ಮೊದಲ ಹಂತದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರವೇ ಇನ್‌ಕೋವ್ಯಾಕ್ ಲಭ್ಯವಿರಲಿದ್ದು, ಶೀಘ್ರವೇ ಇದನ್ನು ರಾಷ್ಟ್ರೀಯ ಕೋವಿಡ್ ಲಸಿಕಾ ಯೋಜನೆಯ ಭಾಗವಾಗಿ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ನವದೆಹಲಿ: ದೇಶದಲ್ಲಿ (Country) ಮತ್ತೆ ಹೊಸ ಕೋವಿಡ್ (COVID) ಸೋಂಕಿನ ಅಲೆ ಭೀತಿ ಕಾಣಿಸಿಕೊಂಡಿರುವ ಹೊತ್ತಿನಲ್ಲೇ, ಮೂಗಿನ (Nose) ಮೂಲಕ ಪಡೆಯಬಹುದಾದ ಕೋವಿಡ್ ಲಸಿಕೆಯನ್ನು (Covid Vaccine) ಬೂಸ್ಟರ್ ಡೋಸ್ (Booster Dose) ಆಗಿ ನೀಡಲು ಕೇಂದ್ರ ಸರ್ಕಾರ (Central Government) ಅನುಮೋದನೆ ನೀಡಿದೆ. ಹೀಗಾಗಿ ಮೊದಲ ಎರಡು ಡೋಸ್ ಆಗಿ ಕೋವಿಶೀಲ್ಡ್ (Covishield) ಅಥವಾ ಕೋವ್ಯಾಕ್ಸಿನ್ (Covaxin) ಪೈಕಿ ಯಾವುದೇ ಲಸಿಕೆ ಪಡೆದ, 18 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಬೂಸ್ಟರ್ ಡೋಸ್ ಆಗಿ ಹೈದರಾಬಾದ್ (Hyderabad) ಮೂಲದ ಭಾರತ್ ಬಯೋಟೆಕ್ (Bharat Biotech) ಅಭಿವೃದ್ಧಿಪಡಿಸಿರುವ ಇನ್‌ಕೋವ್ಯಾಕ್ (Incovacc) ಇಂಟ್ರಾನಾಸಲ್ ವ್ಯಾಕ್ಸಿನ್ ಪಡೆಯಬಹುದು.
ಆದರೆ ಮೊದಲ ಹಂತದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರವೇ ಇನ್‌ಕೋವ್ಯಾಕ್ ಲಭ್ಯವಿರಲಿದ್ದು, ಶೀಘ್ರವೇ ಇದನ್ನು ರಾಷ್ಟ್ರೀಯ ಕೋವಿಡ್ ಲಸಿಕಾ ಯೋಜನೆಯ ಭಾಗವಾಗಿ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಹೀಗಾಗಿ ತಕ್ಷಣಕ್ಕೆ ಈ ಲಸಿಕೆ ಬೇಕಾದವರು ಖಾಸಗಿ ಆಸ್ಪತ್ರೆಗಳಲ್ಲಿ ಹಣ ನೀಡಿಯೇ ಪಡೆದುಕೊಳ್ಳಬೇಕು. ಕೋವಿನ್ ವೆಬ್‌ಸೈಟ್‌ನಲ್ಲಿ ಇನ್‌ಕೋವ್ಯಾಕ್ ಲಸಿಕೆಯ ಮಾಹಿತಿ ಹಾಕಲಾಗಿದ್ದು, ಬೇಕಾದವರು ಲಸಿಕೆಗೆ ಬುಕ್ ಮಾಡಿಕೊಳ್ಳಬಹುದು.
ಸೇಂಟ್ ಲೂಯಿಸ್‌ನ ವಾಷಿಂಗ್ಟನ್ ವಿವಿಯ ಸಹಯೋಗದಲ್ಲಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಈ ಲಸಿಕೆಯನ್ನು ಬಿಬಿವಿ154 ಎಂದು ಹೆಸರಿಸಲಾಗಿದ್ದು, ಕಳೆದ ನವೆಂಬರ್‌ನಲ್ಲೇ ಇದನ್ನು 18 ವರ್ಷ ಮೇಲ್ಪಟ್ಟವರಿಗೆ ತುರ್ತು ಬಳಕೆ ಮಾಡಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (Drug Controller General of India) (ಡಿಸಿಜಿಐ) ಅನುಮತಿ ನೀಡಿತ್ತು.
undefined
ಇದನ್ನು ಓದಿ: Bengaluru: ಬೂಸ್ಟರ್ ಡೋಸ್‌ಗೆ ಹೆಚ್ಚಿದ ಬೇಡಿಕೆ: ಕೋವಿಶೀಲ್ಡ್‌ಗಾಗಿ ಕೇಂದ್ರಕ್ಕೆ ಮನವಿ
ನೀಡುವುದು ಹೇಗೆ..?
ಇದು ಎರಡು ಡೋಸ್‌ನ ಮಾದರಿಯದ್ದಾಗಿದೆ. ಮೊದಲ ಡೋಸ್‌ನಲ್ಲಿ ಪ್ರತಿ ಮೂಗಿನ ಹೊಳ್ಳೆಗೆ ತಲಾ 0.2 ಎಂಎಲ್‌ನಂತೆ ಒಟ್ಟು 0.4 ಎಂಎಲ್ ನೀಡಲಾಗುತ್ತದೆ. 4 ವಾರಗಳ ಬಳಿಕ ಮತ್ತೆ 0.4 ಎಂಎಲ್ ಲಸಿಕೆಯನ್ನು ನೀಡಲಾಗುತ್ತದೆ. ಅಂದರೆ 4 ವಾರಗಳ ಅಂತರದಲ್ಲಿ ಪ್ರತಿ ಮೂಗಿನ ಹೊಳ್ಳೆಗೆ 0.4 ಎಂಎಲ್‌ನಂತೆ ಒಟ್ಟು 0.8 ಎಂಎಲ್ ಲಸಿಕೆ ನೀಡಲಾಗುತ್ತದೆ.
ಲಾಭ ಏನು..?
ಇದನ್ನು ನೀಡಲು ಇಂಜೆಕ್ಷನ್ ಬೇಡ. ಹೀಗಾಗಿ ನೋವಿನ ಭಯದಿಂದ ಲಸಿಕೆ ಪಡೆಯಲು ಹಿಂಜರಿಯುವವರಿಗೆ ಅನುಕೂಲ. ಸಂಗ್ರಹಿಸುವುದು ಸುಲಭ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನರಿಗೆ ಲಸಿಕೆ ನೀಡಬಹುದು. ಲಸಿಕೆ ನೀಡಲು ತಜ್ಞರ ಅವಶ್ಯಕತೆ ಇಲ್ಲ. ಒಂದೇ ಇಂಜೆಕ್ಷನ್‌ನಿಂದ ಹಲವರಿಗೆ ಲಸಿಕೆ ನೀಡುವುದರಿಂದ ಆಗುವ ಎಡವಟ್ಟು ಇಲ್ಲ. ಮೂಗಿನಿಂದಲೇ ವೈರಸ್ ದೇಹವನ್ನು ಪ್ರವೇಶಿಸುವ ಕಾರಣ, ಅಲ್ಲಿಯೇ ಲಸಿಕೆ ಹಾಕುವುದರಿಂದ ಮೂಗಿನ ಮೂಲಕ ವೈರಸ್ ದೇಹ ಪ್ರವೇಶ ಮಾಡುವುದನ್ನು ತಡೆಯಬಹುದು.
ಇದನ್ನು ಓದಿ: ಆದಷ್ಟು ಬೇಗ ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳಿ: ಸಾರ್ವಜನಿಕರಿಗೆ ಐಎಂಎ ವೈದ್ಯರ ಎಚ್ಚರಿಕೆ
ಯಾರು ಲಸಿಕೆ ಪಡೆಯಬಹುದು..?
ಈಗಾಗಲೇ ಎರಡು ಡೋಸ್ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆ ಪಡೆದ 18 ವರ್ಷ ಮೇಲ್ಪಟ್ಟವರು.
2 ಸಲ ಬೂಸ್ಟರ್ ಡೋಸ್ ಪಡೆಯಬೇಕು
ಬೂಸ್ಟರ್ ಡೋಸನ್ನು 2 ಸಲ ಪಡೆಯಬೇಕು. 0.4 ಎಂಎಲ್ ಮೊದಲ ಬೂಸ್ಟರ್ ಡೋಸ್ ಪಡೆದ 4 ವಾರ ನಂತರ ಅಷ್ಟೇ ಪ್ರಮಾಣದಲ್ಲಿ 2ನೇ ಬೂಸ್ಟರ್ ಡೋಸನ್ನು ಪಡೆಯಬೇಕು.
ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರಿಗೆ ಇನ್ಮುಂದೆ ಕಡ್ಡಾಯ ಸ್ಕ್ರೀನಿಂಗ್; ಜೀನೋಮ್ ಸೀಕ್ವೆನ್ಸಿಂಗ್‌ಗೆ ಕ್ರಮ