ಗುರುವಾಯೂರು ದೇಗುಲದ ಗಜರತ್ನಂ ಪದ್ಮನಾಭನ್‌ ಆನೆ ಇನ್ನಿಲ್ಲ!

By Kannadaprabha NewsFirst Published Feb 28, 2020, 7:44 AM IST
Highlights

ಕೇರಳ ಗುರುವಾಯೂರು ದೇಗುಲದ ಗಜರತ್ನಂ ಪದ್ಮನಾಭನ್‌ ಆನೆ ಇನ್ನಿಲ್ಲ| ಅತ್ಯಂತ ಜನಪ್ರಿಯ ಆನೆಗಳ ಪೈಕಿ ಒಂದಾದ ಗಜರತ್ನಂ

ತ್ರಿಶ್ಶೂರ್‌[ಫೆ.28]: ಕೇರಳದ ತ್ರಿಶ್ಶೂರ್‌ ಜಿಲ್ಲೆಯ ಗುರುವಾಯೂರು ದೇಗುಲದ ಅತ್ಯಂತ ಜನಪ್ರಿಯ ಆನೆಗಳ ಪೈಕಿ ಒಂದಾದ ಗಜರತ್ನಂ ಗುರುವಾಯೂರು ಪದ್ಮನಾಭನ್‌ ಬುಧವಾರ ಸಾವಿಗೀಡಾಗಿದೆ.

ದೇವಾಲಯದ ಕೃಷ್ಣನ ಮೂರ್ತಿಯನ್ನು ಈ ಆನೆ ಹೊರುತ್ತಿತ್ತು. 84 ವರ್ಷದ ಈ ಆನೆ ಕಳೆದ ಒಂದು ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿತ್ತು. ಪಾಲಕ್ಕಾಡಿನ ಒಟ್ಟಪಲ್ಲಂನಲ್ಲಿ 1954ರಲ್ಲಿ ಜನಿಸಿದ ಈ ಆನೆ, ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿತ್ತು.

Devotees paying their last respects to Guruvayur Padmanabhan 🙏🙏 pic.twitter.com/wD7y5DCYep

— Swamiji (@AOLSwamiji)

ಕಳೆದ 66 ವರ್ಷಗಳಿಂದ ಶ್ರೀ ಕೃಷ್ಣನ ಮೂರ್ತಿಯನ್ನು ಹೊತ್ತು ದೇವಾಲಯದ ಉತ್ಸವದಲ್ಲಿ ಭಾಗಿ ಆಗುತ್ತಿತ್ತು. ತನ್ನ ಉದ್ದನೆಯ ದಂತ ಮತ್ತು ದೈತ್ಯ ದೇಹದ ಕಾರಣದಿಂದ ಗಜರತ್ನ ಎಂಬ ಬಿರುದಿಗೆ ಪಾತ್ರವಾಗಿತ್ತು.

click me!