ನವದೆಹಲಿ(ಜು.07): ತೀವ್ರ ಕುತೂಹಲ ಮೂಡಿಸಿದ್ದ ಕೇಂದ್ರ ಸಂಪುಟ ಪುನಾರಚನೆಗೆ ಉತ್ತರ ಸಿಕ್ಕಿದೆ. 25 ಯುವ ಹಾಗೂ ಹೊಸ ಮುಖಗಳು ಸೇರಿದಂತೆ ಒಟ್ಟು 43 ಸಚಿವರು ಮೋದಿ ಸಂಪುಟ ಸೇರಿಕೊಂಡಿದ್ದಾರೆ. ಇನ್ನು ಕರ್ನಾಟಕದ ನಾಲ್ವರು ಸಚಿವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಜ್ಞಾವಿಧಿ ಭೋಧಿಸಿದ್ದಾರೆ.
undefined
ಸಂಪುಟ ಪುನಾರಚನೆ: ನಾರಾಯಾಣ ರಾಣೆ to ಸಿಂಧಿಯಾ, ಪ್ರಮಾಣ ವಚನ ಸ್ವೀಕರಿಸಿದ ಪ್ರಮುಖರು!.
ರಾಜೀವ್ ಚಂದ್ರಶೇಖರ್:
ಕರ್ನಾಟಕದಿಂದ ಮೊದಲನೆಯರಾಗಿ ರಾಜೀವ್ ಚಂದ್ರಶೇಖರ್ ಪ್ರಮಾಣ ವಚನ ಸ್ವೀಕರಿಸಿದರು. ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಸಭಾ ಎಂಪಿ ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿರುವ ರಾಜೀವ್ ಚಂದ್ರಶೇಕರ್, ಪಾರ್ಲಿಮೆಂಟರಿ ಸ್ಟಾಂಡಿಂಗ್ ಕಮಿಟಿ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಉದ್ಯಮ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ 56ರ ಹರೆಯದ ರಾಜೀವ್ ಚಂದ್ರಶೇಖರ್, ಕಂಪ್ಯೂಟರ್ ಸೈನ್ಸ್‌ನಲ್ಲಿ MTech ಪದವಿಯನ್ನು ಪಡೆದಿದ್ದಾರೆ. ಇನ್ನು ಹಾವರ್ಡ್ ವಿಶ್ವವಿದ್ಯಾಲಯದಿಂದ ಅಡ್ವಾನ್ಸ್ ಮ್ಯಾನೇಜ್ಮೆಂಟ್ ಪ್ರೋಗ್ರಾಮ್ ಪೂರೈಸಿದ್ದಾರೆ.
ಶೋಭಾ ಕರಂದ್ಲಾಜೆ:
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಇದೇ ಮೊದಲ ಬಾರಿಗೆ ಕೇಂದ್ರ ಸಂಪುಟ ಸೇರಿಕೊಳ್ಳುತ್ತಿದ್ದಾರೆ. 2ನೇ ಬಾರಿಗೆ ಸಂಸದರಾಗಿರುವ 54 ವರ್ಷದ ಶೋಭಾ, ಕರ್ನಾಟಕದ ಸರ್ಕಾರದ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು, ವಿದ್ಯುತ್,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಿಂದ ಸೋಶಿಯಾಲಜಿಯಲ್ಲಿ ಎಂಎ(Masters in Arts) ಪದವಿ ಪಡೆದಿದ್ದಾರೆ.
ಸಂಪುಟ ಪುನಾರಚನೆ: ಮೋದಿ ಸಂಪುಟಕ್ಕೆ 43 ಸಚಿವರು, ಇಲ್ಲಿದೆ ಸಂಪೂರ್ಣ ಲಿಸ್ಟ್.
ಎ ನಾರಾಯಣಸ್ವಾಮಿ:
ಇದೇ ಮೊದಲ ಬಾರಿಗೆ ಸಂಸದರಾಗಿರುವ ಚಿತ್ರದುರ್ಗದ ಸಂಸದ ಅನೇಕಲ್ ನಾರಾಯಣಸ್ವಾಮಿ, ಇದೀಗ ಸಚಿವರಾಗಿ ಮೋದಿ ತಂಡ ಸೇರಿಕೊಂಡಿದ್ದಾರೆ. ನಾಲ್ಕು ಬಾರಿ ಕರ್ನಾಟಕದ ಶಾಸಕರಾಗಿ ಆಯ್ಕೆಯಾಗಿರುವ ನಾರಾಯಣಸ್ವಾಮಿ ಒಂದು ಬಾರಿ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 64 ವರ್ಷದ ನಾರಾಯಣಸ್ವಾಮಿ ಬೆಂಗಳೂರಿನ ಕಲಾ ಕಾಲೇಜಿನಿಂದ ಬಿಎ ಪದವಿ ಪಡೆದಿದ್ದಾರೆ.
ಭಗವಂತ ಖೂಬ:
ಬೀದರ್ ಸಂಸದ ಭಗವಂತ್ ಖೂಬ ಇದೇ ಮೊದಲ ಬಾರಿಗೆ ಕೇಂದ್ರ ಸಚಿವರಾಗಿದ್ದಾರೆ. 2 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಖೂಬ, ತುಮಕೂರಿನ ಸಿದ್ದಗಂಗಾ ಟೆಕ್ನಾಲಜಿ ಕಾಲೇಜಿನಿಂದ ಬಿಟೆಕ್ ಪದವಿ ಪದೆದಿದ್ದಾರೆ 54 ವರ್ಷದ ಭಗಂವತ್ ಖೂಬ ಇದೀಗ ಮೋದಿ ಸಂಪುಟ ಸೇರಿಕೊಂಡಿದ್ದಾರೆ.