ಜಾತಿ, ಧರ್ಮದ ಪ್ರಮಾಣಪತ್ರ ಹಿಂದೆಯೂ ಕೇಳಿದ್ದೆವು, ಅಗ್ನಿಪಥ್‌ ಬಗ್ಗೆ ಸೇನೆಯ ಸ್ಪಷ್ಟನೆ!

By Santosh Naik  |  First Published Jul 19, 2022, 12:41 PM IST

ಅಗ್ನಿಪಥ್ ಅಡಿಯಲ್ಲಿ ನಡೆಯಲಿರುವ ನೇಮಕಾತಿ ಯೋಜನೆಯಲ್ಲಿ ಜಾತಿ ಪ್ರಮಾಣ ಪತ್ರಕ್ಕೆ ಬೇಡಿಕೆ ಇಟ್ಟಿರುವ ಕುರಿತು ದೇಶದಲ್ಲಿ ಗದ್ದಲ ಎದ್ದಿದೆ. ಈ ನಡುವೆ ಸೇನೆಯು ಆರೋಪಗಳನ್ನು ತಳ್ಳಿಹಾಕಿದೆ ಮತ್ತು ಸೇನೆಯಲ್ಲಿ ಯಾವುದೇ ನೇಮಕಾತಿಗೆ ಮುಂಚೆಯೇ, ಅಭ್ಯರ್ಥಿಗಳಿಂದ ಜಾತಿ ಹಾಗೂ ಧರ್ಮದ ಪ್ರಮಾಣಪತ್ರಗಳನ್ನು ಕೇಳಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ಅಗ್ನಿಪಥ್‌ ನೇಮಕಾತಿ ಯೋಜನೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಎಂದಿದೆ.


ನವದೆಹಲಿ (ಜುಲೈ 19): ಭಾರಿ ವಿವಾದಕ್ಕೆ ಕಾರಣವಾಗಿರುವ ಅಗ್ನಿಪಥ್‌ ಯೋಜನೆಯ ವಿಚಾರವಾಗಿ ವಿರೋಧ ಪಕ್ಷಗಳು ಇತ್ತೀಚೆಗೆ ಮತ್ತೊಂದು ಗಂಭೀರ ಆರೋಪ ಮಾಡಿದ್ದವು. ಅಗ್ನಿಪಥ್‌ ನೋಟಿಫಿಕೇಶನ್‌ನಲ್ಲಿ ಅಗ್ನಿವೀರರಾಗಲು ಬಯಸುವ ವ್ಯಕ್ತಿಗಳ ಜಾತಿ ಹಾಗೂ ಧರ್ಮದ ಪ್ರಮಾಣಪತ್ರವನ್ನು ಕೇಳಲಾಗಿದೆ ಎಂದು ಕಿಡಿಕಾರಿದ್ದವು. ದೇಶದ ಸೇನೆಗೆ ಬಯಸುವವರ ಜಾತಿ-ಧರ್ಮವನ್ನು ತಿಳಿಯಲು ಮೋದಿ ಸರ್ಕಾರ ಬಯಸಿದೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ  ಪಕ್ಷದ ಸೋಷಿಯಲ್‌ ಮೀಡಿಯಾ ಸಂಯೋಜಕ ವೈ.ಸತೀಶ್‌ ರೆಡ್ಡಿ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಇದಕ್ಕೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದವು. ಇದರ ಬೆನ್ನಲ್ಲಿಯೇ ಸೇನೆ ಈ ಕುರಿತಾಗಿ ಸ್ಪಷ್ಟನೆ ನೀಡಿದ್ದು, ಸೇನೆಯಲ್ಲಿ ಯಾವುದೇ ನೇಮಕಾತಿಗಳು ನಡೆಯುವ ಮುನ್ನ ಜಾತಿ, ಧರ್ಮ ಹಾಗೂ ಯಾವ ವಲಯ ಎನ್ನುವ ಪ್ರಮಾಣಪತ್ರವನ್ನು ಕೇಳುತ್ತೇವೆ. ಅಗ್ನಿಪಥ್‌ಗಾಗಿ ಹೊಸದಾಗಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ. ಟಿಆರ್‌ಎಸ್ ಅಲ್ಲದೆ, ಬಹುತೇಕ ವಿರೋಧ ಪಕ್ಷಗಳ ನಾಯಕರು. ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್‌ ಸಿಂಗ್‌ ಕೂಡ ಮೋದಿ ಸರ್ಕಾರದ ವಿರುದ್ಧ ಕಿಡಿಕಾರುವ ಮೂಲಕ ಅಗ್ನಿಪಥ್‌ ಯೋಜನೆಯನ್ನು ವಿರೋಧಿಸಿದ್ದರು.

ಆಪ್‌ ವಿರೋಧ: ನೇಮಕಾತಿ ಪ್ರಕ್ರಿಯೆಗೆ ( recruitment process) ಸಂಬಂಧಿಸಿದ ಆದೇಶವನ್ನು ಹಂಚಿಕೊಂಡಿರುವ ಸಂಜಯ್ ಸಿಂಗ್  (AAP MP Sanjay Singh) ಅವರು ಮೋದಿ ಸರ್ಕಾರದ ಕೆಟ್ಟ ಮುಖವು ದೇಶದ ಮುಂದೆ ಬಂದಿದೆ ಎಂದು ಬರೆದಿದ್ದಾರೆ. ಹಿಂದುಳಿದವರು, ದಲಿತರು, ಬುಡಕಟ್ಟು ಜನಾಂಗದವರು ಸೇನೆಗೆ ಸೇರಲು ಅರ್ಹರು ಎಂದು ನರೇಂದ್ರ ಮೋದಿ (PM Narendra Modi) ಪರಿಗಣಿಸುವುದಿಲ್ಲವೇ, ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸೇನಾ ನೇಮಕಾತಿಯಲ್ಲಿ ಜಾತಿ ಕೇಳಲಾಗುತ್ತಿದೆ. ಮೋದಿಯವರು ನಿಮ್ಮನ್ನು ಅಗ್ನಿವೀರ್ ಅಲ್ಲ ಜಾತಿವೀರ್‌ರನ್ನಾಗಿ ಮಾಡುತ್ತಿದ್ದಾರೆ ಎಂದು ಬರೆದಿದ್ದರು.

Requirement for aspirants to submit caste certificates & if required,religion certificates was always there. No change for Agniveer recruitment scheme in this regard: Army officials on allegations by Opposition that caste& religion certificates now being asked for Agniveer scheme

— ANI (@ANI)

Tap to resize

Latest Videos


ವರುಣ್‌ ಗಾಂಧಿ ಕೂಡ ಟ್ವೀಟ್‌: ಟಿಆರ್‌ಎಸ್‌ನ ಸತೀಶ್‌ ರೆಡ್ಡಿ (Sathish Reddy), "ಮೋದಿ ಸರ್ಕಾರವು ಈಗ ಅಗ್ನಿಪಥ್ ಯೋಜನೆಯ (Agnipath Scheme) ಅರ್ಹರಿಂದ ಜಾತಿ ಮತ್ತು ಧರ್ಮವನ್ನು ತಿಳಿಯಲು ಬಯಸುತ್ತದೆ. ಭಾರತೀಯ ಸೇನೆಯಲ್ಲಿ ಇದು ಮೊದಲ ಬಾರಿಗೆ ನಡೆಯುತ್ತಿದೆ' ಎಂದು ಟ್ವೀಟ್‌ ಮಾಡಿದ್ದರು. "ಸೇನೆಯಲ್ಲಿ ಯಾವುದೇ ರೀತಿಯ ಮೀಸಲಾತಿ ಇಲ್ಲ, ಆದರೆ ಅಗ್ನಿಪಥ್ ನೇಮಕಾತಿಯಲ್ಲಿ ಜಾತಿ ಪ್ರಮಾಣ ಪತ್ರ ಕೇಳಲಾಗುತ್ತಿದೆ.  ನಾವು ಈಗ ಯಾರೊಬ್ಬರ ದೇಶಭಕ್ತಿಯನ್ನು ಅವರ ಜಾತಿಯನ್ನು ನೋಡಿ ನಿರ್ಧರಿಸುತ್ತೇವೆಯೇ?   ಸೇನೆಯ ಸ್ಥಾಪಿತ ಸಂಪ್ರದಾಯಗಳನ್ನು ಬದಲಾಯಿಸುವ ಮೂಲಕ ನಮ್ಮ ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವ ಬಗ್ಗೆ ಸರ್ಕಾರ ಯೋಚಿಸಬೇಕು ಎಂದು ಬಿಜೆಪಿ ಸಂಸದ ವರುಣ್ ಗಾಂಧಿ (varun gandhi) ಕೂಡ ಟ್ವೀಟ್‌ ಮಾಡಿದ್ದರು.

ಸೇನೆಯ ಸ್ಪಷ್ಟನೆ:  ಆಕಾಂಕ್ಷಿಗಳು ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸುವ ಅವಶ್ಯಕತೆ ಮತ್ತು ಅಗತ್ಯವಿದ್ದರೆ, ಧರ್ಮ ಪ್ರಮಾಣಪತ್ರಗಳು ನೀಡುವ ಕ್ರಮ ಹಿಂದೆಯೂ ಇತ್ತು. ಈ ನಿಟ್ಟಿನಲ್ಲಿ ಅಗ್ನಿವೀರ್ ನೇಮಕಾತಿ ಯೋಜನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಅಗ್ನಿಪಥ್‌ ಯೋಜನೆಗೆ ಜಾತಿ ಮತ್ತು ಧರ್ಮ ಪ್ರಮಾಣಪತ್ರಗಳನ್ನು ಕೇಳಲಾಗುತ್ತಿದೆ ಎಂಬ ವಿರೋಧದ ಆರೋಪದ ಮೇಲೆ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ತರಬೇತಿಯ ಸಮಯದಲ್ಲಿಅಥವಾ ಕರ್ತವ್ಯದ ಸಮಯದಲ್ಲಿ ಹುತಾತ್ಮರಾಗುವ ಸೇನಾ ಸಿಬ್ಬಂದಿಗೆ ಧಾರ್ಮಿಕ ವಿಧಿಗಳ ಪ್ರಕಾರ ಅಂತಿಮ ವಿಧಿಗಳನ್ನು ನಿರ್ವಹಿಸಲು ಧರ್ಮದ ಪ್ರಮಾಣಪತ್ರ ಅಗತ್ಯವಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಕಾಂಗ್ರೆಸ್‌ಗೆ ತೀವ್ರ ಮುಜುಗರ, ಅಗ್ನಿಪಥ ವಿರುದ್ಧದ ಪ್ರತಿಭಟನಾ ಪತ್ರಕ್ಕೆ ಸಹಿ ಹಾಕಲು ಮನೀಶ್ ತಿವಾರಿ ನಕಾರ!

ಜಾತಿ ಪ್ರಮಾಣಪತ್ರಕ್ಕೂ ಕಾರಣವಿದೆ: 2013 ರಲ್ಲಿ ಸುಪ್ರೀಂ ಕೋರ್ಟ್‌ಗೆ  ಸಲ್ಲಿಸಲಾದ ಅಫಿಡವಿಟ್‌ನಲ್ಲಿ ಸೇನೆಯು ಜಾತಿ, ಪ್ರದೇಶ ಮತ್ತು ಧರ್ಮದ ಆಧಾರದ ಮೇಲೆ ನೇಮಕಾತಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಆಡಳಿತಾತ್ಮಕ ಅನುಕೂಲಕ್ಕಾಗಿ ಮತ್ತು ಕಾರ್ಯಾಚರಣೆಯ ಅವಶ್ಯಕತೆಗಳಿಗಾಗಿ ರೆಜಿಮೆಂಟ್‌ನಲ್ಲಿ ಪ್ರದೇಶದಿಂದ ಆಯಾ ಪ್ರದೇಶದಿಂದ ಬರುವ ಜನರನ್ನು ಒಂದು ಗುಂಪು ಮಾಡಲು ಇದು ಅನಿವಾರ್ಯವಾಗಿದೆ ಎಂದು ತಿಳಿಸಿತ್ತು. ಈ ಮಾಹಿತಿಯನ್ನು ಬಿಜೆಪಿ ಸೋಷಿಯಲ್‌ ಮೀಡಿಯಾ ಮುಖ್ಯಸ್ಥ ಅಮಿತ್‌ ಮಾಳವಿಯಾ (BJP social media head Amit Malviya ) ಹೇಳಿದ್ದಾರೆ. 

ಇದನ್ನೂ ಓದಿ: ಶಿಂಜೋ ಅಬೆ ಕೊಲೆಯನ್ನು ಅಗ್ನಿಪಥ್‌ ಯೋಜನೆಗೆ ಲಿಂಕ್ ಮಾಡಿದ ಕಾಂಗ್ರೆಸ್ ನಾಯಕ!

ಪ್ರತಿಯೊಂದಕ್ಕೂ ಪ್ರಧಾನಿ ಮೋದಿಯವರನ್ನು ದೂಷಿಸುವ ಈ ವ್ಯಾಮೋಹ ಎಷ್ಟಿದೆ ಎಂದರೆ, ಸಂಜಯ್ ಸಿಂಗ್ ಅವರಂತಹ ಜನರಿಗೆ ಮೋದಿಯನ್ನು ದೂಷಿಸದೇ ಇದ್ದರೆ ಏನೂ ಅರಗುವುದಿಲ್ಲ ಎಂದು ಅಮಿತ್ ಮಾಳವೀಯಾ ಬರೆದಿದ್ದಾರೆ. ಸೇನೆಯ ರೆಜಿಮೆಂಟಲ್ ವ್ಯವಸ್ಥೆ ಬ್ರಿಟಿಷರ ಕಾಲದಿಂದಲೂ ಇದೆ. ಸ್ವಾತಂತ್ರ್ಯದ ನಂತರ, 1949 ರಲ್ಲಿ ವಿಶೇಷ ಸೇನಾ ಆದೇಶದ ಮೂಲಕ ಇದನ್ನು ಔಪಚಾರಿಕಗೊಳಿಸಲಾಯಿತು. ಮೋದಿ ಸರ್ಕಾರವು ಇದರಲ್ಲಿ ಏನನ್ನೂ ಬದಲಾಯಿಸಲಿಲ್ಲ ಎಂದಿದ್ದಾರೆ.

 

click me!