
ತಿರುವನಂತಪುರ: ಹಾರಾಡಲಾಗದ ಸ್ಥಿತಿಯಲ್ಲಿ ಕಳೆದ 36 ದಿನಗಳಿಂದ ಕೇರಳ ರಾಜಧಾನಿ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಬ್ರಿಟನ್ ಸೇನೆಯ ಅತ್ಯಾಧುನಿಕ ಎಫ್-35ಬಿ ಸ್ಟೆಲ್ತ್ ಯುದ್ಧ ವಿಮಾನವನ್ನು ಕೊನೆಗೂ ದುರಸ್ತಿ ಮಾಡಲಾಗಿದೆ. ಹೀಗಾಗಿ ಭಾರತ ಸರ್ಕಾರ ಅನುಮತಿ ಪಡೆದು ಒಂದೆರಡು ದಿನಗಳಲ್ಲೇ ವಿಮಾನ ಬ್ರಿಟನ್‌ಗೆ ಮರಳಲಿದೆ ಎನ್ನಲಾಗಿದೆ.
ದೋಷ ಕಾಣಿಸಿಕೊಂಡ ಕಾರಣ ಕೇರಳದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ್ದ ವಿಮಾನದಲ್ಲಿ ಬಳಿಕ ಆಕ್ಸಿಲರಿ ಪವರ್ ಯೂನಿಟ್‌ನಲ್ಲಿ ಗಂಭೀರ ದೋಷ ಕಾಣಿಸಿಕೊಂಡಿತ್ತು. ಹೀಗಾಗಿ ಹಾರಾಟ ಮಾಡಲಾಗದೇ ನಿಲ್ದಾಣದಲ್ಲೇ ಉಳಿದುಕೊಂಡಿತ್ತು. ಅದನ್ನು ಬ್ರಿಟನ್‌ನಿಂದ ಬಂದಿದ್ದ ತಜ್ಞರ ತಂಡ ಸರಿ ಮಾಡಿದೆ.
ಒಂದು ವೇಳೆ ದುರಸ್ತಿ ಸಾಧ್ಯವಾಗದೇ ಹೋದಲ್ಲಿ ವಿಮಾನದ ಹಲವು ಭಾಗ ಬೇರ್ಪಡಿಸಿ ಬೇರೊಂದು ವಿಮಾನದಲ್ಲಿ ಹಾಕಿಕೊಂಡು ಯೋಜನೆ ಕೂಡಾ ರೂಪಿಸಲಾಗಿತ್ತು. ಈ ನಡುವೆ ಏರ್‌ಪೋರ್ಟ್‌ನಲ್ಲಿ 36 ದಿನ ತಂಗಿದ್ದಕ್ಕೆ ಬ್ರಿಟನ್ ಸೇನೆ ಅಂದಾಜು 8 ಲಕ್ಷ ರು. ಶುಲ್ಕ ಪಾವತಿಸಬೇಕಿದೆ.
ಜೂ.14ರಂದು ತುರ್ತು ಲ್ಯಾಂಡ್ ಆ
ತಿರುವನಂತಪುರ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೂ.14ರಂದು ತುರ್ತು ಲ್ಯಾಂಡ್ ಆಗಿರುವ ಬ್ರಿಟನ್ ನೌಕಾಪಡೆಗೆ ಸೇರಿದ ಅತ್ಯಾಧುನಿಕ ಎಫ್-35ಬಿ ಯುದ್ಧವಿಮಾನದ ಪರಿಶೀಲನೆಗೆ ಇದೀಗ ಬ್ರಿಟನ್ ಇದೀಗ ವಿಶೇಷ ತಜ್ಞರನ್ನು ಕಳುಹಿಸಿಕೊಟ್ಟಿತ್ತು
14 ತಜ್ಞರು ಹಾಗೂ 10 ಸಿಬ್ಬಂದಿಯನ್ನೊಳಗೊಂಡ ಬ್ರಿಟನ್ ರಾಯಲ್ ಏರ್‌ಫೋರ್ಸ್‌ನ ಏರ್‌ಬಸ್ ಎ400ಎಂ ಅಟ್ಲಾಸ್ ವಿಮಾನ ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬಂದಿಳಿದಿದ್ದರು. ಈ ತಂಡ ಎಫ್-35 ವಿಮಾನದ ಪರಿಶೀಲನೆ ನಡೆಸಿತ್ತು. ಹಾಳಾಗಿರುವ ವಿಮಾನವನ್ನು ಸ್ಥಳೀಯವಾಗಿ ದುರಸ್ತಿಗೊಳಿಸಲು ಸಾಧ್ಯವೇ ಎಂದು ಪರಿಶೀಲಿಸಿ ರಿಪೇರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ