ಚೆನ್ನೈನ ಮರೀನಾ ಬೀಚ್‌ ಬಳಿ ಜಯಲಲಿತಾ ಸ್ಮಾರಕ ಅನಾವರಣ!

By Suvarna NewsFirst Published Jan 28, 2021, 8:29 AM IST
Highlights

ಜಯಲಲಿತಾ ಸ್ಮಾರಕ ಅನಾವರಣ| ಚೆನ್ನೈನ ಮರೀನಾ ಬೀಚ್‌ ಬಳಿ ಸ್ಮಾರಕ ನಿರ್ಮಾಣ| ಸ್ಮಾರಕದಲ್ಲಿ ಜಯಲಲಿತಾ ಬದುಕಿನ ಅನಾವರಣ

ಚೆನ್ನೈ(ಜ.28): ‘ಅಮ್ಮ’ ಖ್ಯಾತಿಯ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸ್ಮರಣಾರ್ಥ ಇಲ್ಲಿನ ಮರೀನಾ ಬೀಚ್‌ನಲ್ಲಿ ನಿರ್ಮಿಸಲಾಗಿರುವ ಸ್ಮಾರಕವನ್ನು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಬುಧವಾರ ಅನಾವರಣಗೊಳಿಸಿದರು.

ಈ ವೇಳೆ ಉಪ ಮುಖ್ಯಮಂತ್ರಿ ಓ.ಪನ್ನೀರ್‌ ಸೇಲ್ವಂ ಮತ್ತು ವಿಧಾನಸಭಾ ಸಭಾಪತಿ ಪಿ.ಧನಪಾಲ್‌ ಸೇರಿದಂತೆ ನೂರಾರು ಜನರು ಭಾಗಿಯಾಗಿ, ಜಯಲಲಿತಾ ಅವರ ಫೋಟೋಗೆ ಗೌರವ ನಮನ ಅರ್ಪಿಸಿದರು.

ಸ್ಮಾರಕವು ಹಕ್ಕಿ ಆಕಾಶದೆಡೆಗೆ ಹಾರುತ್ತಿರುವ ಆಕಾರದಲ್ಲಿದ್ದು, 9 ಎಕರೆ ವಿಸ್ತಾರ ಜಾಗದಲ್ಲಿ, 79.75 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸ್ಮಾರಕದ ಬಳಿ ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್‌ (ಎಂಜಿಆರ್‌) ಅವರ ಸ್ಮಾರಕವೂ ಇದೆ. ಜೊತೆಗೆ ಆವರಣದ ಸುತ್ತ ಉದ್ಯಾನವನ ಮತ್ತು ಸಣ್ಣ ಸಣ್ಣ ಝರಿಗಳು, ಕಲಾ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಹ ಇರಲಿದ್ದು, ಜಯಾ ಬದುಕು ಅನಾವರಣಗೊಳ್ಳಲಿದೆ.

ಡಿಸೆಂಬರ್‌ 5, 2016ರಂದು ಇಹಲೋಕ ತ್ಯಜಿಸಿದ ಜಯಲಲಿತಾ ಅವರ ಸ್ಮಾರಕ ನಿರ್ಮಾಣ ಸಂಬಂಧ 3 ವರ್ಷದ ಹಿಂದೆ 2018ರಲ್ಲಿ ಪಳನಿಸ್ವಾಮಿ ಮತ್ತು ಪನ್ನೀರ್‌ ಸೇಲ್ವಂ ಸ್ಮಾರಕದ ಶಂಕುಸ್ಥಾಪನೆ ನೆರವೇರಿಸಿದ್ದರು.

click me!