀಡಿದೆ. ವಯಸ್ಕರ ರೀತಿಯೇ 2 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ ಎಂದರು.

ಮಕ್ಕಳಿಗೂ ಅದೇ ರೀತಿ ಡೋಜ್‌ ಇರುತ್ತದೆ ಈ ಹಿಂದೆಯೂ ಮೊದಲು ವಯಸ್ಕರಿಗೂ ತುರ್ತು ಪರಿಸ್ಥಿತಿಯಲ್ಲಿ ಬಳಕೆಗೆ ಅನುಮತಿ ಸಿಕ್ಕಿತ್ತು. ಮೂರನೇ ಅಲೆ ಬಂದರೆ ಈಗ ಯಾವುದೇ ಮಕ್ಕಳ ಲಸಿಕೆ ಇಲ್ಲ ಹೀಗಾಗಿ ತುರ್ತು ಪರಿಸ್ಥಿತಿಯಲ್ಲಿ ಬಳಕೆಗೆ ಅನುಮತಿ ನೀಡಲಾಗಿದೆ. ನಮಗೆ ತಿಳಿದಂತೆ ಕ್ಲಿನಿಕಲ್ ಟ್ರಯಲ್ ವೇಳೆ ಯಾರಿಗೂ ಸಹ ಸೈಡ್‌ ಎಫೆಕ್ಟ್ ಆಗಿಲ್ಲ. ರೋಗ ನಿರೋಧಕ ಶಕ್ತಿಯೂ ವೃದ್ಧಿಯಾಗಿದೆ ಕೊವ್ಯಾಕ್ಸಿನ್‌ ರೂಪಾಂತರ ವೈರಸ್‌ ಮೇಲೂ ಪರಿಣಾಮಕಾರಿಯಾಗಿದೆ. ಕೋವಿಡ್‌ ಮೊದಲನೇ ಎರಡನೇ ಅಲೆಯಲ್ಲಿ ಈ ಬಗ್ಗೆ ಗೊತ್ತಾಗಿದೆ. ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಭಯ ಪಡುತ್ತಿದ್ದಾರೆ.

ಕೋವ್ಯಾಕ್ಸಿನ್‌ ಬಂದರೆ ಇನ್ಫೆಕ್ಷನ್‌ ಕಂಟ್ರೋಲ್ಗೆ‌ ಅನುಕೂಲ ನಮ್ಮಲ್ಲಿ ಝೈಕೋವಾ ಡಿ 12 ರಿಂದ 18 ವರ್ಷದವರ ಮೇಲೆ ಕ್ಲಿನಿಕಲ್ ಟ್ರಯಲ್ಮಾ ಡಲಾಗಿತು. ಝೈಕೋವ್‌ ಡಿ ಡಿಎನ್‌‌ಎ ವ್ಯಾಕ್ಸಿನ್‌, ಕೋವ್ಯಾಕ್ಸಿನ್‌ ಕೋವಿಡ್‌ ಆ್ಯಂಟಿಜೆನ್‌ ವಿಶ್ವದಲ್ಲೇ ಯಾವ ದೇಶದಲ್ಲೂ ಎರಡು ಮಕ್ಕಳ ಲಸಿಕೆ ಬಂದಿಲ್ಲ. ಭಾರತದಲ್ಲಿ ಮಾತ್ರ ಮಕ್ಕಳಿಗಾಗಿ ಎರಡು ಲಸಿಕೆಗಳು ತುರ್ತು ಬಳಕೆಗೆ ಅನುಮತಿ ಸಿಕ್ಕಿದೆ. ವಯಸ್ಕರು ಎಲ್ಲರದ್ದು ವ್ಯಾಕ್ಸಿನೇಷನ್‌ ಮಾಡಿಕೊಳ್ಳಬೇಕು ಭಾರತೀಯ ಕಂಪನಿಯ ಲಸಿಕೆಗೆ ಅನುಮತಿ ಸಿಕ್ಕಿದ್ದಕ್ಕೆ ಹೆಮ್ಮೆ ಅನಿಸುತ್ತಿದೆ. ಅಲ್ಲದೆ ತಮ್ಮ ಆಸ್ಪತ್ರೆಯಲ್ಲಿ ಮಕ್ಕಳಿಗೆ ಟ್ರೈಯಲ್‌ ನಡೆದಿಲ್ಲ ಎಂದು ಡಾ. ಭಾತೆ ಸ್ಪಷ್ಟಪಡಿಸಿದ್ದಾರೆ.

click me!