ನವದೆಹಲಿ(ಜು.07): ಕೇಂದ್ರ ಮಂತ್ರಿ ಮಂಡಲ ಪುನರ್ ರಚನೆ ಅಂತ್ಯಗೊಂಡಿದೆ. ಇದೀಗ ಹೊಸ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೂತನ ಮಂತ್ರಿಗಳಿಗೆ ಪ್ರತಿಜ್ಞಾನವಿಧಿ ಭೋದಿಸಿದರು.
ಮೊದಲಿಗೆ ಮಹಾರಾಷ್ಟ್ರಾ ಮಾಜಿ ಸಿಎಂ, ಬಿಜೆಪಿ ಎಂಪಿ ನಾರಾಯಣ ತಾನು ರಾಣೆಗೆ ಈಶ್ವರನ ಮೇಲೆ ಪ್ರಮಾಣ ಮಾಡುತ್ತಾ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಅಸ್ಸಾಂ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೊನೋವಾಲ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮಧ್ಯಪ್ರದೇಶದ ಬಿಜೆಪಿ ಎಂಪಿ ಡಾ.ವಿರೇಂದ್ರ ಕುಮಾರ್ ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಜ್ಯೋತಿರಾಧಿತ್ಯ ಸಿಂಧಿಯಾ ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಜೆಡಿಯು ನಾಯಕ ರಾಮ್‌ಚಂದ್ರ ಪ್ರಸಾದ್ ಸಿಂಗ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಒಡಿಶಾ ಸಂಸದ, ಮಾಜಿ ಐಎಎಸ್ ಅಧಿಕಾರಿ ಅಶ್ವಿನ್ ವೈಷ್ಣವ್ ಈಶ್ವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಪಶುಪತಿ ಕುಮಾರ್ ಪರಾಸ್ ಈಶ್ವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀರಿಸಿದರು. ಭೂಪೇಂದ್ರ ಯಾದವ್, ಕಿರಣ್ ರಿಜಿಜು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್‌ಕುಮಾರ್ ಸಿಂಗ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಹರ್ದೀಪ್ ಸಿಂಗ್ ಪುರಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.