ಸಿಬಿಐನಿಂದ ಎನ್ಎಸ್ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಬಂಧನ

By Suvarna NewsFirst Published Mar 6, 2022, 11:57 PM IST
Highlights

ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರ

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಬಂಧನ

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಹಗರಣ ವಶಕ್ಕೆ ಪಡೆದುಕೊಂಡ ಸಿಬಿಐ

ನವದೆಹಲಿ (ಮಾ.6): ರಾಷ್ಟ್ರೀಯ ಷೇರು ವಿನಿಮಯ (NSE) ಕೇಂದ್ರದ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಚಿತ್ರಾ ರಾಮಕೃಷ್ಣ (Chitra Ramakrishna) ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಭಾನುವಾರ ಬಂಧಿಸಿದೆ. ನಿರೀಕ್ಷಣಾ ಜಾಮೀನು (Anticipatory Bail)ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದ ನಂತರ ನವದೆಹಲಿಯಲ್ಲಿ (New Delhi) ಅವರನ್ನು ಸಿಬಿಐ (CBI Arrest) ಬಂಧಿಸಿದೆ.

ಚಿತ್ರಾ ರಾಮಕೃಷ್ಣ ಅವರು 2013 ಮತ್ತು 2016 ರ ನಡುವೆ ಎನ್‌ಎಸ್‌ಇ ಸಿಇಒ ಆಗಿ ಸೇವೆ ಸಲ್ಲಿಸಿದ್ದಾರೆ. 59 ವರ್ಷ ವಯಸ್ಸಿನವರು ಮಾಜಿ ಎನ್‌ಎಸ್‌ಇ ಉದ್ಯೋಗಿ ಆನಂದ್ ಸುಬ್ರಮಣ್ಯಂ ಅವರನ್ನು ಒಳಗೊಂಡ ತನಿಖೆಗೆ ಸಂಬಂಧಿಸಿದಂತೆ ಸಿಬಿಐನ ರಾಡಾರ್‌ನಲ್ಲಿದ್ದಾರೆ. "ಹಿಮಾಲಯದಲ್ಲಿ ವಾಸಿಸುವ ಯೋಗಿ" ಎಂದು ಹೇಳಲಾಗುವ ವ್ಯಕ್ತಿಯ ಜೊತೆ ಇಮೇಲ್ ಮೂಲಕ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್‌ನ (National Stock Exchange) ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎನ್ನುವ ಆರೋಪ ಅವರ ಮೇಲೆ ದಾಖಲಾಗಿತ್ತು. ಈ ತಿಂಗಳ ಆರಂಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಆನಂದ್ ಸುಬ್ರಮಣ್ಯಂ ಅವರೇ ಈ "ಯೋಗಿ" ಎಂಬ ಶಂಕೆ ವ್ಯಕ್ತವಾಗಿದೆ. 2010 ಮತ್ತು 2015 ರ ನಡುವೆ ಎನ್‌ಎಸ್‌ಇಯಲ್ಲಿ ಇಂಥ ಅಭ್ಯಾಸಗಳನ್ನು ಚಿತ್ರಾ ಮಾಡುತ್ತಿದ್ದರು ಎಂದು ಸೆಬಿ (ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ) ತನ್ನ ಸಂಶೋಧನೆಗಳನ್ನು ಬಹಿರಂಗ ಮಾಡಿದ ಬಳಿಕ ಇದು ಜನರ ಗಮನಕ್ಕೆ ಬಂದಿದೆ.

ಚಿತ್ರಾ ರಾಮಕೃಷ್ಣ ಅವರು 2014 ರಿಂದ 2016 ರ ಅವಧಿಯಲ್ಲಿ ಇಮೇಲ್ ಐಡಿ ಮೂಲಕ ನಡೆಸಿದ ವ್ಯವಹಾರದಲ್ಲಿ ಅಪರಿಚಿತ ವ್ಯಕ್ತಿಯೊಂದಿಗೆ ಎನ್‌ಎಸ್‌ಇಯ ಆಂತರಿಕ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಸಾಬೀತುಪಡಿಸುವ ಸಾಕ್ಷ್ಯಚಿತ್ರ ಸಾಕ್ಷ್ಯಗಳು ಸಿಕ್ಕಿವೆ ಎಂದು ಸೆಬಿ (SEBI) ತನ್ನ ಆದೇಶದಲ್ಲಿ ತಿಳಿಸಿದೆ. 2018 ರಲ್ಲಿ ಸಿಬಿಐನಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ, ಇದರಲ್ಲಿ ಸ್ಟಾಕ್ ಬ್ರೋಕರ್ ಒಬ್ಬರು ಎನ್ಎಸ್ಇಯಲ್ಲಿ ವ್ಯವಸ್ಥೆಯನ್ನು ತಿಳಿದುಕೊಂಡಿದ್ದರು ಎಂದು ಹೇಳಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಸ್ಟಾಕ್ ಬ್ರೋಕರ್ ಸಂಜಯ್ ಗುಪ್ತಾ "ಎನ್‌ಎಸ್‌ಇಯ ಸಹ-ಸ್ಥಳ ಸೌಲಭ್ಯಕ್ಕೆ ಪ್ರವೇಶ" ಹೊಂದಿದ್ದಾರೆ ಎಂದು ಆರೋಪಿಸಿದರು. ಇದು ಗುಪ್ತಾ ಅವರ ಸಂಸ್ಥೆಯಾದ OPG ಸೆಕ್ಯುರಿಟಿ ಲಿಮಿಟೆಡ್‌ಗೆ ಮಾರುಕಟ್ಟೆ ಡೇಟಾವನ್ನು ಬೇರೆಯವರಿಗಿಂತ ಮೊದಲು ಪ್ರವೇಶಿಸಲು ಅನುವು ಮಾಡಿಕೊಡುತ್ತಿತ್ತು ಎಂದಿದ್ದಾರೆ.

In a major development in the National Stock Exchange () fraud case, the Central Bureau of Investigation () on Sunday night arrested its ex MD and CEO . pic.twitter.com/JYbToNwthc

— IANS Tweets (@ians_india)


ಹಿಮಾಲಯದಲ್ಲಿ ವಾಸಿಸುವ ಯೋಗಿಯೊಬ್ಬರ ಜೊತೆ ಚಿತ್ರಾ ಅವರ ಸಂಪರ್ಕವನ್ನು ತನಿಖೆ ನಡೆಸುತ್ತಿರುವ ಸಿಬಿಐ, ಅವರ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಈ ಹಿಂದೆ ಎನ್‌ಎಸ್‌ಇಯ ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಆಗಿದ್ದ ಆನಂದ್ ಸುಬ್ರಮಣಿಯನ್ (Anand Subramanian) ಅವರನ್ನು ಚೆನ್ನೈನಲ್ಲಿ ಬಂಧಿಸಿತ್ತು. ಬಳಿಕ ನ್ಯಾಯಾಲಯ ಸುಬ್ರಮಣಿಯನ್ ಅವರನ್ನು ಮಾರ್ಚ್ 6 ರವರೆಗೆ ಸಿಬಿಐ ಕಸ್ಟಡಿಗೆ ನೀಡಿತ್ತು.  

NSE Case: ನಿರೀಕ್ಷಣಾ ಜಾಮೀನು ಅರ್ಜಿ ವಜಾ: ಚಿತ್ರಾ ರಾಮಕೃಷ್ಣಗೆ ಬಂಧನ ಭೀತಿ
ಏಪ್ರಿಲ್ 2013 ರಲ್ಲಿ ಮುಖ್ಯ ಕಾರ್ಯತಂತ್ರದ ಸಲಹೆಗಾರರಾಗಿ  ಸೇರಿದ ಸುಬ್ರಮಣಿಯನ್ ಅವರು, 2015-16ರಲ್ಲಿ ಎನ್‌ಎಸ್‌ಇಯ ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಚಿತ್ರಾ ರಾಮಕೃಷ್ಣ ಅವರ ಸಲಹೆಗಾರರಾಗಿದ್ದರು. ಸುಬ್ರಮಣಿಯನ್ ಅವರನ್ನು ಎಕ್ಸ್‌ಚೇಂಜ್‌ನ ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಎಂಡಿ ಸಲಹೆಗಾರರಾಗಿ ನೇಮಿಸಲು ಚಿತ್ರಾ ಅವರು  ಹಿಮಾಲಯ ಶ್ರೇಣಿಗಳಲ್ಲಿ ವಾಸಿಸುವ ನಿಗೂಢ ಯೋಗಿಯಿಂದ ಮಾರ್ಗದರ್ಶನ  ಪಡೆದರು ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದ (ಸೆಬಿ) ಹೇಳಿದ ನಂತರ  ಚಿತ್ರಾ ರಾಮಕೃಷ್ಣ ರಾಷ್ಟ್ರದ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿದ್ದರು.

Chitra Ramkrishna Case: ಷೇರುಪೇಟೆಯ ಹಿಮಾಲಯ ಯೋಗಿ ರಹಸ್ಯ ಬಯಲು!
ಷೇರುಪೇಟೆಯ ಯಾವುದೇ ಹೆಚ್ಚಿನ ಅನುಭವ ಇಲ್ಲದೇ ಇದ್ದರೂ ಸುಬ್ರಮಣಿಯನ್‌ ಅವರನ್ನು ಚಿತ್ರಾ ಅವರು ಹಿರಿಯ ಹುದ್ದೆಗೆ ನೇಮಕ ಮಾಡಿಕೊಂಡಿದ್ದರು. ಜೊತೆಗೆ ಅವರಿಗೆ ಹಲವು ಬಾರಿ ಪದೋನ್ನತಿ ನೀಡಲಾಗಿತ್ತು. ವಿನಾಕಾರಣ ವೇತನ ಹೆಚ್ಚಳ ಮಾಡಲಾಗಿತ್ತು. ಜೊತೆಗೆ ಸುಬ್ರಮಣಿಯನ್‌ ಉನ್ನತ ಹುದ್ದೆ ವಹಿಸಿಕೊಂಡ ಅವಧಿಯಲ್ಲಿ ಎನ್‌ಎಸ್‌ಇದಲ್ಲಿ ಹಲವು ವಂಚನೆಗಳು ನಡೆದಿದ್ದವು.

Latest Videos

 

click me!