* ಪಶ್ಚಿಮ ಬಂಗಾಳದಲ್ಲಿ ಸಚಿವರ ಪುತ್ರಿಯ ಅಕ್ರಮ ನೇಮಕಾತಿ
* ಹೆಚ್ಚು ಅಂಕ ಗಳಿಸಿದಾಕೆಗೆ ಹುದ್ದೆ ಇಲ್ಲ
* ಹೈಕೋರ್ಟ್ ವಿಚಾರಣೆಯಲ್ಲಿ ಬಯಲಾಯ್ತು ಅಕ್ರಮ
ಕೋಲ್ಕತ್ತಾ(ಮೇ.20): ಪಶ್ಚಿಮ ಬಂಗಾಳದ ಶಿಕ್ಷಣ ಖಾತೆಯ ರಾಜ್ಯ ಸಚಿವ ಪರೇಶ್ ಚಂದ್ರ ಅಧಿಕಾರಿಯ ಸಂಕಷ್ಟ ದಿನೇ ದಿನೇ ಹೆಚ್ಚಾಗುತ್ತಿವೆ. ಪಶ್ಚಿಮ ಬಂಗಾಳದ ಶಿಕ್ಷಣ ಖಾತೆ ರಾಜ್ಯ ಸಚಿವ ಪರೇಶ್ ಚಂದ್ರ ಅಧಿಕಾರಿ ಅವರ ಪುತ್ರಿಯನ್ನು ಸರ್ಕಾರಿ ಅನುದಾನಿತ ಶಾಲಾ ಕೆಲಸದಿಂದ ವಜಾಗೊಳಿಸುವಂತೆ ಕೋಲ್ಕತ್ತಾ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ. ಶಿಕ್ಷಣ ಸಚಿವರ ಮಗಳು (ಅಂಕಿತಾ ಅಧಿಕಾರಿ) ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಸಚಿವರ ಪುತ್ರಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಗ ಪಡೆದ ಸಂಬಳವನ್ನು ವಾಪಸ್ ಠೇವಣಿ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ. ನ್ಯಾಯಮೂರ್ತಿ ಅವಿಜಿತ್ ಗಂಗೋಪಾಧ್ಯಾಯ ಅವರ ಏಕ ಪೀಠವು ಅಂಕಿತಾ ಅಧಿಕಾರಿಗೆ ನವೆಂಬರ್ 2018 ರಿಂದ ಪಾವತಿಸಿದ ವೇತನವನ್ನು ರಿಜಿಸ್ಟ್ರಾರ್‌ಗೆ ಎರಡು ಕಂತುಗಳಲ್ಲಿ ಠೇವಣಿ ಮಾಡುವಂತೆ ಸೂಚಿಸಿದೆ.
ಯಾವ ಪ್ರಕರಣದಲ್ಲಿ ಹೈಕೋರ್ಟ್ ಕ್ರಮ ಕೈಗೊಂಡಿದೆ?
ಅಭ್ಯರ್ಥಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತ್ತು. ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಮೆರಿಟ್ ಪಟ್ಟಿಯನ್ನು ತಿರುಚಲಾಗಿದೆ ಎಂದು ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ. ನೇಮಕಾತಿ ಪರೀಕ್ಷೆಯಲ್ಲಿ ಅಧಿಕಾರಿಯ ಪುತ್ರಿಗಿಂತಲೂ ಹೆಚ್ಚು ಅಂಕ ಪಡೆದಿದ್ದರೂ ತನಗೆ ಹುದ್ದೆ ನಿರಾಕರಿಸಲಾಗಿದೆ ಎಂದು ಅಭ್ಯರ್ಥಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಿಬಿಐ ಕೂಡ ತನಿಖೆ ನಡೆಸುತ್ತಿದೆ. ತಮ್ಮ ಪುತ್ರಿಯ ಅಕ್ರಮ ನೇಮಕಾತಿ ಕುರಿತು ಪ್ರಶ್ನಿಸಲು ಸಿಬಿಐ ಕಚೇರಿಯಲ್ಲಿ ಸಚಿವರನ್ನು ಪ್ರಶ್ನಿಸಲಾಯಿತು.
ಸಿಬಿಐ ಗುರುವಾರ ಎಫ್‌ಐಆರ್ ದಾಖಲಿಸಿದೆ
ಪರೇಶ್ ಚಂದ್ರ ಅಧಿಕಾರಿ ವಿರುದ್ಧ ಕೇಂದ್ರೀಯ ಸಂಸ್ಥೆ ಗುರುವಾರ ಎಫ್ಐಆರ್ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಅಧಿಕಾರಿಗಳ ಮುಂದೆ ಹಾಜರಾಗಲು ಹೈಕೋರ್ಟ್ ನೀಡಿದ್ದ ಗಡುವನ್ನು ಪೂರೈಸಲು ಅವರು ವಿಫಲರಾಗಿದ್ದರು. ಅಧಿಕಾರಿ ಮತ್ತು ಅವರ ಮಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌ಗಳ ಜೊತೆಗೆ ಐಪಿಸಿಯ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕತೆ) ಮತ್ತು 120 ಬಿ (ಅಪರಾಧದ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವೈದ್ಯಕೀಯ ವಿದ್ಯಾರ್ಥಿಗಳ ಗಲಾಟೆ: 15 ವಿದ್ಯಾರ್ಥಿಗಳು ಸಸ್ಪೆಂಡ್!
ಬೆಳಗಾವಿಯ ಪ್ರತಿಷ್ಠಿತ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (BIMS) ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಧ್ಯೆ ಗಲಾಟೆ ನಡೆದಿದೆ. ಓರ್ವ ವಿದ್ಯಾರ್ಥಿ ಗಾಯಗೊಂಡಿರುವ ಘಟನೆ ಮೇ 4ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಏಪ್ರಿಲ್ 30ರಂದು ವಿದ್ಯಾರ್ಥಿಗಳ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಗೆದ್ದ ವಿದ್ಯಾರ್ಥಿಗಳು ಗುಂಪು ಸೋತ ವಿದ್ಯಾರ್ಥಿಗಳ ಬಗ್ಗೆ ಹೀಯಾಳಿಸಿ ಮಾತುಗಳನ್ನ ಆಡಿದ್ದಾರೆ ಎಂಬ ಗಾಳಿ ಮಾತು ಹರಡಿದೆ. ಮೇ 4ರ ರಾತ್ರಿ 10 ಗಂಟೆಗೆ ಬಿಮ್ಸ್ ಬಾಯ್ಸ್ ಹಾಸ್ಟೆಲ್‌ನಲ್ಲಿ ಗಲಾಟೆ ನಡೆದಿದೆ.
ಆಗ ಸೋತ ವಿದ್ಯಾರ್ಥಿಗಳ ಗುಂಪು ಹಾಸ್ಟೆಲ್‌ನ ಮೂರನೇ ಮಹಡಿಯ ರೂಮ್ ನಂಬರ್ 323ರಲ್ಲಿದ್ದ ಎಂಬಿಬಿಎಸ್ ನಾಲ್ಕನೇ ವರ್ಷದ ವಿದ್ಯಾರ್ಥಿ ಬುರಾರಾಮ್ ಗೋಧರೆ ಎಂಬುವರ ಮೇಲೆ ಹಲ್ಲೆ ನಡಿಸಿದ್ದಾರೆ. ಎಂಬಿಬಿಎಸ್ ಮೂರನೇ ವರ್ಷದ ಸೋತ 15 ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗಲಾಟೆಯಲ್ಲಿ ಬುರಾರಾಮ್‌ನ ಮೂಗು, ಕಿರಿ ಬೆರಳಿಗೆ ತೀವ್ರ ಗಾಯವಾಗಿದೆ. ಬುರಾರಾಮ್ ರಾಜಸ್ಥಾನ ಮೂಲವನಾಗಿದ್ದು ಮೂಗಿಗೆ ಗಂಭೀರ ಗಾಯವಾಗಿದ್ದರಿಂದ ರಾಜಸ್ಥಾನದ ಜೋಧಪುರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕುಡುಕ ಗಂಡ ಹೆಂಡತಿಯ ಹೆಣ ಮಲಗಿಸಿದ, ಪಾಪ ಪ್ರಜ್ಞೆಯಲ್ಲಿ ನೇಣಿಗೆ ಶರಣಾದ!
ಬಿಮ್ಸ್ ನಿರ್ದೇಶಕರು ನೀಡಿದ ದೂರಿನ ಮೇರೆಗೆ 15 ವಿದ್ಯಾರ್ಥಿಗಳ ವಿರುದ್ಧ FIR: ಪ್ರಕರಣ ಸಂಬಂಧ ಬಿಮ್ಸ್ ನಿರ್ದೇಶಕ ಡಾ.ಆರ್.ಜಿ.ವಿವೇಕಿ ನೀಡಿದ ದೂರಿನ ಮೇರೆಗೆ 15 ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎಂಬಿಬಿಎಸ್ ಮೂರನೇ ವರ್ಷದ ವಿದ್ಯಾರ್ಥಿಗಳಾದ ಕೃಷ್ಣಾ ರಾಠೋಡ್, ಶಂಕರ್ ಕಂಬಾರ್, ಮಂಥನ್, ಬಸವರೆಡ್ಡಿ, ಆಕಾಶ್ ಜಾಧವ್, ಮಡಿವಾಳಪ್ಪ, ಗುರುರಾಜ್, ವಿನಯ್ ಪಾಟೀಲ್, ಸಚಿನ್ ರಾಠೋಡ್, ಸಂತೋಷ ಕುಮಾರ್, ಸೌರಬ್, ಬಸವರಾಜ ಮಕಾಳಿ, ಬಸವರಾಜ ಸತ್ತಿಗೇರಿ, ರಾಜಶೇಖರ್, ರಮೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇನ್ನು ಆರೋಪಿತ ವಿದ್ಯಾರ್ಥಿಗಳನ್ನು ಬಂಧಿಸಿಲ್ಲವಾದರೂ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ. ಪೊಲೀಸ್ ತನಿಖೆ ಮುಗಿಯೋವರೆಗೂ ಹಾಸ್ಟೆಲ್‌ಗೆ ವಿದ್ಯಾರ್ಥಿಗಳ ಪ್ರವೇಶ ನಿಷೇಧಿಸಲಾಗಿದೆ.
'15 ವೈದ್ಯಕೀಯ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಿದ್ದೇವೆ': ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಿಮ್ಸ್ ಆಡಳಿತಾಧಿಕಾರಿ ಆದಿತ್ಯ ಅಮ್ಲಾನ್ ಬಿಸ್ವಾಸ್ 'ಮೂರನೇ ವರ್ಷದ ವಿದ್ಯಾರ್ಥಿ ನಾಲ್ಕನೇ ವರ್ಷದ ವಿದ್ಯಾರ್ಥಿಗೆ ಹೊಡೆದಿದ್ದಾನೆ. ಅವರ ಮೇಲೆ ಎಫ್ಐಆರ್ ಆಗಿದೆ. ನಾಲ್ಕನೇ ವರ್ಷದ ವಿದ್ಯಾರ್ಥಿಗಳು ಚುನಾವಣೆ ನಡೆಸಿದ್ದರು. ಚುನಾವಣೆಯಲ್ಲಿ ಸೋತಿದ್ದ ಎಂಬಿಬಿಎಸ್ ನಾಲ್ಕನೇ ವರ್ಷದ ವಿದ್ಯಾರ್ಥಿಗಳು ಮೂರನೇ ವರ್ಷದ ವಿದ್ಯಾರ್ಥಿ ಬುರಾರಾಮ್ ಗೋಧರೆ ಮೇಲೆ ಹಲ್ಲೆ ಮಾಡಿದ್ದು ಅವರ ಮೂಗಿಗೆ ಗಾಯವಾಗಿದೆ. ಹೀಗಾಗಿ ರಾಜಸ್ಥಾನದ ಜೋಧಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 15 ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಸದ್ಯ ಆರೋಪಿತ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ' ಎಂದಿದ್ದಾರೆ.