
ನವದೆಹಲಿ: ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಸಾಂವಿಧಾನಿಕ ಹುದ್ದೆಯಲ್ಲಿ ಇರುವ ವ್ಯಕ್ತಿಗಳು ಮತ್ತು ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದಲ್ಲಿ ಜನರಿಗೆ ಲಭ್ಯವಿದ್ದ ಹಜ್ ಯಾತ್ರೆಯ ವಿಐಪಿ ಕೋಟಾ ತೆಗೆದು ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ, ಯುಪಿಎ ಕಾಲದಲ್ಲಿ ವಿಐಪಿ ಕೋಟಾ ಆರಂಭಿಸಲಾಗಿತ್ತು. ಆದರೆ ಇಂಥ ಸಂಸ್ಕ್ರತಿಗೆ ಅಂತ್ಯ ಹಾಡುವ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. 2012ರಲ್ಲಿ ಇಂಥ ಸಂಸ್ಕೃತಿ ಆರಂಭಿಸಿದಾಗ ಪ್ರತಿ ವರ್ಷ 500 ಜನರು ಹೀಗೆ ವಿಐಪಿ ಕೋಟಾದಲ್ಲಿ ಹಜ್ ಯಾತ್ರೆ ಕೈಗೊಳ್ಳುತ್ತಿದ್ದರು. ಇದೀಗ ಸರ್ಕಾರ ವಿಐಟಿ ಕೋಟಾ ತೆಗೆದುಹಾಕಿದ ಕಾರಣ ಈ ವ್ಯಕ್ತಿಗಳು ಯಾರಿಗೂ ತಮ್ಮ ಕೋಟಾದಡಿ ಕಳುಹಿಸಿಕೊಡಲು ಶಿಫಾರಸು ಮಾಡುವಂತಿಲ್ಲ.
ಈ ಹಿಂದೆ, ಹಜ್ ಯಾತ್ರೆಗೆ (Haj Yatra) ಕೆಲವು ಮೀಸಲು ಸೀಟುಗಳನ್ನು (Seats) ಕೇಂದ್ರ ಸರ್ಕಾರ (Central Government) ಹೊಂದಿತ್ತು. ಈಗ ಅದನ್ನು ರದ್ದುಗೊಳಿಸಲಾಗಿದೆ. ಈ ಹಂತದ ನಂತರ, ಹಜ್‌ಗೆ ಹೋಗುವ ಎಲ್ಲಾ ಜನರು ಸಾಮಾನ್ಯ ಯಾತ್ರಿಗಳಂತೆ ಪ್ರಯಾಣಿಸುತ್ತಾರೆ. ಯಾವುದೇ ಪ್ರಯಾಣಿಕರು ಯಾವುದೇ ವಿಶೇಷ ವಿಐಪಿ ಸೇವೆಯನ್ನು (VIP Service) ಪಡೆಯಲು ಸಾಧ್ಯವಾಗುವುದಿಲ್ಲ. ರಾಷ್ಟ್ರಪತಿ ಕೋಟಾ (President Quota) ದಿಂದ 100, ಉಪರಾಷ್ಟ್ರಪತಿ (Vice President) ಕೋಟಾದಿಂದ 75, ಪ್ರಧಾನಿ (Prime mInister) ಕೋಟಾದಿಂದ 75, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರ (Ministry of minority Affairs) ಕೋಟಾದಿಂದ 50, ಹಜ್ ಸಮಿತಿ ಆಫ್ ಇಂಡಿಯಾ (Haj Committee of INdia) 200 ಸ್ಥಾನಗಳನ್ನು ಪಡೆಯುತ್ತಿತ್ತು. ಆದರೆ ಈಗ ಹೊಸ ಹಜ್ ನೀತಿಯ ಕರಡಿನಲ್ಲಿ ಅದನ್ನು ರದ್ದುಗೊಳಿಸಲಾಗುತ್ತಿದೆ.
ಇದನ್ನು ಓದಿ: ಹಜ್ ಯಾತ್ರೆಯ ಕುರಿತು ದೊಡ್ಡ ನಿರ್ಧಾರ, ಕೇಂದ್ರದ ವಿಐಪಿ ಕೋಟಾ ಅಂತ್ಯ?
ಅಲ್ಲದೆ, ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ ಹಜ್ ನೀತಿ ಘೋಷಿಸುತ್ತದೆ ಎಂದೂ ಮೂಲಗಳು ತಿಳಿಸಿವೆ. ವಿಐಪಿ ಕೋಟಾ ತೆಗೆದುಹಾಕಿದ ಕಾರಣ ಇನ್ಮುಂದೆ ಎಲ್ಲ ಹಜ್ ಯಾತ್ರಿಕರು ಹಜ್ ಸಮಿತಿ ಮೂಲಕ ಹಾಗೂ ಖಾಸಗಿ ಆಪರೇಟರ್‌ಗಳ ಮೂಲಕವೇ ಪ್ರಯಾಣ ಮಾಡಬಹುದಾಗಿದೆ.
ನಿರ್ಬಂಧ ತೆಗೆದು ಹಾಕಿರುವ ಸೌದಿ ಅರೇಬಿಯಾ: ಇತ್ತೀಚೆಗೆ, ಸೌದಿ ಅರೇಬಿಯಾ ಮೂರು ವರ್ಷಗಳವರೆಗೆ ಹಜ್ ಯಾತ್ರಿಕರ ಸಂಖ್ಯೆಯ ಮೇಲಿನ ನಿರ್ಬಂಧ ತೆಗೆದುಹಾಕುವುದಾಗಿ ಘೋಷಿಸಿತ್ತು. ಸೌದಿ ಅರೇಬಿಯಾದ ಈ ನಿರ್ಧಾರದ ನಂತರ, ಕೊರೋನಾ ಸಾಂಕ್ರಾಮಿಕದ ಮೊದಲಿದ್ದಷ್ಟೇ ಹಜ್ ಯಾತ್ರಿಕರು ಈಗ ಹಜ್‌ಗೆ ಹೋಗಲು ಸಾಧ್ಯವಾಗುತ್ತದೆ. ಅದಲ್ಲದೆ, ವಯೋಮಿತಿ ನಿರ್ಬಂಧ ತೆಗೆದುಹಾಕುವುದಾಗಿಯೂ ಸರ್ಕಾರ ಘೋಷಿಸಿತ್ತು.
ಇದನ್ನೂ ಓದಿ: ಹಜ್ ಯಾತ್ರೆ ವಿದೇಶಿಗರಿಗೆ ಅವಕಾಶವಿಲ್ಲ!
ಕೊರೋನಾ ಕಾರಣದಿಂದಾಗಿ ನಿರ್ಬಂಧ: 2019 ರಲ್ಲಿ ಕೊರೋನಾಕ್ಕಿಂತ ಮೊದಲು ಸುಮಾರು 25 ಲಕ್ಷ ಜನರು ಹಜ್‌ಗೆ ಪ್ರಯಾಣ ಮಾಡುತ್ತಿದ್ದರು. ಆದರೆ ಸಾಂಕ್ರಾಮಿಕ ರೋಗದಿಂದಾಗಿ ಆ ನಂತರದ ಎರಡು ವರ್ಷಗಳಲ್ಲಿ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿತ್ತು. ರಿಯಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವ ತೌಫಿಕ್ ಅಲ್ ರಬಿಯಾ, ಸೌದಿ ಅರೇಬಿಯಾ ಈ ವರ್ಷ ಹಜ್ ಯಾತ್ರಿಕರ ಸಂಖ್ಯೆಯನ್ನು ಮಿತಿಗೊಳಿಸುವುದಿಲ್ಲ ಎಂದು ಹೇಳಿದ್ದರು ಇದಲ್ಲದೇ ಕೋವಿಡ್ ಸಾಂಕ್ರಾಮಿಕ ರೋಗದ ವೇಳೆ ಹಜ್ ಯಾತ್ರಿಗಳಿಗೆ ವಯೋಮಿತಿ ನಿಗದಿ ಮಾಡಲಾಗಿತ್ತು. ಈಗ ಅದನ್ನೂ ಕೂಡ ತೆಗೆದುಹಾಕಲಾಗಿದೆ ಎಂದಿದ್ದಾರೆ. ಯಾವುದೇ ವಯೋಮಿತಿಯರು ಕೂಡ ಹಜ್‌ಗೆ ಪ್ರಯಾಣಿಸಬಹುದು ಎಂದಿದ್ದಾರೆ. ಈ ಹಿಂದೆ ಗರಿಷ್ಠ ವಯೋಮಿತಿಯನ್ನು 65 ವರ್ಷಕ್ಕೆ ನಿಗದಿಪಡಿಸಲಾಗಿತ್ತು.
ಇದನ್ನೂ ಓದಿ: 'ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಹಜ್ ಯಾತ್ರೆಯ ಅವಕಾಶ'
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ