ದೇಗುಲದಲ್ಲಿ ಹೂವಿನ ರಂಗೋಲಿ ಹಾಕಿದ್ದಕ್ಕೆ ಕೇಸು

Kannadaprabha News   | Kannada Prabha
Published : Sep 07, 2025, 04:44 AM IST
Easy flower petals rangoli design for Onam 2025

ಸಾರಾಂಶ

ಓಣಂ ಹಬ್ಬದ ಅಂಗವಾಗಿ ಕೇರಳದ ಕೊಲ್ಲಂ ಜಿಲ್ಲೆಯ ಪಾರ್ಥಸಾರಥಿ ದೇವಸ್ಥಾನದಲ್ಲಿ ಹೂವಿನ ರಂಗೋಲಿ ಹಾಕಿದ 27 ಆರ್‌ಎಸ್‌ಎಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕೊಲ್ಲಂ: ಓಣಂ ಹಬ್ಬದ ಅಂಗವಾಗಿ ಕೇರಳದ ಕೊಲ್ಲಂ ಜಿಲ್ಲೆಯ ಪಾರ್ಥಸಾರಥಿ ದೇವಸ್ಥಾನದಲ್ಲಿ ಹೂವಿನ ರಂಗೋಲಿ ಹಾಕಿದ 27 ಆರ್‌ಎಸ್‌ಎಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದೇಗುಲದ ಎದುರು ಕಾರ್ಯಕರ್ತರು, ಆರ್‌ಎಸ್‌ಎಸ್‌ನ ಧ್ವಜ ಮತ್ತು ಆಪರೇಷನ್ ಸಿಂದೂರ ಎಂದು ಹೂವಿನಲ್ಲಿ ರಂಗೋಲಿ ಬರೆದಿದ್ದರು. ಆದರೆ ಅನುಮತಿ ಇಲ್ಲದೇ ದೇಗುಲ ಆವರಣದಲ್ಲಿ ಹೂವಿನ ರಂಗೋಲಿ ಬಿಡಿಸಲಾಗಿದೆ ಎಂದು ದೇಗುಲದ ಆಡಳಿತ ಮಂಡಳಿ ದೂರು ನೀಡಿದ ಹಿನ್ನೆಲೆಯಲ್ಲಿ 27 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಈ ಕ್ರಮವನ್ನು ಬಿಜೆಪಿ ಖಂಡಿಸಿದ್ದು, ತಕ್ಷಣದಲ್ಲಿ ಎಫ್‌ಐಆರ್‌ ರದ್ದುಗೊಳಿಸದಿದ್ದರೆ ಕೋರ್ಟ್ ಕದ ತಟ್ಟುವುದಾಗಿ ಎಚ್ಚರಿಸಿದೆ.

ಕೇರಳವನ್ನು ಜಮಾತ್ ಆಳುತ್ತಿದೆಯೇ?

ದೇಶದಲ್ಲೇ ಮೊದಲ ಬಾರಿಗೆ ಹೂವಿನ ರಂಗೋಲಿ ಹಾಕಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ. ‘ಆಪರೇಷನ್ ಸಿಂದೂರ’ ಎಂದು ಬರೆದು, ಹೂವಿನ ರಂಗೋಲಿ ಹಾಕಿದ್ದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಸರ್ಕಾರ ಏನನ್ನು ಸಾಧಿಸಲು ಪ್ರಯತ್ನಿಸುತ್ತಿದೆ? ಕೇರಳವನ್ನು ಜಮಾತ್-ಎ-ಇಸ್ಲಾಮಿ ಆಳುತ್ತಿದೆಯೇ ಅಥವಾ ಕೇರಳ ಪಾಕಿಸ್ತಾನದ ಆಡಳಿತದಲ್ಲಿದೆಯೇ?

-ರಾಜೀವ್ ಚಂದ್ರಶೇಖರ್, ಕೇರಳ ಬಿಜೆಪಿ ರಾಜ್ಯಾಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ