ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಲೀಲೆ| ಸ್ವಾಮೀಜಿಯನ್ನು ನಂಬಿ ಕೆಟ್ಟ ಡೆಲ್ಲಿ ಪಬ್ಲಿಕ್ ಸ್ಕೂಲ್| ಅಕ್ರಮ ಬಯಲು, ಡೆಲ್ಲಿ ಪಬ್ಲಿಕ್ ಸ್ಕೂಲ್ CBSE ಮಾನ್ಯತೆ ರದ್ದು
ಹಮದಾಬಾದ್[ಡಿ.02]: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು ಬಾನುವಾರದಂದು ಪ್ರಖ್ಯಾತ ಶಿಕ್ಷಣ ಸಂಸ್ಥೆ ಡೆಲ್ಲಿ ಪಬ್ಲಿಕ್ ಸ್ಕೂಲ್ ಗೆ ನೀಡಲಾಗಿದ್ದ ಮಾನ್ಯತೆಯನ್ನು ರದ್ದುಗೊಳಿಸಿದೆ. ಡೆಲ್ಲಿ ಪಬ್ಲಿಕ್ ಸ್ಕೂಲ್ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಆಶ್ರಮಕ್ಕೆ ಭೂಮಿಯನ್ನು ಭೋಗ್ಯಕ್ಕೆ ನೀಡಿದ ಆರೋಪದಡಿ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ.
ಅಹಮದಾಬಾದ್ ನ ಹೀರಾಪುರ್ ಹೊರ ಪ್ರದೇಶದಲ್ಲಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್ ಶಾಲೆಯ ಮಾನ್ಯತೆಯನ್ನು CBSE ರದ್ದುಗೊಳಿಸಿದೆ. 'ಗುಜರಾತ್ ಸರ್ಕಾರ ನೀಡಿರುವ ವರದಿಯಲ್ಲಿ, ಶಾಲೆಯು ನಕಲಿ NOC ಸಲ್ಲಿಸಿ CBSE ಮಾನ್ಯತೆ ಪಡೆದಿರುವುದಾಗಿ ತಿಳಿಸಲಾಗಿದೆ. ಈ ವರದಿಯನ್ನಾಧರಿಸಿ ಈ ಕ್ಷಣದಿಂದಲೇ ಶಾಲೆಯ ಮಾನ್ಯತೆ ರದ್ದುಗೊಳಿಸಲಾಗಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿತ್ಯಾನಂದನ ಬಂಧನಕ್ಕೆ ಗುಜರಾತ್ ಪೊಲೀಸರ ಸ್ಕೆಚ್ : ರಾಮನಗರ ಪೊಲೀಸ್ ಸಾಥ್
ವಿದ್ಯಾರ್ಥಿಗಳ ಕತೆ ಏನು?
ಇನ್ನು ಈ ಶಾಲೆಯಲ್ಲಿ ಕಲಿಯುತ್ತಿರುವ 10 ಹಾಗೂ 12ನೇ ತರಗತಿಯ ಮಕ್ಕಳಿಗೆ 2020ರ ಪರೀಕ್ಷೆ ಬರೆಯುವ ಅವಕಾಶ ಸಿಗಲಿದೆ. ಇನದ್ನುಳಿದಂತೆ 9 ಹಾಗೂ 11ನೇ ತರಗತಿಯ ವಿದ್ಯಾರ್ಥಿಗಳನ್ನು CBSE ಮಾನ್ಯತೆ ಇರುವ ಬೇರೆ ಶಾಲೆಗಳಿಗೆ ವರ್ಗಾಯಿಸಲಾಗುತ್ತದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಧಾರ್ಮಿಕ ಸಂಸ್ಥೆಗಳಿಗೆ ನೀಡಿರುವ ಜಮೀನು ಶಾಲಾ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ. ಹೀಗಿದ್ದರೂ ಈ ಸ್ಪಷ್ಟನೆ ರಾಜ್ಯ ಶಿಕ್ಷಣ ಮಂಡಳಿಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು CBSE ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
CBSCಯು ಇತ್ತೀಚೆಗಷ್ಟೇ ಅಲ್ಲಿನ ಶಾಲೆಗೆ ಪ್ರವೇಶಾತಿ ಪಡೆದ ಮಕ್ಕಳ ದಾಖಲಾತಿಯನ್ನು ಅಕ್ರಮವಾಗಿ ತಡೆಹಿಡಿಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹೀಗಿರುವಾಗ ಶಾಲಾ ವ್ಯಾಪ್ತಿಗೊಳಪಡುವ ಜಮೀನನ್ನು ಹೇಗೆ ನಿತ್ಯಾನಂದ ಆಶ್ರಮಕ್ಕೆ ನೀಡಲಾಯ್ತು ಎಂಬ ಕುರಿತಾಗಿ ವರದಿ ಸಲ್ಲಿಸುವಂತೆ CBSE ಅಧಿಕಾರಿಗಳು ರಾಜ್ಯ ಶಿಕ್ಷಣ ಮಂಡಳಿಗೆ ಆದೇಶಿಸಿದ್ದರು ಎಂಬುವುದು ಉಲ್ಲೇಖನೀಯ.
ಬಿಡದಿಯ ಸ್ವಯಂಘೋಷಿತ ದೇವಮಾನವ, ಯಾವತ್ತೂ ವಿವಾದಗಳಿಂದಲೇ ಸದ್ದು ಮಾಡುತ್ತಿರುವ ಸ್ವಾಮೀಜಿ ವಿರುದ್ಧ IPC ಸೆಕ್ಷನ್ ಅಡಿಯಲ್ಲಿ ಮಕ್ಕಳ ಅಪಹರಣದ ಪ್ರಕರಣ ದಾಖಲಿಸಲಾಗಿದೆ.
ವಿಸ್ಮಯ ಮೂಡಿಸಿದ ಪ್ರೇಮ ಸಾಯಿಬಾಬಾ : ಅಚ್ಚರಿಯ ಪವಾಡ !
ಡಿಸೆಂಬರ್ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: