ದಿನಕ್ಕೆ 32.066 ಲೀಟರ್ ಹಾಲು ಕೊಡುವ ಮೂಲಕ ವಿಶ್ವ ದಾಖಲೆ ಬರೆದ ಎಮ್ಮೆ!

By Suvarna NewsFirst Published Dec 11, 2019, 6:55 PM IST
Highlights

ದಿನಕ್ಕೆ 32.066 ಲೀಟರ್ ಹಾಲು ಕೊಡುವ ಸರಸ್ವತಿ| ವಿಶ್ವ ದಾಖಲೆ ಬರೆದ ಹಿಸ್ಸಾರ್‌ನ ಏಳು ವರ್ಷದ ಎಮ್ಮೆ| ಪ್ರೋಗ್ರೆಸ್ಸಿವ್ ಡೈರಿ ಫಾರ್ಮರ್ಸ್ ಅಸೋಸಿಯೇಶನ್‌ ಮೇಳ| ಪಾಕಿಸ್ತಾನದ ಫೈಸಲಾಬಾದ್‌ನ ಮುರ್ರಾ ಎಮ್ಮೆ ದಾಖಲೆ ಪುಡಿ ಪುಡಿ| 

ಲುಧಿಯಾನಾ(ಡಿ.11): ದಿನಕ್ಕೆ 32.066 ಲೀಟರ್ ಹಾಲು ಕೊಡುವ ಮೂಲಕ ಹರಿಯಾಣದ ಹಿಸ್ಸಾರ್‌ನ ಎಮ್ಮೆಯೊಂದು ವಿಶ್ವ ದಾಖಲೆ ಬರೆದಿದೆ.

ಲುಧಿಯಾನಾದಲ್ಲಿ ನಡೆದ ಪ್ರೋಗ್ರೆಸ್ಸಿವ್ ಡೈರಿ ಫಾರ್ಮರ್ಸ್ ಅಸೋಸಿಯೇಶನ್‌ನ ಇಂಟರ್ನ್ಯಾಷನಲ್ ಡೈರಿ ಮತ್ತು ಅಗ್ರಿ ಎಕ್ಸ್‌ಪೋನಲ್ಲಿ, ಹಿಸ್ಸಾರ್‌ನ ಏಳು ವರ್ಷದ ಸರಸ್ವತಿ ದಿನಕ್ಕೆ 32.066 ಲೀಟರ್ ಹಾಲು ಕೊಡುವ ಮೂಲಕ ವಿಶ್ವ ದಾಖಲೆ ಬರೆದಿದೆ. 

ಈ ಕೋಣದ ಬೆಲೆ ಬರೋಬ್ಬರಿ 14 ಕೋಟಿ, ಅಂಥಾದ್ದೇನಿದೆ ವಿಶೇಷ?

ಈ ಕುರಿತು ಮಾತನಾಡಿರುವ ಅಸೋಸಿಯೇಷನ್ ಅಧ್ಯಕ್ಷ ದಲ್ಜಿತ್ ಸಿಂಗ್, ಸರಸ್ವತಿ ನವೆಂಬರ್ 2018ರಲ್ಲಿ ಪಾಕಿಸ್ತಾನದ ಫೈಸಲಾಬಾದ್‌ನ ಮುರ್ರಾ ಎಮ್ಮೆ ಸ್ಥಾಪಿಸಿದ ವಿಶ್ವ ದಾಖಲೆಯನ್ನು ಮುರಿದಿದೆ ಎಂದು ಹೇಳಿದರು. 

ಇನ್ನು ಸರಸ್ವತಿ ಎಮ್ಮೆಯ ಮಾಲೀಕ ಹಿಸಾರ್‌ನ ಲಿಟಾನಿಯ ಸುಖ್‌ಬೀರ್ ಧಂಡಾ ತನ್ನ ಎಮ್ಮೆ ವಿಶ್ವ ದಾಖಲೆ ಬರೆದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಮಾಲಿಕತ್ವಕ್ಕೆ ಎರಡು ಗ್ರಾಮಗಳ ಜಿದ್ದಾಜಿದ್ದಿ, ದೇವರಿಗೆ ಬಿಟ್ಟ ಕೋಣಕ್ಕೂ ಡಿಎನ್‌ಎ ಪರೀಕ್ಷೆ

click me!