Calcutta High Court: ಒಳಉಡುಪು ತೆಗೆಯುವಂತೆ ಅಪ್ರಾಪ್ತಳಿಗೆ ಒತ್ತಾಯಿಸಿದ್ರೂ ಅದು ರೇಪ್‌!

Published : Feb 07, 2023, 05:06 PM IST
Calcutta High Court: ಒಳಉಡುಪು ತೆಗೆಯುವಂತೆ ಅಪ್ರಾಪ್ತಳಿಗೆ ಒತ್ತಾಯಿಸಿದ್ರೂ ಅದು ರೇಪ್‌!

ಸಾರಾಂಶ

ಅಪ್ರಾಪ್ತ ಹುಡುಗಿಗೆ ಒಳಉಡುಪು ಬಿಚ್ಚುವಂತೆ ಹೇಳುವುದು, ತನ್ನೊಂದಿಗೆ ಮಲಗುವಂತೆ ಹೇಳುವುದು ಕೂಡ ರೇಪ್‌ಗೆ ಸಮನಾದದ್ದು ಎಂದು ಕೋಲ್ಕತ್ತ ಹೈಕೋರ್ಟ್‌ ಪ್ರಕರಣದ ವಿಚಾರಣೆಯೊಂದರ ವೇಳೆ ಹೇಳಿದೆ.  

ಕೋಲ್ಕತ್ತಾ (ಫೆ.7): ಅಪ್ರಾಪ್ತ ಬಾಲಕಿಗೆ ಒಳಉಡುಪು ಬಿಚ್ಚುವಂತೆ ಒತ್ತಾಯ ಮಾಡುವುದು ಕೂಡ ರೇಪ್‌ಗೆ ಸಮಾನವಾದದ್ದು ಎಂದು ಕೋಲ್ಕತ್ತಾ ಹೈಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದೆ. ಪ್ರಕರಣದಲ್ಲಿ ಬಾಲಕಿಯ ಮೇಲೆ ದೈಹಿಕವಾಗಿ ಯಾವುದೇ ರೀತಿಯಲ್ಲಿ ಹಲ್ಲೆ ಮಾಡಿರಲಿಲ್ಲ. ಆದ್ದರಿಂದ ಇದನ್ನು ರೇಪ್‌ ಎಂದು ಪರಿಗಣಿಸುವುದೋ ಬೇಡವೋ ಎನ್ನುವ ಬಗ್ಗ ವಾದಗಳಿದ್ದವು. ಆದರೆ ವಿಚಾರಣೆ ನಡೆಸಿರುವ ಕೋರ್ಟ್‌, ಅಪ್ರಾಪ್ತ ಬಾಲಕಿಗೆ ಒಳಉಡುಪು ತೆಗೆಯುವಂತೆ ಒತ್ತಾಯ ಮಾಡಿದ್ದಲ್ಲದೆ, ಆರೋಪಿಯು ತನ್ನೊಂದಿಗೆ ಮಲಗುವಂತೆ ಹೇಳಿದ್ದಾನೆ ಹಾಗಾಗಿ ಇದು ರೇಪ್‌ ಎಂದು ಹೇಳಿದೆ. ದಕ್ಷಿಣ ದಿನಾಜ್‌ಪುರದ ಬಲೂರ್‌ಘಾಟ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ತೀರ್ಪಿನಲ್ಲಿ, ರವಿ ರಾಯ್ ಎಂಬ ಆರೋಪಿಯನ್ನು, ಅಪ್ರಾಪ್ತ ಬಾಲಕಿಯರ ವಿರುದ್ಧ ಲೈಂಗಿಕ ಅಪರಾಧಗಳ ಅಪರಾಧಿ ಎಂದು ಕೋರ್ಟ್‌ ತೀರ್ಪು ನೀಡಿತ್ತು. ಕೆಳ ನ್ಯಾಯಾಲಯದ ತೀರ್ಪನ್ನು ಹೈ ಕೋರ್ಟ್‌ ಎತ್ತಿಹಿಡಿದಿದ್ದು ಮತ್ತು ಕೃತ್ಯವನ್ನು ಅಪರಾಧವೆಂದು ಪರಿಗಣಿಸಿದೆ. 2007ರಲ್ಲಿ ನಡೆದ ಪ್ರಕರಣ ಇದಾಗಿದ್ದು, ಮೇ ತಿಂಗಳ 7ನೇ ತಾರೀಖಿನಿಂದ ಸಂಜೆ 6.30ರ ವೇಳೆಗೆ ಅಪ್ರಾಪ್ತ ಬಾಲಕಿಗೆ ಐಸ್ ಕ್ರೀಮ್‌ ಕೊಡಿಸುವುದಾಗಿ ಮನೆಯ ಸಮೀಪದ ನಿರ್ಜನ ಪ್ರದೇಶ ಕರೆದುಕೊಂಡು ಹೋಗಿದ್ದ ರವಿ ರಾಯ್‌, ಆಕೆಗೆ ತನ್ನ ಒಳಉಡುಪು ಬಿಚ್ಚುವಂತೆ ಹೇಳಿದ್ದ. ಆದರೆ, ಬಾಲಕಿ ಇದಕ್ಕೆ ಒಪ್ಪಿರಲಿಲ್ಲ.

ದೂರುದಾರರ ಪ್ರಕಾರ, ಆ ಬಳಿಕ ರವಿ ರಾಯ್‌ ಆಕೆಯನ್ನು ವಿವಸ್ತ್ರಗೊಳಿಸಿದ್ದಲ್ಲದೆ, ತನ್ನೊಂದಿಗೆ ಬಲವಂತವಾಗಿ ಮಲಗಿಸಿಕೊಂಡಿದ್ದ. ಈ ವೇಳೆ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದಳು. ಈ ವೇಳೆ ಅಕ್ಕಪಕ್ಕದಲ್ಲಿದ್ದ ಸ್ಥಳೀಯರು ನಿರ್ಜನ ಪ್ರದೇಶಕ್ಕೆ ಆಗಮಿಸಿದ್ದರು. ಈ ವೇಳೆ ರವಿ ರಾಯ್‌ರನ್ನು ಸ್ಥಳೀಯ ಜನರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಇದರ ವಿಚಾರಣೆ ನಡೆದ ಬಳಿಕ 2008ರ ನವೆಂಬರ್‌ನಲ್ಲಿ ರವಿಗೆ ಐದೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅದರೊಂದಿಗೆ ಐದು ಸಾವಿರ ರೂಪಾಯಿಗಳ ದಂಡವನ್ನೂ ವಿಧಿಸಲಾಗಿತ್ತು.

ಕೈ ಕಾಲುಗಳನ್ನು ಕಟ್ಟಿಹಾಕಿ 14 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಕಾಮುಕರ ಬಂಧನ

ಈ ಪ್ರಕರಣ ನಡೆದ 15 ವರ್ಷಗಳಾದ ಬಳಿಕ, ರವಿ ರಾಯ್‌ ತನ್ನ ವಿರುದ್ಧ ಬಂದಿದ್ದ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದ. ಆಕೆಯ ಮೇಲೆ ಹಲ್ಲೆ ಮಾಡಿದ್ದು ‘ಅಪರಾಧ’ ಎಂದು ರವಿ ಒಪ್ಪಿಕೊಂಡರೂ, ಅಪ್ರಾಪ್ತ ಬಾಲಕಿಯ ಜೊತೆ ಯಾವುದೇ ಕೆಟ್ಟ ಕೆಲಸ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಆಕೆಯೊಂದಿಗೆ ಮಲಗಲು ಹೋಗಿದ್ದೆ ಎಂದು ಹೇಳಿದ್ದ.

 

ರೇಪ್‌ ಮಾಡಲು ಯತ್ನಿಸಿದ ಪಾಪಿಯ ತುಟಿಯನ್ನೇ ಕಚ್ಚಿ ಕತ್ತರಿಸಿ ಬಚಾವ್ ಆದ ಯುವತಿ!

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಅನನ್ಯಾ ವಂದೋಪಾಧ್ಯಾಯ ಫೆಬ್ರವರಿ 3 ರಂದು ಈ ತೀರ್ಪು ನೀಡಿದ್ದಾರೆ. 'ತನ್ನ ಲೈಂಗಿಕ ಕಾಮನೆಗಳನ್ನು ಪೂರೈಸಬೇಕು ಎನ್ನುವುದ ಹೊರತಾಗಿ ಆರೋಪಿಯು ಅಪ್ರಾಪ್ತ ಬಾಲಕಿಗೆ ಆ ಹಂತದಲ್ಲಿ, ಆ ಪ್ರದೇಶಲ್ಲಿ ಐಸ್‌ ಕ್ರೀಮ್‌ ನೀಡುವಂಥ ಯಾವ ಕಾರಣವೂ ಇರಲಿಲ್ಲ. ಆಕೆಯೊಂದಿಗೆ ಸೆಕ್ಸ್‌ ಮಾಡುವ ಉದ್ದೇಶ ಇಟ್ಟುಕೊಂಡೇ, ಆಕೆಗೆ ಐಸ್‌ಕ್ರೀಮ್‌ನ ಆಮಿಷವೊಡ್ಡಿ ಅವಳನ್ನು ಏಕಾಂತ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ. ಅದಾದ ಬಳಿಕ ಆಕೆಗೆ ಪ್ಯಾಂಟ್‌ ಬಿಚ್ಚುವಂತೆ ಹೇಳಿದ್ದ. ಇದಕ್ಕೆ ಆಕೆ ಒಪ್ಪದೇ ಇದ್ದಾಗ, ಆತನೇ ಬಲವಂತವಾಗಿ ಪ್ಯಾಂಟ್‌ ಬಿಚ್ಚಿದ್ದಾನೆ. ಇದು ಅಪರಾಧವನ್ನು ಮಾಡುವ ಪ್ರಯತ್ನವನ್ನು ಸೂಚಿಸುತ್ತದೆ. ಅಪ್ರಾಪ್ತ ಬಾಲಕಿಯ ವೈದ್ಯಕೀಯ ಪರೀಕ್ಷೆಯಲ್ಲಿ ದೈಹಿಕ ಗಾಯ ಅಥವಾ ಲೈಂಗಿಕ ದೌರ್ಜನ್ಯದ ಯಾವುದೇ ಪುರಾವೆ ಕಂಡು ಬಂದಿಲ್ಲ. . ನ್ಯಾಯಾಲಯದ ಮೇಲ್ವಿಚಾರಣೆಯ ಹೊರತಾಗಿಯೂ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ದುಷ್ಕೃತ್ಯಗಳನ್ನು ಲೈಂಗಿಕ ಕಿರುಕುಳ ಎಂದು ಪರಿಗಣಿಸುತ್ತದೆ ಎಂದ ತೀರ್ಪು ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!
ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ