* ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಹವಾ
* ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲೂ ಬುಲ್ಡೋಜರ್ ಗಿಫ್ಟ್
* ಯೋಗಿ ಸರ್ಕಾರಕ್ಕೆ ಥ್ಯಾಂಕ್ಸ್ ಎಂದ ನವಜೋಡಿ
ಲಕ್ನೋ(ಮಾ.28): ಬುಲ್ಡೋಜರ್‌ನ ಮ್ಯಾಜಿಕ್ ಜನರ ತಲೆಯಲ್ಲಿ ತುಂಬಿದೆ. ಈಗ ಇದು ಯೋಗಿ ಸರ್ಕಾರದ 2.0 ಭಾಗ ಎರಡರ ಸಂಕೇತವಾಗಿದೆ. ಈ ಸಂಚಿಕೆಯಲ್ಲಿ, ಪ್ರಯಾಗ್‌ರಾಜ್‌ನಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ, ದಂಪತಿಗೆ 'ಬುಲ್ಡೋಜರ್' ಉಡುಗೊರೆಯಾಗಿ ನೀಡಲಾಯಿತು. ಯುವ ಚೌರಾಸಿಯಾ ಸಮಾಜ ಕತ್ರಾದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಜೋಡಿಗಳಿಗೆ ಈ ಆಚ್ಚರಿಯ ಉಡುಗೊರೆಯನ್ನು ನೀಡಿದೆ. ಈ ಸಮಯದಲ್ಲಿ ಒಂಭತ್ತು ಜೋಡಿಗಳು ಸಪ್ತಪದಿ ತುಳಿದಿದ್ದಾರೆ. ಮದುವೆಯಾದ ಬಳಿಕ ವಧು-ವರರಿಗೆ ಮನೆಯ ಇತರೆ ಸಾಮಾಗ್ರಿಗಳೊಂದಿಗೆ ಬುಲ್ಡೋಜರ್‌ಗಳನ್ನು ನೀಡಿದಾಗ ಜನ ಅಚ್ಚರಿಗೀಡಾಗಿದ್ದಾರೆ. ಈ ಬುಲ್ಡೋಜರ್ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ರಕ್ಷಣೆಯ ಸಂಕೇತವಾಗಿದೆ, ಇದು ಉತ್ತರ ಪ್ರದೇಶದ ಅಭಿವೃದ್ಧಿಯ ಸಂಕೇತವಾಗಿದೆ ಎಂದು ವರರು ಹೇಳಿದರೆ, ಅತ್ತ ವಧುಗಳು ಸಿಎಂ ಯೋಗಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಯಾಗರಾಜ್ ಮೇಯರ್ ಅಭಿಲಾಷಾ ಗುಪ್ತಾ ನಂದಿ ಮಾತನಾಡಿ, ಬುಲ್ಡೋಜರ್ ಯುಪಿಯಲ್ಲಿ ಸಂತೋಷ ಮತ್ತು ಶಾಂತಿಯ ಸಂಕೇತವಾಗಿದೆ. ಈ ಮೂಲಕ ಯುಪಿಯಲ್ಲಿ ಎಲ್ಲಿ ತಪ್ಪು ನಡೆದರೂ ಬುಲ್ಡೋಜರ್ ಬಾಬಾ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂಬ ಸಂದೇಶವನ್ನು ನೀಡಲಾಗುತ್ತಿದೆ. ಯೋಗಿ ಸರ್ಕಾರ ಬುಲ್ಡೋಜರ್ ನಡೆಸುವ ಮೂಲಕ ರಾಜ್ಯದ ಮಾಫಿಯಾವನ್ನು ನಿರ್ನಾಮ ಮಾಡಿದೆ. ವಾಸ್ತವವಾಗಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಭಾರತೀಯ ಜನತಾ ಪಕ್ಷವು ಗೋರಖ್‌ಪುರ ವಿಭಾಗದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಮತ್ತೊಂದೆಡೆ, ಯುಪಿಯಲ್ಲಿ ಯೋಗಿ ಸರ್ಕಾರ್ 2.0 ಪ್ರಮಾಣ ವಚನ ಸ್ವೀಕಾರದ ನಂತರ ಬಿಜೆಪಿ ಕಾರ್ಯಕರ್ತರು ಉತ್ಸುಕರಾಗಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಬುಲ್ಡೋಜರ್ ಮೆರವಣಿಗೆ ನಡೆಸಿದರು.
ಮಾಫಿಯಾದ ಅಕ್ರಮ ಆಸ್ತಿ ನಿರ್ನಾಮ ಮಾಡಿದ ಬುಲ್ಡೋಜರ್
ಯುಪಿ ವಿಧಾನಸಭಾ ಚುನಾವಣೆಯಲ್ಲಿ ಬಾಬಾನ ಬುಲ್ಡೋಜರ್ ಸಾಕಷ್ಟು ಚರ್ಚೆಯಲ್ಲಿತ್ತು. ಕಳೆದ ಐದು ವರ್ಷಗಳಲ್ಲಿ, ಯೋಗಿ ಸರ್ಕಾರವು ಸರ್ಕಾರಿ ಭೂಮಿಯನ್ನು ಆಕ್ರಮಿಸಿಕೊಂಡಿರುವ ಮಾಫಿಯಾದ ಆಸ್ತಿಯಲ್ಲಿ ಬುಲ್ಡೋಜರ್‌ಗಳನ್ನು ಪ್ರಾರಂಭಿಸಿದೆ. ಇದರಿಂದಾಗಿ ಬುಲ್ಡೋಜರ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈಗ ಯುವಕರಲ್ಲಿ ಬುಲ್ಡೋಜರ್‌ಗಳ ಕ್ರೇಜ್ ಜಾಸ್ತಿ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಡಳಿತಾತ್ಮಕ ಮೂಲಗಳ ಪ್ರಕಾರ, ಚುನಾವಣಾ ಫಲಿತಾಂಶಗಳು ಹೊರಬಂದಾಗಿನಿಂದ ಯೋಗಿ ಬಾಬಾ ಅವರ ಬುಲ್ಡೋಜರ್ ಗಾಜಿಯಾಬಾದ್, ಶಾಮ್ಲಿ, ಜೌನ್‌ಪುರ್, ದಿಯೋಬಂದ್, ಬಹ್ರೈಚ್, ಪ್ರಯಾಗ್‌ರಾಜ್, ಡಿಯೋರಿಯಾ, ನೋಯ್ಡಾ ಮತ್ತು ಅಮ್ರೋಹಾದಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಮಾಡಿದೆ.