
ರಾಂಚಿ: ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದವರ ಬೇಟೆಗೆ ಹೊರಟಿದ್ದ ಜಾರಿ ನಿರ್ದೇಶನಾಲದ ಅಧಿಕಾರಿಗಳ ಕಣ್ಣೆದುರೇ ಬಂದ ಆರೋಪಿಯೊಬ್ಬ, ಸಲೀಸಾಗಿ ತಪ್ಪಿಸಿಕೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಕಾರ್ಯಾಚರಣೆಯ ಭಾಗವಾಗಿ ಅಧಿಕಾರಿಗಳು ಇದ್ದಿಲು ವ್ಯಾಪಾರಿಯಾಗಿದ್ದ ಅಮರ್ ಮೊಂಡಾಲ್ ಮನೆ ಮೇಲೆ ದಾಳಿ ನಡೆಸಲು ಹೊರಟಿದ್ದರು. ಈ ವೇಳೆ ವಾಯುವಿಹಾರಕ್ಕೆ ಹೊರಟಿದ್ದವನೊಬ್ಬನ ಬಳಿ ಮೊಂಡಾಲ್ ಬಗ್ಗೆ ವಿಚಾರಿಸಿದ್ದು, ಆತ ಮನೆ ತೋರಿಸಿದ್ದಾನೆ. ಬಳಿಕ ತನ್ನ ಬೈಕ್ ಹತ್ತಿಕೊಂಡು ಹೋಗಿದ್ದಾನೆ.
ಇದಾದ ಸ್ವಲ್ಪ ಹೊತ್ತಿನ ಬಳಿಕ ಇ.ಡಿ. ಅಧಿಕಾರಿಗಳಿಗೆ, ತಮಗೆ ಮನೆ ತೋರಿಸಿದ್ದಾತನೇ ಮೊಂಡಾಲ್ ಎಂದು ಅರಿವಾಗಿದೆ. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿತ್ತು. ಬಳಿಕ ಮೊಂಡಾಲ್ ಪತ್ತೆಯಾದ ಬಗ್ಗೆ ಮಾಹಿತಿಯಿಲ್ಲ.
ಅಕ್ರಮ ಇದ್ದಿಲು ಗಣಿಗಾರಿಕೆ, ಕಳುವು, ಸಂಗ್ರಹ, ಸಾಗಾಟ, ಮಾರಟದಲ್ಲಿ ತೊಡಗಿರುವವರನ್ನು ಗುರಿಯಾಗಿಸಿಕೊಂಡು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇ.ಡಿ. ಅಧಿಕಾರಿಗಳು 44 ಸ್ಥಳಗಳ ಮೇಲೆ ದಾಳಿ ನಡೆಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ