
ಮುಂಬೈ(ಜ.23) ಭವ್ಯ ಶ್ರೀರಾಮ ಮಂದಿರ ಲೋಕಾರ್ಪಣೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಾಣಪ್ರತಿಷ್ಠೆ ನೆರವೇರಿಸುವ ಮೂಲಕ 500 ವರ್ಷಗಳ ಬಳಿಕ ಶ್ರೀರಾಮ ತನ್ನ ಭವ್ಯ ಮಂದಿರದಲ್ಲಿ ವಿರಾಜಮಾನನಾಗಿದ್ದಾನೆ. ರಾಮ ಮಂದಿರ ಪ್ರಾಣಪ್ರತಿಷ್ಠೆಯನ್ನು ದೇಶದೆಲ್ಲೆಡೆ ದೀಪಾವಳಿ ರೀತಿ ಆಚರಿಸಲಾಗಿದೆ. ದೇವಸ್ಥಾನದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ, ರಾಮಕಥಾ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದಿದೆ. ಇದೇ ವೇಳೆ ಶ್ರೀರಾಮ ಶೋಭಯಾತ್ರೆ ಕೂಡ ಹಲವೆಡೆ ನಡೆದಿದೆ. ಆದರೆ ಮುಂಬೈನಲ್ಲಿ ನಡೆದ ಶೋಭಯಾತ್ರೆ ಮೇಲೆ ಅನ್ಯಕೋಮಿನ ಗುಂಪು ಭೀಕರ ದಾಳಿ ನಡೆಸಿತ್ತು. ಈ ವಿಡಿಯೋಗಳು ವೈರಲ್ ಆಗಿತ್ತು. ಈ ಘಟನೆ ನಡೆದ ಒಂದೇ ದಿನಕ್ಕೆ, ಮಹಾರಾಷ್ಟ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಪ್ರಕರಣ ಸಂಬಂಧ ಹಲವರನ್ನು ಬಂಧಿಸಲಾಗಿದ್ದು, ಘಟನೆ ನಡೆದ ಮೀರಾ ರಸ್ತೆಯಲ್ಲಿನ ಅಕ್ರಮ ಕಟ್ಟಡ, ಅಂಗಡಿ ಮುಂಗಟ್ಟು ಹಾಗೂ ಮನೆಗಳನ್ನು ಬುಲ್ಡೋಜರ್ ಮೂಲಕ ನೆಲೆಸಮಗೊಳಿಸಲಾಗಿದೆ.
ಘಟನೆ ಬೆನ್ನಲ್ಲೇ ಮೀರಾ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಇಂದು ಮತ್ತಷ್ಟು ಪೊಲೀಸ್ ಪಡೆ ನಿಯೋಜಿಸಿದ ಸರ್ಕಾರ ನೇರವಾಗಿ ಮೀರಾ ರಸ್ತೆಗೆ ಬುಲ್ಡೋಜರ್ ಹತ್ತಿಸಿದೆ. ಮೀರಾ ರಸ್ತೆಯ ಇಕ್ಕೆಲಗಳಲ್ಲಿನ ಅಕ್ರಮ ಕಟ್ಟಡ, ಅಂಗಡಿ ಮುಂಗಡ್ಡುಗಳನ್ನು ನೆಲಸಮ ಮಾಡಲಾಗಿದೆ.
ಶ್ರೀರಾಮ ಶೋಭಯಾತ್ರೆ ಮೇಲೆ ಅನ್ಯಕೋಮಿನಿಂದ ಭೀಕರ ದಾಳಿ;ಕಾರು ಜಖಂ, ಹಲವರಿಗೆ ಗಾಯ!
ಪ್ರಾಣಪ್ರತಿಷ್ಠೆ ದಿನ ಹಿಂದೂಗಳ ಶ್ರೀರಾಮನ ಶೋಭಯಾತ್ರೆ ಮೇಲೆ ಭೀಕರ ದಾಳಿಯಾಗಿತ್ತು. ಹಲವರು ಗಾಯಗೊಂಡಿದ್ದರು. ಕಾರುಗಳು ಜಖಂಗೊಳಿಸಲಾಗಿತ್ತು. 200ಕ್ಕೂ ಹೆಚ್ಚು ಉದ್ರಿಕ್ತರ ಗುಂಪು ಈ ದಾಳಿ ನಡೆಸಿತ್ತು. ಘಟನೆ ಬೆನ್ನಲ್ಲೇ ಪೊಲೀಸರು 13ಕ್ಕೆ ಹೆಚ್ಚು ಮಂದಿಯನ್ನು ಬಂಧಿಸಿದ್ದರು. ಬಂಧಿತರು ಮೀರಾ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಕೆಲಸ ಮಾಡುತ್ತಿದ್ದವರು ಹಾಗೂ ಮಾಲೀಕರೂ ಆಗಿದ್ದಾರೆ. ಪೂರ್ವನಿಯೋಜಿತ ದಾಳಿ ಕುರಿತ ಹಲವು ಮಾಹಿತಿ ಕಲೆ ಹಾಕಿದ ಪೊಲೀಸರು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಘಟನೆ ನಡೆದ ರಾತ್ರಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಕುರಿತು ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದರು. ಕಾನೂನು ಕೈಗೆತ್ತಿಕೊಂಡು ಹಿಂಸೆ ನಡೆಸಿದರೆ ತಕ್ಕ ಪಾಠ ಕಲಿಸಲಾಗುತ್ತದೆ. ಕಾನೂನು ಸುವ್ಯವಸ್ಥೆ ಹಾಳುಗೆಡವು ಯಾರನ್ನೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ದಾಳಿ ಕುರಿತ ವಿಡಿಯೋಗಳು ವೈರಲ್ ಆಗಿತ್ತು. ದೇಶಾದ್ಯಂತ ಈ ದಾಳಿಗೆ ಆಕ್ರೋಶ ವ್ಯಕ್ತವಾಗಿತ್ತು.
ಭಗವಾನ್ ಶ್ರೀರಾಮನ ಶೋಭಯಾತ್ರೆ ಮೇಲೆ ಕಲ್ಲು ತೂರಾಟ, ಹಲವರಿಗೆ ಗಾಯ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ