IT ದಾಳಿಗೆ ಹೆದರಬೇಡಿ, ನಿಮ್ಮ ಕಾರ್ಯ ಮುಂದುವರೆಸಿ : ಕೆಟಿ ರಾಮರಾವ್!

By Suvarna NewsFirst Published Nov 9, 2021, 12:13 AM IST
Highlights

*ಸೋನು ಸೂದ್‌ ಕೆಲಸವನ್ನು ಇಡೀ ಪ್ರಪಂಚವೇ ಗಮನಿಸಿದೆ
*ಆದರೂ ಅವರ ಮೇಲೆ ಈ ಐಟಿ ರೇಡ್‌ ಮಾಡಲಾಗಿದೆ
*IT ದಾಳಿಗೆ ಹೆದರಬೇಡಿ, ನಿಮ್ಮ ಕಾರ್ಯ ಮುಂದುವರೆಸಿ 
*ಸರ್ಕಾರವು  ಎಲ್ಲಾ ಬೆಂಬಲವನ್ನು ನೀಡುತ್ತದೆ : ಕೆಟಿ ರಾಮರಾವ್

ತೆಲಂಗಾಣ (ನ. 8 ) : ಕೋವಿಡ್‌ ಲಾಕ್‌ಡೌನ್ (Corona Lock Down) ಸಂದರ್ಭದಲ್ಲಿ ಲಕ್ಷಾಂತರ ಜನರಿಗೆ ಆಸರೆಯಾಗಿದ್ದ ಬಾಲಿವುಡ್‌ ನಟ ಸೋನು ಸೂದ್‌ರನ್ನು (Sonu Sood) ತೆಲಂಗಾಣ ಐಟಿ ಮತ್ತು ಕೈಗಾರಿಕೆಗಳ ಸಚಿವ ಕೆಟಿ ರಾಮರಾವ್ (KT Rama Rao) ಶ್ಲಾಘಿಸಿದ್ದಾರೆ. ಸೋಮವಾರ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಜನರಿಗೆ ಸಹಾಯ ಮಾಡಿದ ನಟ ಸೋನು ಸೂದ್ ಅವರನ್ನು ಶ್ಲಾಘಿಸಿ ಮಾತನಾಡಿದ ಅವರು  ಐಟಿ ದಾಳಿಗಳ (IT Raid) ಹೊರತಾಗಿಯೂ ಉತ್ತಮ ಕೆಲಸವನ್ನು ಮುಂದುವರಿಸುವಂತೆ ಕೋರಿದ್ದಾರೆ.

IT ದಾಳಿಗೆ ಹೆದರಬೇಡಿ, ನಿಮ್ಮ ಕಾರ್ಯ ಮುಂದುವರೆಸಿ!

ಹೈದರಾಬಾದ್‌ನಲ್ಲಿ (Hyderabad) ನಡೆದ ಕಾರ್ಯಕ್ರಮದಲ್ಲಿ ಸೋನು ಸೂದ್ ಜೊತೆಗೆ ಕೋವಿಡ್ ಯೋಧರನ್ನು (Covid warriors) ಸನ್ಮಾನಿಸಿದ ನಂತರ ಜನರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವಲ್ಲಿ ನಿರತರಾಗಿದ್ದಾಗ ನಟ ಐಟಿ ದಾಳಿಗಳನ್ನು ಎದುರಿಸಿದ್ದಾರೆ ಎಂದು ಆಘಾತ ವ್ಯಕ್ತಪಡಿಸಿದರು. ಸೂದ್ ಅವರು 20 ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಆದಾಯ ತೆರಿಗೆ ಇಲಾಖೆ (Income tax department) ಈ ವರ್ಷದ ಸೆಪ್ಟೆಂಬರ್‌ನಲ್ಲಿ ದಾಳಿ ನಡೆಸಿತ್ತು. ಆದಾಗ್ಯೂ, ನಟನು ಆ ಸಮಯದಲ್ಲಿ ತನ್ನ ಫೌಂಡೇಶನ್‌ನಲ್ಲಿನ (Foundation) "ಪ್ರತಿ ರೂಪಾಯಿಯೂ" "ಜೀವವನ್ನು ಉಳಿಸಲು ಅದರ ಸರದಿಯನ್ನು ಕಾಯುತ್ತಿದೆ" ಎಂದು ಹೇಳಿದ್ದರು. 

ಓದದೆ ಬಾಕಿ ಇದೆ 54 ಸಾವಿರ ಮೇಲ್: 18 ಕೊಟಿ ಮುಗಿಯೋಕೆ 18 ಗಂಟೆಯೂ ಬೇಡ ಎಂದ ಸೋನು

"ಒಂದು ಕಡೆ ಇಡೀ ರಾಷ್ಟ್ರ ಮತ್ತು ಪ್ರಪಂಚವು  ಜನರಿಗೆ ಸೋನು ಸೂದ್ ಸಹಾಯವನ್ನು ನೀಡುತ್ತಿರುವುದನ್ನು ಗಮನಿಸುತ್ತಿರುವಾಗ, ಇನ್ನೊಂದ ಕಡೆ ಅವರ ಮೇಲೆ ಐಟಿ ದಾಳಿಗಳನ್ನು ನಡೆಸಲಾಯಿತು" ಎಂದು ಅವರು ಹೇಳಿದರು. "ನಟ ಅಂತಹ ವಿಷಯಗಳ ಭಯಪಡಬಾರದು ಹಾಗೂ ಸಮಾಜಕ್ಕೆ ಸಹಾಯ ಮಾಡುವುದನ್ನು ಮುಂದುವರಿಸಬೇಕು" ಎಂದು ರಾವ್ ಹೇಳಿದರು, ಜತೆಗೆ ತೆಲಂಗಾಣ (Telangana) ಸರ್ಕಾರವು ಅವರಿಗೆ ಎಲ್ಲಾ ಬೆಂಬಲವನ್ನು ನೀಡುತ್ತದೆ ಎಂದು ಭರವಸೆ ನೀಡಿದರು. ನಂತರ ಮಾತನಾಡಿದ ಸೋನು ಸೂದ್‌ ದಾಳಿಗಳ ಹೊರತಾಗಿಯೂ ಬಡವರಿಗೆ ಸಹಾಯ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿದರು, ಸಚಿವ ರಾವ್ ಅವರು ಅಗತ್ಯವಿರುವವರಿಗೆ ಉತ್ತಮವಾಗಿ ಸಹಾಯ ಮಾಡುತ್ತಿದ್ದಾರೆ ಸೂದ್ ಎಂದು ಹೇಳಿದರು.

ಸೋನು ಸೂದ್‌ ಮೇಲೆ ಐಟಿ ದಾಳಿ!

ನಟ ಸೋನು ಸೂದ್ ಮತ್ತು ಆತನ ಸಹಚರರು ₹ 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿತ್ತು. ಇಲಾಖೆ ನಟನಿಗೆ ಸಂಬಂಧಿಸಿದ ಮುಂಬೈ ನಿವಾಸ ಸೇರಿದಂತೆ ಹಲವಾರು ನಿವೇಶನಗಳನ್ನು  ಮೂರು ದಿನಗಳವರೆಗೆ ಪರಿಶೀಲಿಸನೆ ನಡೆಸಿತ್ತು. ಸತತ ಮೂರು ದಿನಗಳು ನಡೆದ ರೈಡ್ ನಂತರ ಸೂದ್ ಮತ್ತು ಆತನ ಸಹವರ್ತಿಗಳು ಹೂಡಿಕೆಗಳನ್ನು ಮಾಡಲು ಮತ್ತು ಆಸ್ತಿಗಳನ್ನು ಪಡೆದುಕೊಳ್ಳಲು ನಕಲಿ ಸಾಲ ಬಳಸಿದಿದ್ದಾರೆ ಎಂದು ಇಲಾಖೆ ಹೇಳಿತ್ತು.

2 ಬಾರಿ ರಾಜ್ಯಸಭಾ ಸೀಟ್ ತಿರಸ್ಕರಿಸಿದ ಸೋನು ಸೂದ್: ನಟ ಹೇಳಿದ ರೀಸನ್ ಇದು

ದಾಳಿ ಬಳಿಕ ಪ್ರತಿಕ್ರಿಯಿಸಿದ್ದ ಬಾಲಿವುಡ್‌ ನಟ ಸೋನು ಸೂದ್‌ ಅವರು ಏನೇ ಪ್ರಶ್ನೆಗಳನ್ನು ಕೇಳಿದಾಗಲೂ ನಾವು ಪ್ರತಿಯೊಂದಕ್ಕೂ ದಾಖಲೆಗಳೊಂದಿಗೆ ಉತ್ತರಿಸಿದ್ದೇವೆ. ಅದು ನನ್ನ ಕರ್ತವ್ಯ. ನಾವು ಇನ್ನೂ ದಾಖಲೆಗಳನ್ನು ಒದಗಿಸುತ್ತಿದ್ದೇವೆ. ಇದು ಪ್ರಕ್ರಿಯೆಯ ಭಾಗವಾಗಿದೆ ಎಂದಿದ್ದರು. 20 ಕೋಟಿ ದಾನ ಡೊನೆಷನ್‌ನಲ್ಲಿ 1.9 ಕೋಟಿ ಖರ್ಚು ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ನಟ ಅದರಲ್ಲಿ ದಾನ ಮಾಡಿದ ಹಣ ಮಾತ್ರವಲ್ಲ ನನಗೆ ಜಾಹೀರಾತಿನ ಮೂಲಕ, ಬ್ರಾಂಡ್ ಪ್ರಮೋಷನ್ ಮೂಲಕ ಸಿಕ್ಕಿದ ಹಣವೂ ಸೇರಿದೆ ಎಂದಿದ್ದರು

click me!