ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

By Kannadaprabha NewsFirst Published Aug 20, 2020, 1:21 PM IST
Highlights

ದೇಶದ ಕಬ್ಬು ಬೆಳೆಗಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್ ನೀಡಲಾಗಿದೆ.ಸಂಕಷ್ಟ ಎದುರಿಸುತ್ತಿರುವ ರೈತರು ಇದರಿಂದ ನಿರಾಳರಾಗಬಹುದಾಗಿದೆ.

 ನವದೆಹಲಿ (ಆ.20): ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡುವ ದರವನ್ನು ಹೆಚ್ಚಿಸಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 

ಕಾರ್ಖಾನೆಗಳು ಇದುವರೆಗೆ ಪ್ರತಿ ಕ್ವಿಂಟಾಲ್‌ಗೆ ರೈತರಿಗೆ 275 ರು. ನೀಡುತ್ತಿದ್ದು, ಅದನ್ನು 10 ರು.ನಷ್ಟುಹೆಚ್ಚಿಸಿ 285 ರು.ಗೆ ತಲುಪಿಸಲಾಗಿದೆ. 

ರೈತರಿಗೆ ಗುಡ್ ನ್ಯೂಸ್ : ಶೀಘ್ರ ರೈತರಿಗೆ ಸಿಗಲಿದೆ ಯೂರಿಯಾ...

2020-21ನೇ ಮಾರುಕಟ್ಟೆವರ್ಷಕ್ಕೆ (ಅಕ್ಟೋಬರ್‌-ಸೆಪ್ಟೆಂಬರ್‌) ಅನ್ವಯ ಆಗುವಂತೆ ನ್ಯಾಯಯುತ ದರ (ಎಫ್‌ಆರ್‌ಪಿ) ಹೆಚ್ಚಿಸಿ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ ನಿರ್ಣಯ ತೆಗೆದುಕೊಂಡಿದೆ.

ಇದರಿಂದ ಸಖಷ್ಟ ಎದುರಿಸುತ್ತಿರುವ ದೇಶದ ಕಬ್ಬು ಬೆಳೆಗಾರರಿಗೆ ಇನ್ನಷ್ಟು ನಿರಾಳತೆಯಾಗಲಿದೆ.

click me!