1 ತಾಸಲ್ಲಿ ನಗದು ರಹಿತ ಆರೋಗ್ಯ ವಿಮೆ ಕ್ಲೇಮ್‌ ಶೀಘ್ರ ಸಾಕಾರ?, 2047ರ ವೇಳೆಗೆ ಆರೋಗ್ಯ ವಿಮೆ ಬಳಕೆ ಹೇಗಿರಲಿದೆ?

Published : Apr 20, 2025, 07:34 AM ISTUpdated : Apr 20, 2025, 07:39 AM IST
1 ತಾಸಲ್ಲಿ ನಗದು ರಹಿತ ಆರೋಗ್ಯ ವಿಮೆ ಕ್ಲೇಮ್‌ ಶೀಘ್ರ ಸಾಕಾರ?, 2047ರ ವೇಳೆಗೆ ಆರೋಗ್ಯ ವಿಮೆ ಬಳಕೆ ಹೇಗಿರಲಿದೆ?

ಸಾರಾಂಶ

ಆರೋಗ್ಯ ವಿಮೆ ಕ್ಲೇಮು ಪ್ರಕ್ರಿಯೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ, ನಗದುರಹಿತ ವಿಮೆ ಪಾವತಿ ಬೇಡಿಕೆಯನ್ನು 1 ಗಂಟೆಯಲ್ಲಿ ಅನುಮೋದಿಸುವುದು ಮತ್ತು 3 ಗಂಟೆಗಳಲ್ಲಿ ಅಂತಿಮ ಕ್ಲೇಮ್‌ಗಳನ್ನು ಇತ್ಯರ್ಥಪಡಿಸುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ನವದೆಹಲಿ (ಏ.20): ಆರೋಗ್ಯ ವಿಮೆ ಕ್ಲೇಮು ಪ್ರಕ್ರಿಯೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ, ನಗದುರಹಿತ ವಿಮೆ ಪಾವತಿ ಬೇಡಿಕೆಯನ್ನು 1 ಗಂಟೆಯಲ್ಲಿ ಅನುಮೋದಿಸುವುದು ಮತ್ತು 3 ಗಂಟೆಗಳಲ್ಲಿ ಅಂತಿಮ ಕ್ಲೇಮ್‌ಗಳನ್ನು ಇತ್ಯರ್ಥಪಡಿಸುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

2047ರ ವೇಳೆಗೆ ಆರೋಗ್ಯ ವಿಮೆಯ ಬಳಕೆಯನ್ನು ದೇಶಾದ್ಯಂತ ವಿಸ್ತರಿಸುವ ಮತ್ತು ಗ್ರಾಹಕರಲ್ಲಿ ವಿಶ್ವಾಸವನ್ನು ಬಲಗೊಳಿಸುವುದು ಇದರ ಉದ್ದೇಶ. ಇದರ ಭಾಗವಾಗಿ, ಗ್ರಾಹಕರಿಗೆ ಅರ್ಥೈಸಿಕೊಳ್ಳಲು ಮತ್ತು ಬಳಸಲು ಅನುಕೂಲವಾಗುವಂತೆ ವಿಮೆಯ ಅರ್ಜಿಗಳನ್ನು ಸರಳೀಕರಿಸಲು ಏಜೆನ್ಸಿಗಳಿಗೆ ಸೂಚಿಸಲಾಗುವುದು ಎನ್ನಲಾಗಿದೆ. ಈ ನಿರ್ಧಾರದಿಂದಾಗಿ, ಜನರಲ್ಲಿ ವಿಮೆಯ ಪ್ರತಿ ವಿಶ್ವಾಸ ವೃದ್ಧಿಯಾಗಿ, ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಗ್ರೂಪ್ ಇನ್ಶೂರೆನ್ಸ್ ಸೌಲಭ್ಯ!

ಆರೋಗ್ಯ ವೆಚ್ಚ ಅತಿಕಡಿಮೆ:
ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಅಭಿವೃದ್ಧಿ ಹೊಂದಿದ ಹಾಗೂ ಹೊಂದುತ್ತಿರುವ ದೇಶಗಳಿಗೆ ಹೋಲಿಸಿದರೆ ಭಾರತೀಯರು ಆರೋಗ್ಯದ ಮೇಲೆ ಅತಿ ಕಡಿಮೆ ಖರ್ಚು ಮಾಡುತ್ತಿದ್ದಾರೆ. 2013–14 ಅವಧಿಯಲ್ಲಿ ಶೇ.3.9ರಷ್ಟು ವಿಮೆದಾರರು ಇದ್ದರೆ, 2022–23ರ ಹೊತ್ತಿಗೆ ಇದು ಕೇವಲ ಶೇ.4ಕ್ಕೆ ಏರಿಕೆಯಾಗಿದೆ. ಇದು ಬ್ರೆಜಿಲ್‌, ಶ್ರೀಲಂಕಾ, ಥಾಯ್ಲೆಂಡ್‌ಗಿಂತಲೂ ಕಡಿಮೆ.

ಇದನ್ನೂ ಓದಿ: ಹೆಲ್ತ್ ಇನ್ಶೂರೆನ್ಸ್ ಕೊಳ್ಳುವ ಮೊದಲು ನೆನಪಿಡಬೇಕಾದ 5 ಅಂಶಗಳು!

ಅತ್ತ, ದೇಶದಲ್ಲಿ ಮನವಿ ಸಲ್ಲಿಕೆಯಾದರೂ ಇತ್ಯರ್ಥವಾಗದೆ ಅಥವಾ ಪಾವತಿಯಾಗದೆ ಉಳಿದ ವಿಮೆಯ ಸಂಖ್ಯೆ 2023ರಲ್ಲಿ 17.5 ದಶಲಕ್ಷದಷ್ಟಿದ್ದು, ಅದು 2024ರ ಮಾರ್ಚ್‌ ವೇಳೆಗೆ 25 ದಶಲಕ್ಷಕ್ಕೆ ತಲುಪಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

White Cloth on Dead Body: ಎಲ್ಲ ಧರ್ಮದಲ್ಲಿಯೂ ಹೆಣದ ಮೇಲೆ ಬಿಳಿ ಬಟ್ಟೆಯನ್ನೇ ಹೊದಿಸೋದು ಯಾಕೆ?
ನಮಗಿಂತ ಈ ಅಜ್ಜನೇ ಗ್ರೇಟ್! 18,000 ಅಡಿ ಎತ್ತರದಿಂದ ಸ್ಕೈಡೈವಿಂಗ್ ಮಾಡಿದ ದಾದಾಜಿ! ವಿಡಿಯೋ ವೈರಲ್