ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕ ಸ್ಥಬ್ಧ ಚಿತ್ರಕ್ಕೆ ಅವಕಾಶ ನಿರಾಕರಣೆ, ಕೇಂದ್ರದ ವಿರುದ್ಧ ಆಕ್ರೋಶ!

By Suvarna NewsFirst Published Jan 7, 2023, 6:11 PM IST
Highlights

ಗಣರಾಜ್ಯೋತ್ಸವ ಸಂಭ್ರಮಕ್ಕೆ ದೇಶ ಸಜ್ಜಾಗುತ್ತಿದೆ. ಆದರೆ ಗಣರಾಜ್ಯೋತ್ಸವ ಈ ಬಾರಿ ಕರ್ನಾಟಕಕ್ಕೆ ನಿರಾಸೆ ತಂದಿದೆ. ಕಳೆದ 13 ವರ್ಷಗಳಿಂದ ದೆಹಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕ ಸ್ಥಬ್ದ ಚಿತ್ರ ಸಂಚಲನ ಸೃಷ್ಟಿಸಿತ್ತು. ಆದರೆ ಈ ಬಾರಿ ಕರ್ನಾಟಕ ಟ್ಯಾಬ್ಲೋಗೆ ಕೇಂದ್ರ ಸರ್ಕಾರದ ಸಮಿತಿ ಅವಕಾಶ ನಿರಾಕರಿಸಿದೆ.

ನವದೆಹಲಿ(ಜ.07): ಗಣರಾಜ್ಯೋತ್ಸವ ಆಚರಣೆಗೆ ತಯಾರಿ ನಡೆಯುತ್ತಿದೆ. ದೆಹಲಿಯಲ್ಲಿ ನಡೆಯುವ ಗಣರಾಜ್ಯೋತವದಲ್ಲಿ ಪಾಲ್ಗೊಳ್ಳುವುದೇ ಪ್ರತಿಷ್ಠೆಯ ವಿಚಾರ. ಕಳೆದ 13 ವರ್ಷಗಳಿಂದ ದೆಹಲಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಕರ್ನಾಟಕ ಸ್ಥಬ್ಧ ಚಿತ್ರಗಳು ರಾರಾಜಿಸಿತ್ತು. ಆದರೆ ಈ ಬಾರಿ ಕರ್ನಾಟಕದ ಟ್ಯಾಬ್ಲೋಗೆ ಕೇಂದ್ರ ಸರ್ಕಾರದ ಸಮಿತಿ ಅವಕಾಶ ನಿರಾಕರಿಸಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕದ ಸಂಸ್ಕೃತಿ, ವಿಶೇಷತೆಯನ್ನು ಸ್ಥಬ್ಧಚಿತ್ರದ ಮೂಲಕ ಸಾರಲಾಗಿತ್ತು. ಆದರೆ ಈ ಬಾರಿ ಟ್ಯಾಬ್ಲೋಗೆ ಅವಕಾಶ ನಿರಾಕರಿಸಿರುವುದು ಇದೀಗ ರಾಜ್ಯದಲ್ಲಿ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ.

ಕೇಂದ್ರ ಸರ್ಕಾರದ ಸಮಿತಿ ಗಣರಾಜ್ಯೋತ್ಸವದ ಪರೇಡ್‌ಗೆ ಸ್ಥಬ್ದಚಿತ್ರಗಳ ಆಯ್ಕೆ ನಡೆಯಲಿದೆ. ಈ ಬಾರಿ ಸಭೆ ಸೇರಿದ ಸಮಿತಿ ಕರ್ನಾಟಕದ ಬದಲು ಬೇರೆ ರಾಜ್ಯಗಳಿಗೆ ಅವಕಾಶ ನೀಡಲು ನಿರ್ಧರಿಸಿದೆ. ಕಳೆದ 13 ವರ್ಷಗಳಿಂದ ಕರ್ನಾಟಕಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ಹಲವು ರಾಜ್ಯಗಳು ಒಂದು ಬಾರಿಯೂ ಪ್ರತಿನಿಧಿಸುವ ಅವಕಾಶ ಸಿಕ್ಕಿಲ್ಲ. ಇತರ ರಾಜ್ಯಗಳಿಗೂ ಅವಕಾಶ ನೀಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ ಬಾರಿ 13 ರಾಜ್ಯಗಳ ಸ್ಥಬ್ಧಚಿತ್ರಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಈ ಪಟ್ಟಿಯಲ್ಲಿ ಅತೀ ಹೆಚ್ಚು ಬಾರಿ ಕರ್ನಾಟಕ ಸ್ಥಬ್ಧಚಿತ್ರವನ್ನು ಪ್ರದರ್ಶಿಸಿದೆ. ಹೀಗಾಗಿ ಈ ಬಾರಿ ಕರ್ನಾಟಕದ ಅವಕಾಶವನ್ನು ಬೇರೆ ರಾಜ್ಯಕ್ಕೆ ನೀಡಲು ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ಹೇಳಿವೆ.

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಟ್ಯಾಬ್ಲೋಗೆ 2ನೇ ಪ್ರಶಸ್ತಿ: ವಾರ್ತಾ ಇಲಾಖೆ ಆಯುಕ್ತ ಹರ್ಷ ಸಂತಸ

ಕರ್ನಾಟಕದ ಸಾಧಕ ನಾರಿಯರ ಕುರಿತ ಸ್ಥಬ್ಧಚಿತ್ರಕ್ಕೆ ಅನುಮತಿ ಕೋರಿ ರಾಜ್ಯ ಸರ್ಕಾರ ಕೇಂದ್ರದ ಸಮಿತಿಗೆ ಪತ್ರ ಬರೆದಿತ್ತು. ಆದರೆ ಅಂತಿಮ ಹಂತದಲ್ಲಿ ಕೇಂದ್ರ ಸರ್ಕಾರದ ಸಮಿತಿ ಕರ್ನಾಟಕಕ್ಕೆ ಅವಕಾಶ ನಿರಾಕರಿಸಿದೆ. ಕೇರಳ, ತಮಿಳುನಾಡು ಸೇರಿದಂತೆ ಇತರ 13 ರಾಜ್ಯಗಳ ಸ್ಥಬ್ಧಚಿತ್ರಕ್ಕೆ ಅವಕಾಶ ನೀಡಿದೆ.  

ಟ್ಯಾಬ್ಲೋಗೆ ಅವಕಾಶ ನಿರಾಕರಣೆ ಇದೀಗ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಾಳುತ್ತಿದೆ. ವಿಶ್ವದಲ್ಲೇ ಇತಿಹಾಸ ಹೊಂದಿರುವ ಪ್ರಗತಿಪರ ರಾಜ್ಯ ಕರ್ನಾಟಕ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಕೇಂದ್ರ ಸರ್ಕಾರಕ್ಕೆ ಗುಜರಾತ್ ಕೇಂದ್ರಸ್ಥಾನವಾಗಿದೆ. ಕರ್ನಾಟಕವನ್ನು ಕಡೆಗಣಿಸುತ್ತಿದೆ ಎಂದು ಸಂಸದ ಡಿಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಣರಾಜ್ಯೋತ್ಸವದಲ್ಲಿ ಟ್ಯಾಬ್ಲೋಗೆ ಅವಕಾಶ ನಿರಾಕರರಣೆ ಕನ್ನಡಿಗರಿಗೆ ಮಾಡಿದ ಅನ್ಯಾಯ ಎಂದು ಡಿಕೆ ಸುರೇಶ್ ಹೇಳಿದ್ದಾರೆ. ಈ ಕುರಿತು ಪ್ರತಿಭಟನೆ ನಡೆಸಲು ಕಾಂಗ್ರೆಸ್ ಸಿದ್ಧ ಎಂದು ಸುರೇಶ್ ಹೇಳಿದ್ದಾರೆ.

ಸ್ಥಬ್ಧಚಿತ್ರಕ್ಕೆ ಅವಕಾಶ ಇದೆ, ಬೊಮ್ಮಾಯಿ ಸ್ಪಷ್ಟನೆ

ವಿವಾದಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಕಳೆದ ವರ್ಷ ಅವಕಾಶ ನೀಡಲಾಗಿತ್ತು.  ಹಿಂದಿನ ಬಾರಿ ಪ್ರಶಸ್ತಿ ಬಂದಿತ್ತು. ಈ ಬಾರಿಯೂ ಕರ್ನಾಟಕದ ಸ್ಥಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಇರಲಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.  

ಅಂಕೋಲಾ ದಹಿಂಕಾಲ ಉತ್ಸವದಲ್ಲಿ ಗಮನ ಸೆಳೆದ ಕಾಂತಾರ ಸ್ತಬ್ಧ ಚಿತ್ರ; ಜನರು ಫಿದಾ

36 ಸ್ಥಬ್ಧಚಿತ್ರಗಳ ಪೈಕಿ 12 ಮಾತ್ರ ಆಯ್ಕೆಯಾಗುತ್ತದೆ. ಕಳೆದ 13 ವರ್ಷ ಕರ್ನಾಟಕಕ್ಕೆ ಅವಕಾಶ ನೀಡಲಾಗಿದೆ. ಸ್ಥಬ್ದಚಿತ್ರ ಆಯ್ಕೆ ಒಂದು ವ್ಯವಸ್ಥೆ ಅಡಿ ನಡೆಯುತ್ತದೆ. ಇದಕ್ಕೆ ಪ್ರತ್ಯೇಕ ಸಮಿತಿ ಇರುತ್ತದೆ. 36 ರಾಜ್ಯಗಳ ಸ್ಥಬ್ದಚಿತ್ರ ಪ್ರದರ್ಶನಕ್ಕೆ ಸಮಯದ ಅಭಾವವಿರುವ ಕಾರಣ ಆಯ್ಕೆ 12ಕ್ಕೆ ಮಾತ್ರ ಅವಕಾಶವಿದೆ. ಇದೀಗ ವಿವಾದ ಮಾಡುವ ಅಗತ್ಯವಿಲ್ಲ. ಕಳಸಾ ಬಂಡೂರಿ, ಭದ್ರಾ ಯೋಜನೆ ಸೇರಿ ಜಲ ನೆಲ ಸಂಸ್ಕೃತಿಗೆ ಕೇಂದ್ರ ಸರ್ಕಾರ ಮಾನ್ಯತೆ ನೀಡಿದೆ. ಸ್ಥಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ಕುರಿತು ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. 

click me!