ನವದೆಹಲಿ(ಜು.20): ಕೊರೋನಾದಿಂದ ಸಾವಿಗೀಡಾದವರ ಸಂಖ್ಯೆಯನ್ನು ಕೇಂದ್ರ ಮರೆಮಾಚಿದೆ ಎಂಬ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಆರೋಪಕ್ಕೆ ಕೇಂದ್ರದ ನೂತನ ಆರೋಗ್ಯ ಸಚಿವರು ಖಡಕ್ ತಿರುಗೇಟು ನೀಡಿದ್ದಾರೆ. ಯಾವುದೇ ರಾಜ್ಯಕ್ಕೆ ನಾವು ಕೊರೋನಾ ಸಾವನ್ನು ಕಡಿಮೆ ತೋರಿಸಿ, ಪ್ರಕರಣ ಸಂಖ್ಯೆ ಕಡಿಮೆ ತೋರಿಸಿ ಎಂದು ಹೇಳಿಲ್ಲ ಎಂದು ಆರೋಗ್ಯ ಸಚಿವ ಮನ್ಸೂಕ್ ಮಾಂಡವಿಯಾ ಸಂಸತ್ತಿನಲ್ಲಿ ಹೇಳಿದ್ದಾರೆ.
18 ವರ್ಷ ಮೇಲ್ಪಟ್ಟವರಿಗೆ 188 ಕೋಟಿ ಲಸಿಕೆ ಅವಶ್ಯಕತೆ ಇದೆ; ಸದ್ಯ 43 ಕೋಟಿ ಪೂರೈಕೆ!
undefined
ಕೊರೋನಾ ನಿರ್ವಹಣೆ ಕುರಿತು ಕೇಳಲಾದ ಪ್ರಶ್ನೆ ಹಾಗೂ ಆರೋಪಕ್ಕೆ ಉತ್ತರಿಸುತ್ತಾ ಮಾಂಡವಿಯಾ, ರಾಜ್ಯ ಸರ್ಕಾರಗಳು ತಮ್ಮ ತಮ್ಮ ರಾಜ್ಯದಲ್ಲಿನ ಕೊರೋನಾ ಸಾವು, ಪ್ರಕರಣ, ಗುಣಮುಖರ ಅಂಕಿ ಅಂಶವನ್ನು ಕೇಂದ್ರಕ್ಕೆ ಕಳುಹಿಸುತ್ತದೆ. ಎಲ್ಲಾ ರಾಜ್ಯಗಳ ಅಂಕಿ ಅಂಶಗಳನ್ನು ಸಂಗ್ರಹಿಸಿ ಕೇಂದ್ರ ಪ್ರಕಟಿಸುತ್ತದೆ. ಕೇಂದ್ರದ ಕೆಲಸ ಇಲ್ಲಿ ಪ್ರಕಟಣೆ ಮಾತ್ರ ಎಂದು ಮಾಂಡವಿಯಾ ಹೇಳಿದ್ದಾರೆ
Centre compiles & publishes the data sent in by state govts. Our work is to publish that data, & nothing else. We haven't told anyone to show less numbers (of deaths) or less positive cases. There's no reason for that. PM had said the same in meetings with CMs: Health Min in RS pic.twitter.com/Rod1osppD7
— ANI (@ANI)ನಾವು ಯಾವುದೇ ರಾಜ್ಯಕ್ಕೆ ಕಡಿಮೆ ಸಾವು, ಕಡಿಮೆ ಪ್ರಕರಣ ತೋರಿಸಿ ಎಂದು ಹೇಳಿಲ್ಲ. ಇದು ಸಾಧ್ಯವೂ ಇಲ್ಲ. ಮುಖ್ಯಮಂತ್ರಿ ಜೊತೆಗಿನ ಸಭೆಯಲ್ಲೂ ಪ್ರಧಾನಿ ತಮ್ಮ ತಮ್ಮ ರಾಜ್ಯದ ಪ್ರಕರಣ ಸಂಖ್ಯೆ ಸ್ಪಷ್ಟವಾಗಿ ತೋರಿಸಲು ಸೂಚಿಸಲಾಗಿತ್ತು. ಇಷ್ಟಾದರೂ ಕೇಂದ್ರದ ಸಾವಿನ ಸಂಖ್ಯೆ ಮರೆಮಾಚುತ್ತಿದೆ ಅನ್ನೋ ಆರೋಪಕ್ಕೆ ಅಧಾರವಿಲ್ಲ ಎಂದು ಮಾಂಡವಿಯಾ ಹೇಳಿದ್ದಾರೆ.
40 ಕೋಟಿ ಭಾರತೀಯರಿಗೆ ಕೊರೋನಾ ಅಪಾಯ; sero ಸಮೀಕ್ಷಾ ವರದಿ!
ಕೇಂದ್ರ ಸರ್ಕಾರ ಕೊರೋನಾ ನಿರ್ವಹಣೆಯನ್ನೂ ಸೂಕ್ತರೀತಿಯಲ್ಲಿ ಮಾಡಿಲ್ಲ. ಲಾಕ್‌ಡೌನ್‌ಗೆ ಸಿದ್ದತೆ ನಡೆಸಿರಲಿಲ್ಲ. ತಾವೇ ಕೋವಿಡ್ ನಿಯಮ ಉಲ್ಲಂಘಿಸಿದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಇನ್ನು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಹಾಗೂ ಕೆಲ ಮಾಧ್ಯಮಗಳು ಕೂಡ ನೈಜ ಸಾವಿನ ಸಂಖ್ಯೆ ಹಾಗೂ ಕೇಂದ್ರ ತೋರಿಸುತ್ತಿರುವ ಕೋವಿಡ್ ಸಾವಿನ ಸಂಖ್ಯೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ ಎಂಬ ಆರೋಪ ಮಾಡಿತ್ತು.