ಲೋಕಸಭಾ ಚುನಾವಣಾ ಮತದಾನದ ಸಂಭಾವ್ಯ ದಿನಾಂಕ ಪ್ರಕಟ, ಸ್ಪಷ್ಟನೆ ನೀಡಿದ ಆಯೋಗ!

Published : Jan 23, 2024, 06:35 PM IST
ಲೋಕಸಭಾ ಚುನಾವಣಾ ಮತದಾನದ ಸಂಭಾವ್ಯ ದಿನಾಂಕ ಪ್ರಕಟ, ಸ್ಪಷ್ಟನೆ ನೀಡಿದ ಆಯೋಗ!

ಸಾರಾಂಶ

ಲೋಕಸಭಾ ಚುನಾವಣಾ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿದೆ. ಇದರ ನಡುವೆ ಚುನಾವಣಾ ಆಯೋಗ ಸಂಭಾವ್ಯ ಮತದಾನದ ದಿನಾಂಕ ಪ್ರಕಟಿಸಿದೆ. ಇದರ ಜೊತೆಗೆ ಕೆಲ ಸ್ಪಷ್ಟನೆಯನ್ನೂ ನೀಡಿದೆ.  

ನವದೆಹಲಿ(ಜ.23) ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದೆ. ಬಿಜೆಪಿ ಈಗಾಗಲೇ ಸಭೆಗಳನ್ನು ನಡೆಸಿ ಚರ್ಚೆ ನಡೆಸುತ್ತಿದೆ. ಇತ್ತ ಇಂಡಿಯಾ ಮೈತ್ರಿ ಪಕ್ಷಗಳ ಒಕ್ಕೂಟ ಸರಣಿ ಸಭೆ ಮೂಲಕ ಸೀಟು ಹಂಚಿಕೆ ಚರ್ಚಿಸುತ್ತಿದೆ. ಬೆಳವಣಿಗೆ ನಡುವೆ ಚುನಾವಣಾ ಆಯೋಗ ಲೋಕಸಭಾ ಚುನಾವಣೆಯ ಸಂಭಾವ್ಯ ಮತದಾನ ದಿನಾಂಕ ಪ್ರಕಟಿಸಿದೆ. ಚುನಾವಣಾ ಆಯೋಗದ ಪ್ರಕಾರ ಎಪ್ರಿಲ್ 16ರಿಂದ ಲೋಕಸಭಾ ಚುನಾವಣಾ ಮತದಾನಗಳು ಆರಂಭಗೊಳ್ಳಲಿದೆ ಎಂದು ಸಂಭಾವ್ಯ ದಿನಾಂಕವನ್ನು ನೀಡಿದೆ. ಇದೇ ವೇಳೆ ಇದು ಸಂಭಾವ್ಯ ದಿನಾಂಕವಾಗಿದೆ. ಇದೇ ದಿನ ಚುನಾವಣೆ ನಡೆಯಲಿದೆ ಅನ್ನೋ ಸುದ್ದಿಗಳನ್ನು ತಳ್ಳಿ ಹಾಕಿದೆ.

ಲೋಕಸಭಾ ಚುನಾವಣೆಗೆ ತಯಾರಿಗಳು ನಡೆಯುತ್ತಿದೆ. ಚುನಾವಣಾ ಆಯೋಗದ ಅಧಿಕಾರಿಗಳ ಪೂರ್ವ ತಯಾರಿಗಾಗಿ ಈ ದಿನಾಂಕ ನೀಡಲಾಗಿದೆ. ಇದೇ ದಿನ ಮತದಾನ, ಚುನಾವಣೆ ನಡೆಯಲಿದೆ ಅನ್ನೋದು ಸ್ಪಷ್ಟವಾಗಿಲ್ಲ. ಪೂರ್ವ ತಯಾರಿ ನಡೆಸಲು ಅನುಕೂಲವಾಗವಂತೆ ಸಂಭಾವ್ಯ ದಿನಾಂಕ ನೀಡಲಾಗಿದೆ. ಹೀಗಾಗಿ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಲೋಕಸಭಾ ಚುನಾವಣೆ- ಮೈಸೂರು ಜಿಲ್ಲೆಯಲ್ಲಿ 26,99,835 ಮತದಾರರು

ಲೋಕಸಭಾ ಚುನಾವಣೆಯ ಸಂಭಾವ್ಯ ದಿನಾಂಕದಿಂದ ಹಲವರಿಗೆ ಅನುಕೂಲವಾಗಲಿದೆ. ಈಗಿನಿಂದಲೇ ತಯಾರಿಗಳು ಆರಂಭಗೊಳ್ಳಲಿದೆ. ಇದರಿಂದ ಅಂತಿಮ ಹಂತದಲ್ಲಿನ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ದೆಹಲಿಯ 11 ಜಿಲ್ಲಾ ಚುನಾವಣಾ ಆಯೋಗಕ್ಕೆ ಕೇಂದ್ರ ಚುನಾವಣಾ ಆಯೋಗ ಈ ಸಂಭಾವ್ಯ ದಿನಾಂಕದ ಕುರಿತು ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಹರಿದಾಡಿತ್ತು.

ಸುತ್ತೋಲೆ ವೈರಲ್ ಆಗುತ್ತಿದ್ದಂತೆ 2024ರ ಲೋಕಸಭಾ ಚುನಾವಣೆ ಎಪ್ರಿಲ್ 16ರಂದು ನಡೆಯಲಿದೆ ಅನ್ನೋ ಸುದ್ದಿ ಹರಿದಾಡಿತ್ತು. ಇತ್ತ ರಾಜಕೀಯ ಪಕ್ಷಗಳು ಅಲರ್ಟ್ ಆಗಿತ್ತು. ಈ ಕುರಿತು ಕೇಂದ್ರ ಚುನಾವಣಾ ಆಯೋಗ ಹಲವು ಪ್ರಶ್ನಗಳನ್ನು ಎದುರಿಸಿತ್ತು. ಇದರ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಆದರೆ ಈಗ ಉಲ್ಲೇಖಿಸಿರುವ ಎಪ್ರಿಲ್ 16ರ ದಿನಾಂಕ ಕೇವಲ ಸಂಭಾವ್ಯವಾಗಿದೆ. ಇದಕ್ಕೂ ಮುಂಚಿತವಾಗಿಯೂ ನಡೆಯಬಹುದು, ಅಥವಾ ವಿಳಂಬವಾಗಿಯೂ ನಡೆಯಬಹುದು ಎಂದು ಆಯೋಗ ಸ್ಪಷ್ಟನೆ ನೀಡಿದೆ.

ಲೋಕಸಭೆ ಚುನಾವಣೆ 2024: ಹಾಸನದಲ್ಲಿ ಪ್ರಜ್ವಲ್‌ಗೆ ಕಾಂಗ್ರೆಸ್‌ನಿಂದ ಪ್ರಬಲ ಎದುರಾಳಿ ಯಾರು?

ಎಪ್ರಿಲ್‌ನಿಂದ ಮೇ ವರೆಗೆ ಲೋಕಸಭಾ ಚುನಾವಣೆ ಮತದಾನ ನಡೆಯಲಿದೆ. ವಿವಿಧ ಹಂತದಲ್ಲಿ ಮತದಾನ ನಡೆಯಲಿದೆ. ಆದರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. 2019ರ ಲೋಕಸಭಾ ಚುನಾವಣೆ ಎಪ್ರಿಲ್ 11ರಿಂದ ಆರಂಭಗೊಂಡಿತ್ತು. 7 ಹಂತದಲ್ಲಿ ನಡೆದ ಮತದಾನ ಪ್ರಕ್ರಿಯೆ ಮೇ.19ರಂದು ಅಂತ್ಯಗೊಂಡಿತ್ತು. ಮೇ.23ಕ್ಕೆ ಫಲಿತಾಂಶ ಪ್ರಕಟಗೊಂಡಿತ್ತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?