ಸಿಬಿಐ ತಂಡ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮನೆಯ ಮೇಲೆ ದಾಳಿ ನಡೆಸಿದೆ ಈ ಬಗ್ಗೆ ಮನೀಶ್ ಸಿಸೋಡಿಯಾ ಕೂಡ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸಿಬಿಐ ನಮ್ಮ ಮನಗೆ ಬಂದಿದ್ದು ಅವರನ್ನು ಸ್ವಾಗತಿಸಿದ್ದೇನೆ. ನಾವು ತೀವ್ರ ಪ್ರಾಮಾಣಿಕರು. ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ದೇಶದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಈ ರೀತಿ ಕಿರುಕುಳ ನೀಡುತ್ತಿರುವುದು ಅತ್ಯಂತ ವಿಷಾದನೀಯ. ಹಾಗಾಗಿಯೇ ನಮ್ಮ ದೇಶ ಇನ್ನೂ ನಂಬರ್-1 ಆಗಿಲ್ಲ ಎಂದು ಬರೆದಿದ್ದಾರೆ.
ನವದೆಹಲಿ (ಆ. 19): ದೆಹಲಿಯಲ್ಲಿ ನಡೆದಿರುವ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮನೆಯ ಮೇಲೆ ದಾಳಿ ನಡೆಸಿದೆ. ಸಿಬಿಐನ ಈ ಕ್ರಮವು ದೆಹಲಿ ಸರ್ಕಾರದ ಅಬಕಾರಿ ನೀತಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಇತ್ತೀಚೆಗೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ಹೊಸ ಅಬಕಾರಿ ನೀತಿಯ ವಿಚಾರವಾಗಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಮುಖ್ಯ ಕಾರ್ಯದರ್ಶಿಯವರ ವರದಿ ಬಳಿಕ ಎಲ್ ಜಿ ವಿಕೆ ಸಕ್ಸೇನಾ ಈ ಕ್ರಮ ಕೈಗೊಂಡಿದ್ದಾರೆ. ಈ ವರದಿಯಲ್ಲಿ ಮನೀಶ್ ಸಿಸೋಡಿಯಾ ಪಾತ್ರದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ವಾಸ್ತವವಾಗಿ, ದೆಹಲಿಯ ಅಬಕಾರಿ ಇಲಾಖೆಯು ಮನೀಶ್ ಸಿಸೋಡಿಯಾ ಅಡಿಯಲ್ಲಿದೆ. ಮನೀಶ್ ಸಿಸೋಡಿಯಾ, ದೆಹಲಿಯ ಅಬಕಾರಿ ಆಯುಕ್ತ ಅರವ ಗೋಪಿ ಕೃಷ್ಣನ ನಿವಾಸ ಸೇರಿದಂತೆ 21 ಸ್ಥಳಗಳನ್ನು ಸಿಬಿಐ ತಂಡ ತಲುಪಿದೆ ಎಂದು ಹೇಳಲಾಗುತ್ತಿದೆ. ಮನೀಶ್ ಸಿಸೋಡಿಯಾ ಈ ಕುರಿತಾಗಿ ಟ್ವೀಟ್ ಮೂಡ ಮಾಡಿದ್ದು, ಸಿಬಿಐ ದಾಳಿ ಕುರಿತು ಮಾಹಿತಿ ನೀಡಿದ್ದಾರೆ. ಸಿಬಿಐ ನಮ್ಮ ಮನೆಗೆ ಬಂದಿದೆ. ಅವರನ್ನು ನಾನು ಸ್ವಾಗತ ಮಾಡಿದ್ದೇನೆ. ನಾವು ತೀವ್ರ ಪ್ರಾಮಾಣಿಕರು. ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸುತ್ತಿದ್ದೇವೆ, ನಮ್ಮ ದೇಶದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಈ ರೀತಿ ಕಿರುಕುಳ ನೀಡುತ್ತಿರುವುದು ಅತ್ಯಂತ ವಿಷಾದನೀಯ. ಹಾಗಾಗಿಯೇ ನಮ್ಮ ದೇಶ ಇನ್ನೂ ನಂಬರ್-1 ಆಗಿಲ್ಲ ಎಂದು ತಮ್ಮ ಟ್ವಿಟರ್ ಪುಟದಲ್ಲಿ ಬರೆದುಕೊಂಡಿದ್ದಾರೆ.
सीबीआई आई है. उनका स्वागत है. हम कट्टर ईमानदार हैं . लाखों बच्चों का भविष्य बना रहे हैं.
बहुत ही दुर्भाग्यपूर्ण है कि हमारे देश में जो अच्छा काम करता है उसे इसी तरह परेशान किया जाता है. इसीलिए हमारा देश अभी तक नम्बर-1 नहीं बन पाया.
ತನಿಖೆಗೆ ಸಹಕಾರ: ಶೀಘ್ರದಲ್ಲೇ ಸತ್ಯ ಹೊರಬರಲಿದೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಸಿಸೋಡಿಯಾ ಹೇಳಿದ್ದಾರೆ. ಇದುವರೆಗೂ ನನ್ನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದರೂ ಯಾವುದೂ ಹೊರಬಂದಿಲ್ಲ. ಅದರಿಂದಲೂ ಏನೂ ಸಾಬೀತಾಗುವುದಿಲ್ಲ. ದೇಶದಲ್ಲಿ ಉತ್ತಮ ಶಿಕ್ಷಣಕ್ಕಾಗಿ ನನ್ನ ಕೆಲಸವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.
'ಈ ಜನರು ದೆಹಲಿಯ ಶಿಕ್ಷಣ ಮತ್ತು ಆರೋಗ್ಯದ ವಿಚಾರದಲ್ಲಿ ಆಗಿರುವ ಅತ್ಯುತ್ತಮ ಕಾರ್ಯದಿಂದ ಅಸಮಾಧಾನಗೊಂಡಿದ್ದಾರೆ. ಅದಕ್ಕಾಗಿಯೇ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯ ಉತ್ತಮ ಕೆಲಸವನ್ನು ನಿಲ್ಲಿಸಲು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮತ್ತು ಶಿಕ್ಷಣ ಸಚಿವರನ್ನು ಬಂಧಿಸಲಾಗಿದೆ. ನಮ್ಮಿಬ್ಬರ ವಿರುದ್ಧ ಸುಳ್ಳು ಆರೋಪಗಳಿವೆ. ನ್ಯಾಯಾಲಯದಲ್ಲಿ ಸತ್ಯ ಹೊರಬರಲಿದೆ' ಎಂದುದ್ದಾರೆ. ಇತ್ತೀಚೆಗಷ್ಟೇ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸತ್ಯೇಂದ್ರ ಜೈನ್ ಅವರನ್ನು ಇಡಿ ಬಂಧಿಸಿತ್ತು.
ಏನಿದು ಅಬಕಾರಿ ಹಗರಣ: ಹೊಸ ಅಬಕಾರಿ ಸುಂಕದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವಿದೆ. ಈ ಮೂಲಕ ಮದ್ಯದಂಗಡಿ ಪರವಾನಿಗೆ ಪಡೆದವರಿಗೆ ವಿನಾಕಾರಣ ಲಾಭ ಮಾಡಿಕೊಡುತ್ತಿರುವ ಆರೋಪವೂ ಸರ್ಕಾರದ ಮೇಲೆ ಹೊರಿಸಲಾಗಿದೆ. ಪರವಾನಗಿ ನೀಡುವಲ್ಲಿ ನಿಯಮಗಳನ್ನು ನಿರ್ಲಕ್ಷಿಸಲಾಗಿದೆ. ಟೆಂಡರ್ ನಂತರ ಮದ್ಯದ ಗುತ್ತಿಗೆದಾರರ 144 ಕೋಟಿ ರೂ. ಈ ನೀತಿಯ ಮೂಲಕ ಕರೋನಾ ನೆಪದಲ್ಲಿ ಪರವಾನಗಿ ಶುಲ್ಕವನ್ನು ಮನ್ನಾ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮದ್ಯದ ವ್ಯಾಪಾರಿಗಳಿಗೆ ಲಂಚದ ಬದಲಾಗಿ ಪ್ರಯೋಜನಗಳನ್ನು ನೀಡಲಾಯಿತು. ಹೊಸ ಅಬಕಾರಿ ನೀತಿಯಡಿ ಕೈಗೊಂಡಿರುವ ಕ್ರಮಗಳಿಂದ ಅಪಾರ ಪ್ರಮಾಣದ ಆದಾಯ ನಷ್ಟ ಉಂಟಾಗಿದ್ದು, ಮದ್ಯ ವರ್ತಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಹೊಸ ನೀತಿಯನ್ನು ತರಲಾಗಿದೆ.
ಸರ್ಕಾರದ ಅಬಕಾರಿ ನೀತಿಯ ಬಗ್ಗೆ ಸಿಬಿಐ ತನಿಖೆಗೆ ದೆಹಲಿ LG ಶಿಫಾರಸು!
ಕೇಜ್ರಿವಾಲ್ ಆಕ್ರೋಶ: ಸಿಸೋಡಿಯಾ ಮನೆಯ ಮೇಲೆ ನಡೆಸಿದ ದಾಳಿ ವಿಚಾರವಾಗಿ ಅರವಿಂದ್ ಕೇಜ್ರಿವಾಲ್ ಕೂಡ ಟ್ವೀಟ್ ಮಾಡಿದ್ದು, "ಸಿಬಿಐಗೆ ಸ್ವಾಗತ. ನಾವು ತನಿಖೆಗೆ ಪೂರ್ಣವಾಗಿ ಸಹಕರಿಸುತ್ತೇವೆ. ಹಿಂದೆಯೂ ಕೂಡ ಸಾಕಷ್ಟು ತನಿಖೆಗಳು ಹಾಗೂ ದಾಳಿಗಳು ನಮ್ಮ ಮೇಲೆ ಆಗಿವೆ. ಆದರೆ, ಏನೂ ಕೂಡ ಸಾಬೀತಾಗಿರಲಿಲ್ಲ. ದೆಹಲಿಯ ಶಿಕ್ಷಣ ಮಾದರಿಯನ್ನು ಶ್ಲಾಘಿಸಿ, ಮನೀಷ್ ಸಿಸೋಡಿಯಾ ಅವರ ಚಿತ್ರವನ್ನು ಅಮೆರಿಕದ ಅತಿದೊಡ್ಡ ಪತ್ರಿಕೆಯಾದ ನ್ಯೂಯಾರ್ಕ್ ಟೈಮ್ಸ್‌ನ ಮೊದಲ ಪುಟದಲ್ಲಿ ಮುದ್ರಿಸಿದ ದಿನವೇ ಮನೀಶ್ ಅವರ ಮನೆ ಕೇಂದ್ರವು ಸಿಬಿಐಅನ್ನು ದಾಳಿಗೆ ಕಳುಹಿಸಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಸಿಬಿಐ ತನಿಖೆ ಭೀತಿ; ಹೊಸ ಮದ್ಯ ನೀತಿ ಕೈಬಿಟ್ಟ ದೆಹಲಿ ಸರ್ಕಾರ!
ಸಿಸೋಡಿಯಾ ಅವರ ನಿಜರೂಪ ಬೆಳಕಿಗೆ ಬಂದಿದೆ: ಸತ್ಯೇಂದ್ರ ಜೈನ್ ಅವರ ಭ್ರಷ್ಟಾಚಾರ ಸಿಕ್ಕಿಬಿದ್ದಿದೆ, ಸಿಸೋಡಿಯಾ ಅವರ ಹಗರಣಗಳು ಈಗ ಸಾರ್ವಜನಿಕರ ಮುಂದೆ ಬರುತ್ತಿವೆ. ಮದ್ಯದ ಗುತ್ತಿಗೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಪ್ರಕರಣದ ತನಿಖೆ ಆರಂಭವಾಗಿದೆ. ಕೇಜ್ರಿವಾಲ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಡೆಯುತ್ತಿದೆ, ದೆಹಲಿಯನ್ನು ಲೂಟಿ ಮಾಡಿದವರು ಜೈಲಿಗೆ ಹೋಗಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ಕಪಿಲ್ ಶರ್ಮ ಟ್ವೀಟ್ ಮಾಡಿದ್ದಾರೆ.