2020ರ ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಬುಧವಾರ ಕೋಲ್ಕತ್ತಾದಲ್ಲಿನ ಕಚೇರಿಯಲ್ಲಿ ವಿಚಾರಣೆಗೆ ಆಗಮಿಸುವಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಪ್ತ, ಟಿಎಂಸಿ ನಾಯಕ ಅನುಬ್ರತಾ ಮೊಂಡಲ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ, ವಿಚಾರಣೆಗೆ ಹಾಜರಾಗದೇ ಉಳಿದುಕೊಂಡಿದ್ದ ಅನುಬ್ರತಾರನ್ನು ಗುರುವಾರ ಮುಂಜಾನೆಯೇ ಸಿಬಿಐ ಬಂಧನ ಮಾಡಿದೆ.
ಕೋಲ್ಕತ್ತಾ (ಆ.11): ಅಕ್ರಮವಾಗಿ ಗೋವುಗಳನ್ನು ಸಾಗಣೆ ಮಾಡಿದ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪ್ತ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕ ಅನುಬ್ರತಾ ಮೊಂಡಲ್ ಅವರನ್ನು ಸಿಬಿಐ ಗುರುವಾರ ಮುಂಜಾನೆ ಬಂಧಿಸಿದೆ. 2020ರಲ್ಲಿ ನಡೆದ ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಬುಧವಾರ ಕೋಲ್ಕತ್ತಾದ ಸಿಬಿಐ ಕಚೇರಿಯಲ್ಲಿ ವಿಚಾರಣೆಗೆ ಹಾಜಾರಾಗಬೇಕು ಎಂದು ಸಿಬಿಐ ತಿಳಿಸಿತ್ತು. ಆದರೆ, ಸಿಬಿಐ ನೋಟಿಸ್‌ಗೆ ಕ್ಯಾರೇ ಎನ್ನದ ಅನುಬ್ರತಾರನ್ನು ಗುರುವಾರ ಮುಂಜಾನೆ 10 ರಿಂದ 12 ಕಾರುಗಳಲ್ಲಿ ಬಂದ ಸಿಬಿಐ ಅವರ ಮನೆಯಿಂದಲೇ ಬಂಧನ ಮಾಡಿದೆ. ಜಾನುವಾರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬಿರ್ಭುಮ್ ಜಿಲ್ಲಾಧ್ಯಕ್ಷ ಅನುಬ್ರತಾ ಮೊಂಡಲ್ ಅವರಿಗೆ ಕೇಂದ್ರ ತನಿಖಾ ದಳ (ಸಿಬಿಐ) ಬುಧವಾರ ಮಹತ್ವದ ಸಮನ್ಸ್ ಜಾರಿ ಮಾಡಿತ್ತು. ಬುಧವಾರ ಬೆಳಗ್ಗೆ 11 ಗಂಟೆಗೆ ಕೋಲ್ಕತ್ತಾದ ನಿಜಾಮ್ ಪ್ಯಾಲೇಸ್‌ನಲ್ಲಿರುವ ಏಜೆನ್ಸಿಯ ಕಚೇರಿಗೆ ಹಾಜರಾಗುವಂತೆ ಮೊಂಡಲ್‌ಗೆ ಸೂಚಿಸಲಾಗಿತ್ತು. ಇ-ಮೇಲ್ ಮೂಲಕ ಅವರಿಗೆ ಇದರ ಮಾಹಿತಿ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ಸೋಮವಾರೂ ಅವರಿಗೆ ಸಿಬಿಐ ಸಮನ್ಸ್ ನೀಡಿತ್ತು. ಆದರೆ, ಅನಾರೋಗ್ಯದ ಕಾರಣ ನೀಡಿ ವಿಚಾರಣೆಗೆ ಹಾಜರಾಗುವುದನ್ನು ಅವರು ತಪ್ಪಿಸಿಕೊಂಡಿದ್ದರು.
ಅವರ ವಕೀಲರ ಪ್ರಕಾರ, ಅವರು ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ನಿಗದಿತ ಆಸ್ಪತ್ರೆ ಅಪಾಯಿಂಟ್‌ಮೆಂಟ್ ಹೊಂದಿದ್ದರಿಂದ ದಿನಾಂಕವನ್ನು ಬದಲಾಯಿಸುವಂತೆ ಸಿಬಿಐಗೆ ಮೇಲ್ ಮಾಡಿದ್ದರು. ಮೊಂಡಲ್ ಅವರಿಗೆ ಚಿಕಿತ್ಸೆ ನೀಡಿದ ವೈದ್ಯಕೀಯ ಮಂಡಳಿಯು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ಇದರಲ್ಲಿ ಉಲ್ಲೇಖಿಸಿತ್ತು.
CAPF jawans surround the house of leader Anubrata Mondal while CBI teams enter his house in connection with cattle smuggling case. pic.twitter.com/1DBiw0yzQG
— Pooja Mehta (@pooja_news)2020 ರಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿದ ನಂತರ ಮೊಂಡಲ್ ಅವರ ಹೆಸರು ಜಾನುವಾರು ಕಳ್ಳಸಾಗಣೆ ಹಗರಣದ ಪ್ರಕರಣದಲ್ಲಿ ಕಾಣಿಸಿಕೊಂಡಿದೆ. ಸಿಬಿಐ ಪ್ರಕಾರ, 2015 ಮತ್ತು 2017 ರ ನಡುವೆ, ಗಡಿಯುದ್ದಕ್ಕೂ ಕಳ್ಳಸಾಗಣೆ ಮಾಡುತ್ತಿದ್ದರಿಂದ 20,000 ದನಗಳ ತಲೆಗಳನ್ನು ಗಡಿ ಭದ್ರತಾ ಪಡೆ ವಶಪಡಿಸಿಕೊಂಡಿದೆ.
ಪತ್ರದ ಜೊತೆ ಔಷಧ ಚೀಟಿ ಇಟ್ಟಿದ್ದ ಮೊಂಡಲ್: 60ರ ಹರೆಯದಲ್ಲಿರುವ ಟಿಎಂಸಿ ಬಿರ್ಭುಮ್ ಜಿಲ್ಲಾಧ್ಯಕ್ಷರು ತಮ್ಮ ಪತ್ರದ ಜೊತೆಗೆ ಎರಡು ಔಷಧಿ ಚೀಟಿಗಳ ಪ್ರತಿಗಳನ್ನು ಲಗತ್ತಿಸಿದ್ದಾರೆ ಮತ್ತು ತನಿಖಾ ಸಂಸ್ಥೆಯ ಅಧಿಕಾರಿಗಳು ತಮ್ಮ ಮುಂದೆ ಹಾಜರಾಗಲು ಎರಡು ವಾರಗಳ ಕಾಲಾವಕಾಶ ಕೋರಿದ್ದಾರೆ. ಬುಧವಾರ ಬೆಳಗ್ಗೆ ಮೊಂಡಲ್ ಅವರ ವಕೀಲರು ನಗರದ ಕೇಂದ್ರೀಯ ಸಂಸ್ಥೆಯ ಕಚೇರಿಯಲ್ಲಿ ಬಳಿ ಪತ್ರವನ್ನು ಇಟ್ಟು ಹೋಗಿದ್ದರು.
DHFL Scam; ದೇಶದ ಅತಿದೊಡ್ಡ ಬ್ಯಾಂಕ್ ವಂಚನೆ ಆರೋಪಿ ಮನೆಯಲ್ಲಿ ಅಗಸ್ಟಾಹೆಲಿಕಾಪ್ಟರ್ ಸಿಬಿಐ ವಶಕ್ಕೆ!
ನಾವು ಮೊಂಡಲ್ ಅವರಿಂದ ಸಂವಹನವನ್ನು ಸ್ವೀಕರಿಸಿದ್ದೇವೆ, ಅದರಲ್ಲಿ ಅವರು ಇಂದು ನಮ್ಮ ಕಚೇರಿಯಲ್ಲಿ ನಮ್ಮ ಅಧಿಕಾರಿಗಳ ಮುಂದೆ ಹಾಜರಾಗಲು ಸಾಧ್ಯವಾಗದೇ ಇರುವ ಬಗ್ಗೆ ನಮಗೆ ತಿಳಿಸಿದರು. ಪತ್ರದಲ್ಲಿ, ಮೊಂಡಲ್ ಅವರು ವೈದ್ಯರ ಸಲಹೆಯಂತೆ ಸಂಪೂರ್ಣ ಬೆಡ್ ರೆಸ್ಟ್‌ನಲ್ಲಿದ್ದಾರೆ ಮತ್ತು ತಮ್ಮ ನಿವಾಸದಿಂದ ಹೊರಗೆ ಹೋಗಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ. ಅವರು ವೈದ್ಯರ ಪ್ರಿಸ್ಕ್ರಿಪ್ಷನ್‌ಗಳ ಎರಡು ಪ್ರತಿಗಳನ್ನು ಲಗತ್ತಿಸಿದ್ದಾರೆ ಮತ್ತು ನಮ್ಮ ಕಚೇರಿಗೆ ಬರಲು ಎರಡು ವಾರಗಳ ಕಾಲಾವಕಾಶವನ್ನು ನೀಡುವಂತೆ ನಮಗೆ ಮನವಿ ಮಾಡಿದ್ದಾರೆ ಎಂದು ಸಿಬಿಐ ಅಧಿಕಾರಿ ಪಿಟಿಐಗೆ ತಿಳಿಸಿದ್ದರು.
100 ಕೋಟಿಗೆ ಗೌರ್ನರ್, ಎಂಪಿ ಸ್ಥಾನ: ವಂಚನೆ ಸಂಚು ಬಯಲು!
ಟಿಎಂಸಿ ನಾಯಕ, ವಿವಿಧ ವಿಷಯಗಳ ಬಗ್ಗೆ ಆಗಾಗ್ಗೆ ತಮ್ಮ ಟೀಕೆಗಳ ಕಾರಣದಿಂದಾಗಿ ಆಗಾತ ಸುದ್ದಿಯಾಗುತ್ತಲೇ ಇರುತ್ತಾರೆ. ಜಾನುವಾರು ಹಗರಣದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಹಲವಾರು ಸಂದರ್ಭಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಕೇಳಿಕೊಂಡಿದೆ. ಈ ಹಿಂದೆಯೂ ಕೂಡ ಮೊಂಡಲ್ ಅವರು ಅನಾರೋಗ್ಯದ ಕಾರಣ ನೀಡಿ ಸಮನ್ಸ್‌ಗಳನ್ನು ತಪ್ಪಿಸಿದ್ದರು.