4ಕ್ಕೂ ಹೆಚ್ಚು ಬೈಕುಗಳಿಗೆ ಗುದ್ದಿ ನಿಲ್ಲಿಸದೇ ಹೋದ ಕಾರು: 2 ಸಾವು, 9 ಜನರಿಗೆ ಗಂಭೀರ ಗಾಯ: ವೀಡಿಯೋ

Published : Apr 08, 2025, 10:20 AM ISTUpdated : Apr 08, 2025, 11:11 AM IST
 4ಕ್ಕೂ ಹೆಚ್ಚು ಬೈಕುಗಳಿಗೆ ಗುದ್ದಿ ನಿಲ್ಲಿಸದೇ ಹೋದ ಕಾರು: 2 ಸಾವು, 9 ಜನರಿಗೆ ಗಂಭೀರ ಗಾಯ: ವೀಡಿಯೋ

ಸಾರಾಂಶ

ಜೈಪುರದಲ್ಲಿ ಕಾರು ಚಾಲಕನ ಅಜಾಗರೂಕತೆಯಿಂದ ಇಬ್ಬರು ಬೈಕ್ ಸವಾರರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ವಿರುದ್ಧ ದಿಕ್ಕಿನಲ್ಲಿ ಬಂದ ಕಾರು ಹಲವು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಂಚಾರ ನಿಯಮವನ್ನು ಎಷ್ಟೇ ಚೆನ್ನಾಗಿ ಪಾಲಿಸಿದರೂ ಇನ್ಯಾರೋ ಮಾಡುವ ಅನಾಹುತಕ್ಕೆ ಮತ್ತಿನ್ಯಾರೋ ಬಲಿಯಾಗುತ್ತಾರೆ. ಹೆಲ್ಮೆಟ್ ಧರಿಸಿಲ್ಲ, ಸೀಟ್ ಬೆಲ್ಟ್ ಧರಿಸಿಲ್ಲ ಎಂದು ಟ್ರಾಫಿಕ್ ಪೊಲೀಸರು ಪ್ರತಿದಿನವೂ ವಾಹನ ಸವಾರರಿಗೆ ದಂಡ ವಿಧಿಸುತ್ತಾರೆ. ಆದರೆ ಸಂಚಾರ ನಿಯಮವನ್ನು ಸರಿಯಾಗಿ ಪಾಲಿಸುವ ಜನರೇ ಇನ್ಯಾರದ್ದೋ ತಪ್ಪಿನ ಕಾರಣಕ್ಕೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಈಗ ಅದೇ ರೀತಿಯ ಘಟನೆಯೊಂದು ಜೈಪುರದಲ್ಲಿ ನಡೆದಿದೆ. ಕಾರು ಚಾಲಕನ ಅಜಾಗರೂಕ ಚಾಲನೆಯಿಂದ ಇಬ್ಬರು ಬೈಕ್ ಸವಾರರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಹಿಟ್ & ರನ್ ಪ್ರಕರಣ ಇದಾಗಿದ್ದು, ಘಟನೆಯ ಭಯಾನಕ ದೃಶ್ಯಾವಳಿ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಿರುದ್ಧ ದಿಕ್ಕಿನಲ್ಲಿ ಎರ್ರಾಬಿರ್ರಿಯಾಗಿ ಕಾರು ಓಡಿಸಿಕೊಂಡು ಬಂದ ಚಾಲಕನೋರ್ವ ಎದುರಿನಿಂದ ಬರುತ್ತಿದ್ದ 4ಕ್ಕೂ ಹೆಚ್ಚು ಬೈಕುಗಳನ್ನು ಗುದ್ದಿಕೊಂಡು ಹೋಗಿದ್ದಾನೆ. ಪರಿಣಾಮ ಇಬ್ಬರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ಯಮರಾಜನಂತೆ ಬಂದ ಕಾರು ತನ್ನ ಎದುರಿನಿಂದ ಬಂದ ಮೂರಕ್ಕೂ ಹೆಚ್ಚು ಬೈಕ್ಕುಗಳನ್ನು  ತೀರದಲ್ಲಿರುವವರನ್ನು ಅಲೆ ತೊಳೆದುಕೊಂಡು ಹೋಗುವಂತೆ ಗುದ್ದಿಕೊಂಡು ಹೋಗಿದ್ದಾನೆ. ಕಾರು ಗುದ್ದಿದ ರಭಸಕ್ಕೆ ಮೂರಕ್ಕೂ ಹೆಚ್ಚು ಬೈಕ್‌ನಲ್ಲಿ ಇದ್ದವರೆಲ್ಲರೂ ಅತ್ತಿತ್ತ ಹೋಗಿ ಬಿದ್ದಿದ್ದಾರೆ, ಅವರ ಬೈಕ್‌ಗಳು ಮತ್ತೊಂದು ಕಡೆ ಬಿದ್ದಿವೆ. ರಾಜಸ್ಥಾನದ ಜೈಪುರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಹರ್‌ಘರ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ.  ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ 9 ಜನ ಗಾಯಗೊಂಡಿದ್ದಾರೆ. 

ರೋಲರ್ ಕೋಸ್ಟರ್‌ ರೈಡ್ ವೇಳೆ ರಾಡ್ ಕಟ್ ಆಗಿ ಯುವತಿ ಸಾವು

ಇಷ್ಟೊಂದು ದೊಡ್ಡ ಅನಾಹುತದ ನಂತರವೂ ಕಾರು ಚಾಲಕ ಕಾರು ನಿಲ್ಲಿಸದೇ ಪರಾರಿಯಾಗಿದ್ದಾನೆ. ನಹರ್‌ಗರ್‌ ಪ್ರದೇಶದಲ್ಲಿ ಹಿಟ್‌ & ರನ್ ಪ್ರಕರಣವೊಂದು ನಡೆದಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 9 ಜನರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್‌ಎಂಎಸ್ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಕನ್ಹೇಯಲಾಲ್ ಮಾಹಿತಿ ನೀಡಿದ್ದಾರೆ. 

ಪತ್ನಿಯ ಆಸ್ಪತ್ರೆಗೆ ದಾಖಲಿಸಿ 2 ವರ್ಷವಾದರೂ ಬಾರದ ಪತಿ: ಕೋಟಿ ಮೊತ್ತದ ಬಿಲ್‌ಗಾಗಿ ಕೋರ್ಟ್ ಮೆಟ್ಟಿಲೇರಿದ ಆಸ್ಪತ್ರೆ

ಅಪಘಾತದ ಬೀಕರ ದೃಶ್ಯಾವಳಿಯ ವೀಡಿಯೋ ಇಲ್ಲಿದೆ ನೋಡಿ:

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು