ಕೊರೋನಾ ಎಚ್ಚರ ತಪ್ಪಿದರೆ ಅಪಾಯ| ಭಾರೀ ಏರಿಕೆ ತಪ್ಪಿಸುವಲ್ಲಿ ಯಶಸ್ವಿ, ಮೈಮರೆತರೆ ಅಪಾಯ| ದೇಶದ ಜನತೆಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ
ನವದೆಹಲಿ(ಮೇ.05): ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ದಿನೇದಿನೇ ದಾಖಲೆ ಬರೆಯುತ್ತಿರುವಾಗಲೇ ಸಮಾಧಾನದ ಸುದ್ದಿಯೊಂದನ್ನು ಸರ್ಕಾರ ನೀಡಿದೆ. ಸೋಮವಾರ ಸಂಜೆಗೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ದಾಖಲೆಯ 1074 ಮಂದಿ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದೆ.
ಕೊರೋನಾ ವೈರಸ್ ದೇಶದಲ್ಲಿ ಕಾಣಿಸಿಕೊಂಡ ಬಳಿಕ ಈವರೆಗೆ ದೇಶದಲ್ಲಿ 11,706 ಮಂದಿ ಆ ವ್ಯಾಧಿಯಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಚೇತರಿಕೆ ಪ್ರಮಾಣ ದೇಶದಲ್ಲಿ ಶೇ.27.52ಕ್ಕೆ ಏರಿಕೆಯಾಗಿದೆ. ಚೇತರಿಕೆ ಹಾಗೂ ಸಾವಿನ ಅನುಪಾತ 90:20ಕ್ಕೆ ಹೆಚ್ಚಳಗೊಂಡಿದೆ. ಏ.17ರಂದು ಇದು 80:20ರಷ್ಟಿತ್ತು. ಹೀಗಾಗಿ ಗಣನೀಯ ಸುಧಾರಣೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್‌ವಾಲ್ ಮಾಹಿತಿ ನೀಡಿದರು.
undefined
900 ಹೊಸ ಮದ್ಯದಂಗಡಿ ತೆರೆಯಲು ನಿರ್ಧಾರ!
ಇದೇ ವೇಳೆ ಈವರೆಗೆ ಸೋಂಕು ಭಾರೀ ಪ್ರಮಾಣದಲ್ಲಿ ಹರಡುವುದನ್ನು ನಿಯಂತ್ರಣಾ ಕ್ರಮಗಳ ಮೂಲಕ ತಪ್ಪಿಸಲಾಗಿದೆ. ಮುಂದೆಯೂ ಎಲ್ಲರೂ ಸಾಮೂಹಿಕವಾಗಿ ಕೆಲಸ ಮಾಡಿದರೆ ಕೊರೋನಾ ವೈರಸ್ ಪ್ರಕರಣ ದೇಶದಲ್ಲಿ ಗರಿಷ್ಠ ಮಟ್ಟಕ್ಕೆ ಏರಿಕೆಯಾಗುವುದಿಲ್ಲ. ಒಂದು ವೇಳೆ ವಿಫಲವಾದರೆ ನಾವು ಭಾರೀ ಅಪಾಯದ ಸಂದರ್ಭವನ್ನು ಎದುರಿಸಬೇಕಾಗಿ ಬರಬಹುದು ಎಂದು ತಿಳಿಸಿದರು. ದೇಶದಲ್ಲಿ ಪರೀಕ್ಷಾ ಕಿಟ್‌ಗಳಿಗೆ ಕೊರತೆ ಇಲ್ಲ ಎಂದು ಹೇಳಿದರು.
2672 ಜನರಿಗೆ ಸೋಂಕು: ಈವರೆಗಿನ ಏಕದಿನ ಗರಿಷ್ಠ
ಸೋಮವಾರ ದೇಶದ ವಿವಿಧ ರಾಜ್ಯಗಳಲ್ಲಿ 2672 ಹೊಸ ಕೊರೋನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 44451ಕ್ಕೆ ಏರಿದೆ. ಇದು ಈವರೆಗಿನ ಒಂದು ದಿನದ ಗರಿಷ್ಠ ಪ್ರಮಾಣವಾಗಿದೆ. ಇನ್ನು 67 ಜನ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 1458ಕ್ಕೆ ತಲುಪಿದೆ.
ರಾಜ್ಯದ ಪ್ರತಿ ವ್ಯಕ್ತಿಯ ಹೆಲ್ತ್ ರಿಜಿಸ್ಟರ್: ದೇಶದಲ್ಲೇ ಪ್ರಥಮ!
ಮಹಾರಾಷ್ಟ್ರದಲ್ಲಿ 000, ತಮಿಳುನಾಡಿನಲ್ಲಿ 527, ಗುಜರಾತ್‌ನಲ್ಲಿ 376, ರಾಜಸ್ಥಾನದಲ್ಲಿ 130 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.