ಆಕಾಶ್‌ ಕ್ಷಿಪಣಿ ವ್ಯವಸ್ಥೆ ರಫ್ತಿಗೆ ಕೇಂದ್ರ ಅಸ್ತು!

Published : Dec 31, 2020, 08:47 AM IST
ಆಕಾಶ್‌ ಕ್ಷಿಪಣಿ ವ್ಯವಸ್ಥೆ ರಫ್ತಿಗೆ ಕೇಂದ್ರ ಅಸ್ತು!

ಸಾರಾಂಶ

 ಸ್ವದೇಶಿ ನಿರ್ಮಿತ ಆಕಾಶ್‌ ಕ್ಷಿಪಣಿ ವ್ಯವಸ್ಥೆಯನ್ನು ವಿದೇಶಕ್ಕೆ ರಫ್ತು ಮಾಡುವ ಮಹತ್ವದ ಪ್ರಸ್ತಾವ| ಮಹತ್ವದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ| 9 ದೇಶಗಳು ಈ ಕ್ಷಿಪಣಿ ಖರೀದಿಗೆ ಒಲವು ತೋರಿಸಿವೆ

ನವದೆಹಲಿ(ಡಿ.31): ಸ್ವದೇಶಿ ನಿರ್ಮಿತ ಆಕಾಶ್‌ ಕ್ಷಿಪಣಿ ವ್ಯವಸ್ಥೆಯನ್ನು ವಿದೇಶಕ್ಕೆ ರಫ್ತು ಮಾಡುವ ಮಹತ್ವದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಅಲ್ಲದೆ, ಈ ಸಂಬಂಧದ ಪ್ರಸ್ತಾವಗಳ ಶೀಘ್ರ ಮಂಜೂರಾತಿಗೆ ಸಮಿತಿ ರಚಿಸಲು ಕೂಡ ತೀರ್ಮಾನಿಸಲಾಗಿದೆ. 9 ದೇಶಗಳು ಈ ಕ್ಷಿಪಣಿ ಖರೀದಿಗೆ ಒಲವು ತೋರಿಸಿವೆ ಎನ್ನಲಾಗಿದೆ.

ಈ ವಿಷಯವನ್ನು ಟ್ವೀಟರ್‌ನಲ್ಲಿ ಪ್ರಕಟಿಸಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್‌, ‘ರಫ್ತಾಗಲಿರುವ ಆಕಾಶ್‌ ಕ್ಷಿಪಣಿ ವ್ಯವಸ್ಥೆಯು ಈಗ ಭಾರತೀಯ ಸೇನೆಯಲ್ಲಿ ಅಳವಡಿಕೆ ಆಗಿರುವ ವ್ಯವಸ್ಥೆಗಿಂತ ಭಿನ್ನವಾಗಿರಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಆಕಾಶ್‌ ವ್ಯವಸ್ಥೆ ಶೇ.96ರಷ್ಟುಸ್ವದೇಶೀ ನಿರ್ಮಿತ. ಇದು ಭೂಮಿಯಿಂದ ಆಗಸಕ್ಕೆ ನೆಗೆಯಬಲ್ಲ 25 ಕಿ.ಮೀ. ವ್ಯಾಪ್ತಿಯ ಕ್ಷಿಪಣಿ. ಆಕಾಶ್‌ ಕ್ಷಿಪಣಿ ವ್ಯವಸ್ಥೆಯನ್ನು ಭಾರತೀಯ ರಕ್ಷಣಾ ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.

‘ಆತ್ಮನಿರ್ಭರ ಭಾರತ ಆಂದೋಲನದ ಅಡಿಯಲ್ಲಿ ಭಾರತದ ರಕ್ಷಣಾ ಶಕ್ತಿ ಹೆಚ್ಚುತ್ತಿದೆ. ಇದಕ್ಕೆ ಅನುಗುಣವಾಗಿ ಆಕಾಶ್‌ ಕ್ಷಿಪಣಿ ರಫ್ತಿಗೆ ಹಾಗೂ ಪ್ರಸ್ತಾವಗಳ ತ್ವರಿತ ಅನುಮೋದನೆಗೆ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಆಕಾಶ್‌ ವ್ಯವಸ್ಥೆ ಶೇ.96ರಷ್ಟುಸ್ವದೇಶೀ ನಿರ್ಮಿತ. ಇದು ಭೂಮಿಯಿಂದ ಆಗಸಕ್ಕೆ ನೆಗೆಯಬಲ್ಲ 25 ಕಿ.ಮೀ. ವ್ಯಾಪ್ತಿಯ ಕ್ಷಿಪಣಿ’ ಎಂದು ರಾಜನಾಥ್‌ ಹೇಳಿದ್ದಾರೆ.

‘ಈವರೆಗೂ ಭಾರತವು ರಕ್ಷಣಾ ಬಿಡಿಭಾಗಗಳನ್ನು ರಫ್ತು ಮಾಡುತ್ತಿತ್ತು. ಆದರೆ ಕ್ಷಿಪಣಿ ವ್ಯವಸ್ಥೆಯಂಥ ದೊಡ್ಡ ರಫ್ತಿನ ಹಿರಿಮೆಗೆ ಇನ್ನು ಭಾರತವು ಪಾತ್ರವಾಗಲಿದೆ. ದೇಶವು 5 ಶತಕೋಟಿ ಡಾಲರ್‌ ರಕ್ಷಣಾ ರಫ್ತು ಗುರಿ ಹೊಂದಿದೆ’ ಎಂದಿದ್ದಾರೆ.

ಆಕಾಶ್‌ ಕ್ಷಿಪಣಿ ವ್ಯವಸ್ಥೆಯನ್ನು ಭಾರತೀಯ ರಕ್ಷಣಾ ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!