
ನವದೆಹಲಿ (ನ.23) ಭಾರತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿದ ಎಚ್ಚರಿಕೆಗೆ ಪಾಕಿಸ್ತಾನ ಕಂಗಾಲಾಗಿದೆ. ಭಾರತದ ನಾಗರೀಕತೆ, ಇತಿಹಾಸ, ಪರಂಪರೆಯಲ್ಲಿ ಸಿಂಧ್ ಪ್ರಾಂತ್ಯಕ್ಕೆ ಪ್ರಮುಖ ಸ್ಥಾನವಿದೆ. ಆದರೆ 1947ರ ದೇಶ ವಿಭಜನಯೆಲ್ಲಿ ಸಿಂದ್ ಪ್ರಾಂತ್ಯ ಪಾಕಿಸ್ತಾನದ ಕೈವಶವಾಯಿತು. ಸಿಂದ್ ಪ್ರಾಂತ್ಯ ಭಾರತದ ಕೈವಶವಾಗಬಹುದು, ಗಡಿ ಬದಲಾಗಬಹುದು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ದೇಶ ವಿಭಜನೆಯಾದಾಗ ಸಿಂದ್ ಪ್ರಾಂತ್ಯ ಭಾರತದಿಂದ ಬೇರ್ಪಡುವುದನ್ನು ಹಲವು ನಾಯಕರು ವಿರೋಧಿಸಿದ್ದರು. ಆದರೆ ಸಿಂಧ್ ಮತ್ತೆ ಭಾರತ ಸೇರುವ ದಿನಗಳು ದೂರವಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ನಮ್ಮ ನಾಗರೀಕತೆ, ಹಿಂದೂ ಸಮುದಾಯದ ಪ್ರಮುಖ ಸ್ಥಾನ ಸಿಂದೂ ನದಿ. ಸಿಂದೂ ನದಿ ತಟದಿಂದಲೇ ಹಿಂದೂ ನಾಗರೀಕತೆ ಹುಟ್ಟಕೊಂಡಿದೆ. 1947ರಲ್ಲಿ ಸಿಂದ್ ಪ್ರಾಂತ್ಯದಲ್ಲಿದ್ದ ಜನ, ಭಾರತದಿಂದ ಬೇರ್ಪಡಲು ಬಯಸಿರಲಿಲ್ಲ. ದೇಶ ವಿಭಜನಯಾದಾಗ ಸಿಂದ್ ಪ್ರಾಂತ್ಯದ ಅತೀ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿದ್ದರು. ಈಗಲೂ ಸಿಂದ್ ಪ್ರಾಂತ್ಯದ ಹಿಂದೂಗಳು ಸಂಕಷ್ಟದಲ್ಲಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಇಂದು ಸಿಂಧ್ ಭಾರತದ ಭಾಗವಾಗಿಲ್ಲ. ಆದರೆ ನಾಗರೀಕತೆ, ಪರಂಪರೆ ದೃಷ್ಟಿಯಿಂದ ಸಿಂಧ್ ಯಾವತ್ತೂ ಭಾರತದ ಭಾಗ. ನಾಳೆ ಏನಾಗುತ್ತೆ ಯಾರಿಗೆ ಗೊತ್ತು? ಗಡಿ ಬದಲಾಗಬಹುದು, ಭೂಪಟ ಹೊಸದಾಗಬಹುದು. ನಾಳೆ ಸಿಂದ್ ಕೂಡ ಭಾರತದ ಭಾಗವಾಗಬಹುದು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ನಮ್ಮ ಸಿಂಧ್ ಜನರು ಸಿಂಧೂ ನದಿಯನ್ನು ಪವಿತ್ರ ಎಂದು ಪರಿಗಣಿಸುತ್ತಾರೆ. ಇದು ನಮ್ಮ ಪವಿತ್ರ ನದಿ. ಸಿಂಧಿಗಳು ಎಲ್ಲೇ ಇದ್ದರು ಅವರು ನಮ್ಮವರು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಆಪರೇಶನ್ ಸಿಂದೂರ್ ವೇಳೆ ಭಾರತ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹಲವು ಭಾಗ ಕೈವಶ ಮಾಡಲಿದೆ ಎಂದು ಭಾವಿಸಲಾಗಿತ್ತು. ಆದರೆ ದಿಢೀರ್ ಆಪರೇಶನ್ ಸಿಂದೂರ್‌ಗೆ ಕದನ ವಿರಾಮ ಹಾಕಲಾಗಿತ್ತು. ಆಪರೇಶನ್ ಸಿಂದೂರ್ ಮೂಲಕ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಇದೀಗ ಮತ್ತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಾಗೂ ಸಿಂಧ್ ಪ್ರಾಂತ್ಯದ ಕುರಿತು ಹೇಳಿಕೆ ಭಾರಿ ಸಂಚಲನ ಪಡೆದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ