ತನ್ನ ದೇಶದಲ್ಲಿನ ಖಲಿಸ್ತಾನಿ ಉಗ್ರರ ಬಗ್ಗೆ ಮೃದು ಧೋರಣೆ ಹೊಂದಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ, ಮತ್ತೆ ಅಂಥದ್ದೇ ನಿಲುವನ್ನು ಬಹಿರಂಗಪಡಿಸಿದ್ದಾರೆ. ಜಿ20 ಶೃಂಗಸಭೆಗಾಗಿ ದೆಹಲಿಗೆ ಆಗಮಿಸಿದ್ದ ಜಸ್ಟಿನ್ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ನವದೆಹಲಿ: ತನ್ನ ದೇಶದಲ್ಲಿನ ಖಲಿಸ್ತಾನಿ ಉಗ್ರರ ಬಗ್ಗೆ ಮೃದು ಧೋರಣೆ ಹೊಂದಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ, ಮತ್ತೆ ಅಂಥದ್ದೇ ನಿಲುವನ್ನು ಬಹಿರಂಗಪಡಿಸಿದ್ದಾರೆ. ಜಿ20 ಶೃಂಗಸಭೆಗಾಗಿ ದೆಹಲಿಗೆ ಆಗಮಿಸಿದ್ದ ಜಸ್ಟಿನ್ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತುಕತೆ ವೇಳೆ ಖಲಿಸ್ತಾನಿಗಳ ಕುರಿತು ಭಾರತದ ಕಳವಳದ ಬಗ್ಗೆ ಪ್ರಶ್ನಿಸಿದ ವೇಳೆ, ನಮ್ಮ ದೇಶ ಶಾಂತಿಯುತ ಪ್ರತಿಭಟನೆಯ ಸ್ವಾತಂತ್ರವನ್ನು, ಆತ್ಮಸಾಕ್ಷಿಯ ಸ್ವಾತಂತ್ರವನ್ನು, ಶಾಂತಿಯುತ ಪ್ರತಿಭಟನೆಯನ್ನು ಎಂದೆಂದಿಗೂ ರಕ್ಷಣೆ ಮಾಡುತ್ತದೆ ಮತ್ತು ಅದು ನಮಗೆ ಅತ್ಯಂತ ಮಹತ್ವದ್ದು ಕೂಡಾ ಹೌದು. ಆದರೆ ಇದೇ ವೇಳೆ ಇಂಥ ಪ್ರತಿಭಟನೆ ವೇಳೆಯ ಹಿಂಸೆ ಮತ್ತು ದ್ವೇಷವನ್ನು ಹಿಮ್ಮೆಟ್ಟಿಸುವ ಕೆಲಸ ಮಾಡುತ್ತದೆ ಎನ್ನುವ ಮೂಲಕ ಭಾರತದಲ್ಲಿ ಖಲಿಸ್ತಾನಿಗಳಿಗೆ (Khalistani) ಪ್ರತ್ಯೇಕ ದೇಶದ ಕುರಿತ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುವುದಿಲ್ಲ ಎಂದು ಮತ್ತೊಮ್ಮೆ ಪರೋಕ್ಷವಾಗಿ ಹೇಳಿದ್ದಾರೆ. ಇದೇ ವೇಳೆ ಕೆಲವೇ ವ್ಯಕ್ತಿಗಳ ಕೆಲಸವು ಒಂದಿಡೀ ಸಮುದಾಯ ಅಥವಾ ಕೆನಡಾವನ್ನು ಪ್ರತಿನಿಧಿಸುವುದಿಲ್ಲ ಎಂದೂ ಜಸ್ಟಿನ್ (Justin Trudeau) ಹೇಳಿದರು.
ಜೊತೆಗೆ, ಭಾರತವು ಇಡೀ ವಿಶ್ವದಲ್ಲಿ ಅತ್ಯಂತ ಮಹತ್ವದ ಆರ್ಥಿಕತೆ ಹಾಗೂ ಜಾಗತಿಕ ಹವಾಮಾನ ಬದಲಾವಣೆ, ಅಭಿವೃದ್ಧಿಯ ಸೃಷ್ಟಿಮತ್ತು ಎಲ್ಲ ನಾಗರಿಕ ಅಭ್ಯುದಯದ ವಿಷಯದಲ್ಲಿ ಕೆನಡಾ ಪಾಲಿಗೆ ಅತ್ಯಂತ ಆಪ್ತ ಪಾಲುದಾರ ಎಂದು ಜಸ್ಟಿನ್ ಹೇಳಿದರು.
ಜಿ20 ಶೃಂಗಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟೀಕೆ, ಅದೇ ಪಕ್ಷದ ಶಶಿ ತರೂರ್ ಪ್ರಶಂಸೆ
ಜಿ20 ಕೊನೆಯ ದಿನ ಜಾಗತಿಕ ನಾಯಕರ ವನಮಹೋತ್ಸವ
ನವದೆಹಲಿ: ಜಿ20 ಶೃಂಗ (G20 summit)ಸಭೆಯ ಅಂತಿಮ ದಿನವಾದ ಭಾನುವಾರದಂದು ವಿದೇಶಿ ಗಣ್ಯರು ಗಿಡ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಿದರು. ಶೃಂಗದ ಅಂತಿಮ ‘ಒಂದು ಭವಿಷ್ಯ’ ಸಭೆಗೂ ಮುನ್ನ ಜಿ20 ಸದಸ್ಯ ದೇಶಗಳು ತಮ್ಮ ದೇಶದ ಸಸಿಗಳನ್ನು ಇಲ್ಲಿನ ಭಾರತ ಮಂಟಪದಲ್ಲಿ ನೆಟ್ಟರು. ಈ ಕಾರ್ಯಕ್ರಮದ ಬಳಿಕ 2022ರಲ್ಲಿ ಜಿ20 ಅಧ್ಯಕ್ಷತೆ ವಹಿಸಿದ್ದ ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೊಡೋ (Indonesian President Joko Widodo) ಅವರು ಪ್ರಧಾನಿ ಮೋದಿ ಅವರಿಗೆ ಅವರ ದೇಶದ ಗಿಡವನ್ನು ಹಸ್ತಾಂತರಿಸಿದರು. ಇವರ ನಂತರದಲ್ಲಿ ಬ್ರೆಜಿಲ್ ದೇಶದ ಅಧ್ಯಕ್ಷ ಲುಯಿಜ್ ಇನಾಸಿಯೋ ಲುಲಾ ಡಾ ಸಿಲ್ವಾ (Brazil, Luiz Inacio Lula da Silva) ಅವರು ತಮ್ಮ ದೇಶದ ಗಿಡವನ್ನು ನೀಡುವ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿದರು.
ಗಾಂಧೀಜಿ ಪುಣ್ಯಸಮಾಧಿ ರಾಜಘಾಟ್‌ಗೆ ಜಿ20 ಗಣ್ಯರ ನಮನ
ನವದೆಹಲಿ: ಜಿ20 ಶೃಂಗಸಭೆಯ ಕೊನೆಯ ದಿನವಾದ ಭಾನುವಾರದಂದು ವಿದೇಶಿ ನಾಯಕರು ಮಹಾತ್ಮ ಗಾಂಧೀಜಿ ಅವರ ಪುಣ್ಯಸಮಾಧಿ ರಾಜಘಾಟ್‌ಗೆ ಭೇಟಿ ನೀಡಿ ಪ್ರಣಾಮ ಸಲ್ಲಿಸಿದರು. ಇವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ವೈಯಕ್ತಿಕವಾಗಿ ಬಂದು ಸ್ವಾಗತಿಸಿದರು. ಇವರ ಸ್ವಾಗತದ ವೇಳೆ ಖಾದಿಯಿಂದ ನೇಯ್ದಿರುವ ಸಾಬರಮತಿ ಆಶ್ರಮದ ಚಿತ್ರವಿರುವ ಶಲ್ಯವನ್ನು ನೀಡಿ ಗೌರವಿಸಿದರು. ಈ ವೇಳೆ ಎಲ್ಲರೂ ಗಾಂಧೀಜಿ ಅವರಿಗೆ ಪುಷ್ಪನಮನ ಸಲ್ಲಿಸಿದರು. ವಿಶೇಷವೆಂದರೆ ಅಲ್ಲಿ ಪ್ರಧಾನಿ ನರೇಂದ್ರ ಮೋದಿ, ಬ್ರಿಟನ್ ಪ್ರಧಾನಿ ರಿಷಿ ಸುನಾಕ್ (Rishi sunak) ಹಾಗೂ ಇತರ ಕೆಲವು ನಾಯಕರು ಬರಿಗಾಲಿನಲ್ಲಿಯೇ ನಡೆದಾಡಿ ನಮನ ಸಲ್ಲಿಸಿದರು. ಇದೇ ವೇಳೆ ಗಣ್ಯರು ಶಾಂತಿ ಫಲಕದ ಮೇಲೆ ಹಸ್ತಾಕ್ಷರ ಬರೆದರು.
ಜವಾನ್ ಯಶಸ್ಸಿನ ಬೆನ್ನಲ್ಲೇ ಪ್ರಧಾನಿ ಮೋದಿ ಹಾಡಿ ಹೊಗಳಿದ ಶಾರುಖ್ ಖಾನ್