
ನವದೆಹಲಿ(ಜು.27): ಭಾರತದಲ್ಲಿ ಗುರುತಿನ ಚೀಟಿ, ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಬ್ಯಾಂಕ್ ಖಾತೆ ಸೇರಿದಂತೆ ಯಾವುದೇ ವಿಚಾರಕ್ಕೂ ಪ್ರಮುಖ ದಾಖಲೆ ಅತೀ ಅಗತ್ಯ. ಇದೀಗ ಕೇಂದ್ರ ಸರ್ಕಾರ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ 2023ರನ್ನು ಮಂಡಿಸಿದೆ. ಈ ಕಾಯ್ದೆಗೆ ಸಂಸತ್ತು ಅಂಗೀಕಾರ ನೀಡಿದೆ. ಪ್ರಮುಖವಾಗಿ ಇನ್ನು ಮುಂದೆ ಜನನ ಪ್ರಮಾಣ ಪತ್ರವೇ ಪ್ರಮುಖ ದಾಖಲೆಯಾಗಲಿದೆ. ತಮ್ಮ ಹುಟ್ಟಿದ ದಿನಾಂಕ, ಸ್ಥಳವನ್ನು ಖಾತ್ರಿಪಡಿಸಲು ಇನ್ಮು ಮುಂದೆ ಜನನ ಪ್ರಮಾಣ ಪತ್ರವೇ ಪ್ರಮುಖ ದಾಖಲೆಯಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ಜನನ ಪ್ರಮಾಣ ಪತ್ರವನ್ನು ಅತ್ಯಂತ ಪ್ರಮುಖ ದಾಖಲೆಯಾಗಿ ಪರಿಗಣಿಸಿದೆ.
ಮತದಾರರ ಗುರುತಿನ ಚೀಟಿಯಲ್ಲಿ ಹೆಸರು ಸೇರ್ಪಡೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ನಿವೇಷನ ನೋಂದಣಿ ಸೇರಿದಂತೆ ಇತರ ರಾಷ್ಟ್ರೀಯ ನೋಂದಣಿಗಳಿಗೆ ಜನನ ಪ್ರಮಾಣ ಪತ್ರವೇ ಪ್ರಮುಖ ದಾಖಲೆಯಾಗಿದೆ. ತಮ್ಮ ಜನನ ದಿನಾಂಕ, ಹುಟ್ಟಿದ ಸ್ಥಳದ ಕುರಿತ ಮಾಹಿತಿಗಳನ್ನು ದೃಢೀಕರಿಸಲು ಜನನ ಪ್ರಮಾಣ ಪತ್ರ ಪ್ರಮುಖ ದಾಖಲೆಯಾಗಿ ಪರಿಗಣಿಸಲಾಗುತ್ತದೆ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ.
ITR Filing: 2022-23ನೇ ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಈ 10 ದಾಖಲೆಗಳು ಅಗತ್ಯ
ಶಿಕ್ಷಣ ಸಂಸ್ಥೆಗೆ ಪ್ರವೇಶ, ಚಾಲನಾ ಪರವಾನಗಿ ಮತ್ತು ಮತದಾರರ ಗುರುತಿನ ಪಟ್ಟಿಸೇರಿದಂತೆ ಅನೇಕ ಕಡೆಗಳಲ್ಲಿ ಜನರು ತಮ್ಮ ಹುಟ್ಟಿದ ಸ್ಥಳ ಮತ್ತು ದಿನಾಂಕವನ್ನು ಸಾಬೀತು ಪಡಿಸಲು ಇನ್ನುಮುಂದೆ ಜನನ ಪ್ರಮಾಣ ಪತ್ರ ಒಂದನ್ನೇ ದಾಖಲೆಯಾಗಿ ಬಳಸಲು ಅನುಮತಿಸುವ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ- 2023ರ ಮಸೂದೆಯನ್ನು ಸಂಸತ್ತು ಬುಧವಾರ ಅಂಗೀಕರಿಸಿದೆ.
ಈ ನೂತನ ಕಾಯಿದೆ ಜಾರಿಗೆ ಬಂದ ದಿನಾಂಕ ಹಾಗೂ ಅದರ ನಂತರದ ದಿನಗಳಲ್ಲಿ ಜನಿಸಿದವರು ಶೈಕ್ಷಣಿಕ ಸಂಸ್ಥೆಗಳಿಗೆ ಪ್ರವೇಶ, ಚಾಲನಾ ಪರವಾನಗಿ, ಮತದಾರರ ಗುರುತಿನ ಪಟ್ಟಿಗೆ ಸೇರ್ಪಡೆ, ಮದುವೆ ನೋಂದಣಿ, ಕೇಂದ್ರ ಅಥವಾ ರಾಜ್ಯ ಸ್ವಾಯತ್ತತೆಯ ಯಾವುದೇ ಸಂಸ್ಥೆಯಡಿ ಹುದ್ದೆಗೆ ನೇಮಕ ಮತ್ತು ಆಧಾರ್ ಸೇರಿದಂತೆ ವಿವಿಧ ದಾಖಲಾತಿಗಳಿಗೆ ನೋಂದಣಿ ಮಾಡಿಸಲು ತಮ್ಮ ಹುಟ್ಟಿದ ದಿನಾಂಕ ಮತ್ತು ಸ್ಥಳವನ್ನು ಸಾಬೀತು ಪಡೆಸಲು ಕೇವಲ ಜನನ ಪ್ರಮಾಣಪತ್ರವೊಂದನ್ನೇ ಆಧಾರವಾಗಿ ಬಳಸಬಹುದಾಗಿದೆ. ಜನನ ಮತ್ತು ಮರಣಗಳ ನೋಂದಣಿ ಕಾಯಿದೆಯಲ್ಲಿನ ಮೊದಲ ತಿದ್ದುಪಡಿ ಇದಾಗಿದೆ.
ಸಾಮಾಜಿಕ ಬದಲಾವಣೆ ಮತ್ತು ತಾಂತ್ರಿಕ ಪ್ರಗತಿಗೆ ತಕ್ಕಂತೆ ಕಾಯಿದೆಯನ್ನು ಹೆಚ್ಚು ನಾಗರಿಕ ಸ್ನೇಹಿಯನ್ನಾಗಿ ಮಾಡಲು ತಿದ್ದುಪಡಿಯ ಅವಶ್ಯವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬದಲಾಗಿ ಮಸೂದೆ ಮಂಡನೆ ಮಾಡಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ.
ಎಲ್ಲಿಗಾದರೂ ಹೋಗಿ, ಕಾರಲ್ಲಿ ಮಾತ್ರ ಈ ವಸ್ತುಗಳು ಇರುವಂತೆ ನೋಡಿಕೊಳ್ಳಿ
ಈ ಮಸೂದೆಗೆ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ವಿರೋಧ ವ್ಯಕ್ತಪಡಿಸಿದ್ದಾರೆ.ಈ ಬಿಲ್‌ಗೆ ಸಾಂವಿಧಾನಿಕ ಪ್ರಮಾಮುಖ್ಯತೆ ಕಾಣಿಸುತ್ತಿಲ್ಲ ಎಂದು ತಿವಾರಿ ಹೇಳಿದ್ದಾರೆ. ಇದೇ ವೇಳೆ ಮಂಗಳಮುಖಿಯರ ಜನನ ಪ್ರಮಾಣ ಪತ್ರಗಳನ್ನು ಗೌಪ್ಯವಾಗಿಡಬೇಕಾಗಿದೆ. ಆದರೆ ಈ ಮಸೂದೆಯ್ಲಲಿ ಸ್ಪಷ್ಟ ಮಾಹಿತಿಗಳ ಕೊರತೆ ಇದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ