ಪಾಸ್‌ಪೋರ್ಟ್‌ಗೆ ಜನನ ಪ್ರಮಾಣಪತ್ರ ಕಡ್ಡಾಯ: ಕೇಂದ್ರ ಸರ್ಕಾರ ಆದೇಶ

Published : Mar 02, 2025, 06:59 AM ISTUpdated : Mar 02, 2025, 07:07 AM IST
ಪಾಸ್‌ಪೋರ್ಟ್‌ಗೆ ಜನನ ಪ್ರಮಾಣಪತ್ರ ಕಡ್ಡಾಯ: ಕೇಂದ್ರ ಸರ್ಕಾರ ಆದೇಶ

ಸಾರಾಂಶ

2023ರ ಅಕ್ಟೋಬರ್ 1ರ ಬಳಿಕ ಹುಟ್ಟಿದ ಪ್ರತಿಯೊಬ್ಬ ನಾಗರಿಕನಿಗೂ ಪಾಸ್‌ಪೋರ್ಟ್ ಪಡೆಯಲು ಜನನ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 

ನವದೆಹಲಿ (ಮಾ.02): 2023ರ ಅಕ್ಟೋಬರ್ 1ರ ಬಳಿಕ ಹುಟ್ಟಿದ ಪ್ರತಿಯೊಬ್ಬ ನಾಗರಿಕನಿಗೂ ಪಾಸ್‌ಪೋರ್ಟ್ ಪಡೆಯಲು ಜನನ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾನೂನು-2023ರ ಅನ್ವಯ ಶುಕ್ರವಾರ ಅಧಿಕೃತ ಗೆಜೆಟ್‌ನಲ್ಲಿ ಈ ಅಧಿಸೂಚನೆ ಹೊರಡಿಸಲಾಗಿದೆ.

ಆದರೆ 2025ರ ಪಾಸ್‌ಪೋರ್ಟ್ (ತಿದ್ದುಪಡಿ) ನಿಯಮಗಳ ಪ್ರಕಾರ, ಈ ದಿನಾಂಕಕ್ಕಿಂತ ಮೊದಲು ಜನಿಸಿದವರಿಗೆ ಜನನ ಪುರಾವೆಯಾಗಿ ಪರ್ಯಾಯ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅವರು ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಶಾಲೆಯ ಟ್ರಾನ್ಸಫರ್​ ಪ್ರಮಾಣಪತ್ರಗಳಂತಹ ಇತರ ದಾಖಲೆಗಳನ್ನು ಸಲ್ಲಿಸಬಹುದಾಗಿದೆ. ಪಾಸ್​ಪೋರ್ಟ್​ ಪಡೆಯುವ ನೀತಿಯಲ್ಲಿ ಸರಳೀಕರಣ ಮಾಡಲು ಮುಂದಾದ ಕೇಂದ್ರ ಸರ್ಕಾರ, ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾನೂನನ್ನು 2023ರ ಅಕ್ಟೋಬರ್ 1ರಿಂದ ಜಾರಿಗೊಳಿಸಿತ್ತು.

ಮಹದಾಯಿ ಟ್ರಿಬ್ಯುನಲ್ ಅವಧಿ 6 ತಿಂಗಳು ವಿಸ್ತರಣೆ: ರ್ನಾಟಕ-ಗೋವಾ ನಡುವಿನ ಜಲಯುದ್ಧ ಇತ್ಯರ್ಥಕ್ಕೆ ಸ್ಥಾಪಿತವಾಗಿದ್ದ ಮಹದಾಯಿ ಜಲ ವಿವಾದ ನ್ಯಾಯಾಧಿಕರಣಕ್ಕೆ ತನ್ನ ಹೆಚ್ಚುವರಿ ಅಂತಿಮ ವರದಿ ಸಲ್ಲಿಕೆಗೆ ಕೇಂದ್ರ ಸರ್ಕಾರ ಮತ್ತೆ 6 ತಿಂಗಳು ಗಡುವು ವಿಸ್ತರಿಸಿದೆ. ವರದಿಗೆ ಅಗತ್ಯವಿರುವ ಸಂಶೋಧನೆಗಳನ್ನು ಪೂರ್ಣಗೊಳಿಸಲು ನ್ಯಾಯಮಂಡಳಿಗೆ ಕಾಲಾವಕಾಶ ನೀಡಿ ಜಲಶಕ್ತಿ ಸಚಿವಾಲಯ ಪ್ರಕಟಣೆ ಹೊರಡಿಸಿದೆ. 2018ರ ಆ.4ರಂದು ನ್ಯಾಯಮಂಡಳಿ ಮಹದಾಯಿ ಜಲ ವಿವಾದಕ್ಕೆ ಸಂಬಂಧಿಸಿದ ತನ್ನ ಮೊದಲ ಐತೀರ್ಪಿನ ವರದಿ ನೀಡಿತ್ತು. 2020ರಲ್ಲಿ ಅಧಿಸೂಚನೆ ಕೂಡ ಪ್ರಕಟವಾಗಿತ್ತು. 

ಇಡ್ಲಿಗೆ ಡೆಡ್ಲಿ ಪ್ಲಾಸ್ಟಿಕ್‌ ಬಳಸಿದವರಿಗೆ ನೋಟಿಸ್‌ ಜಾರಿ: ಸಚಿವ ದಿನೇಶ್ ಗುಂಡೂರಾವ್‌

ಆದರೆ ಗೋವಾ, ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರಗಳು ಹೆಚ್ಚುವರಿ ಸ್ಪಷ್ಟನೆಗಳನ್ನು ಕೇಳಿದ್ದವು. ಹೀಗಾಗಿ 1 ವರ್ಷದೊಳಗೆ ಮತ್ತೊಂದು ವರದಿ ಸಲ್ಲಿಸುವ ಅಗತ್ಯವಿದೆ ಎಂದು ನ್ಯಾಯಾಧಿಕರಣ ಕಾಲಾವಕಾಶ ಕೋರಿತ್ತು. ಆ ಪ್ರಕಾರ ಈಗ 6 ತಿಂಗಳು ವಿಸ್ತರಣೆ ಮಾಡಿದೆ. 2020ರ ಬಳಿಕ ನ್ಯಾಯಾಧಿಕರಣಕ್ಕೆ ಇದುವರಿಗೆ 6 ತಿಂಗಳು ವಿಸ್ತರಣೆ ಲಭಿಸಿದೆ. ಮಹದಾಯಿ ಜಲ ವಿವಾದವು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಸಂಬಂಧಿಸಿದ್ದು ನದಿ ನೀರು ಹಂಚಿಕೆ ಸಂಬಂಧ ದಶಕಗಳಿಂದ ಹೋರಾಟ ನಡೆಯುತ್ತಿದೆ. ಈ ವ್ಯಾಜ್ಯಗಳ ತೀರ್ಮಾನಕ್ಕೆ ಮೊದಲಿಗೆ 2010ರ ನವೆಂಬರ್‌ 10ರಂದು ಅಂತರ್‌ ರಾಜ್ಯ ನದಿ ನೀರು ವಿವಾದ ಕಾಯ್ದೆ, 1956ರ ಅಡಿ ಮಹದಾಯಿ ಜಲ ವಿವಾದ ನ್ಯಾಯಮಂಡಳಿ ಸ್ಥಾಪಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!