
ಅಮರಾವತಿ: ಆಂಧ್ರಪ್ರದೇಶದಲ್ಲಿ ನಡೆದಿರುವ 3500 ಕೋಟಿ ರು. ಮದ್ಯ ಹಗರಣ ಪ್ರಕರಣದಲ್ಲಿ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಹೆಸರು ಉಲ್ಲೇಖಿಸಲಾಗಿದೆ.
ಹಗರಣದಲ್ಲಿ ಜಗನ್ ರೆಡ್ಡಿ ಪ್ರತಿ ತಿಂಗಳು 50ರಿಂದ 60 ಕೋಟಿ ರು. ಅಕ್ರಮವಾಗಿ ಪಡೆಯುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಆದರೆ, ಚಾರ್ಜ್‌ಶೀಟ್‌ನಲ್ಲೆಲ್ಲೂ ಪೊಲೀಸರು ಜಗನ್ ರೆಡ್ಡಿ ಅವರನ್ನು ನೇರವಾಗಿ ಆರೋಪಿ ಎಂದು ಹೇಳಿಲ್ಲ.
ಲಿಕ್ಕರ್ ಹಗರಣದಲ್ಲಿ ಸಂಗ್ರಹಿಸಲಾದ ಹಣವನ್ನು ಪ್ರಮುಖ ಆರೋಪಿ, ವೈ.ಎಸ್.ರಾಜಶೇಖರ ರೆಡ್ಡಿ ಅವರ ಆಪ್ತ ಕೇಸಿರೆಡ್ಡಿ ರಾಜಶೇಖರ ರೆಡ್ಡಿ ಅವರಿಗೆ ನೀಡಲಾಗುತ್ತಿತ್ತು. ಅವರು ಆ ಹಣವನ್ನು ಇತರೆ ಆರೋಪಿಗಳಾದ ವಿಜಯ್ ಸಾಯಿ ರೆಡ್ಡಿ, ಮಿಥುನ್ ರೆಡ್ಡಿ, ಬಾಲಾಜಿಗೆ ನೀಡುತ್ತಿದ್ದರು. ನಂತರ ಅವರು ಮುಖ್ಯಮಂತ್ರಿ ವೈ.ಎಸ್. ಜಗನ್ ರೆಡ್ಡಿಗೆ ಕಿಕ್‌ಬ್ಯಾಕ್ ವರ್ಗಾಯಿಸುತ್ತಿದ್ದರು. ಪ್ರತಿತಿಂಗಳು ಸುಮಾರು 50ರಿಂದ 60 ಕೋಟಿಲಕ್ಷ ರು. ಅನ್ನು ಜಗನ್ ರೆಡ್ಡಿ ಕಿಕ್ ಬ್ಯಾಕ್ ರೂಪದಲ್ಲಿ ಪಡೆಯುತ್ತಿದ್ದರು ಎಂದು ಆರೋಪಿಸಲಾಗಿದೆ.
ಪ್ರಮುಖ ಆರೋಪಿ ರಾಜಶೇಖರ ರೆಡ್ಡಿ ಸುಮಾರು 250- 300 ಕೋಟಿ ರು. ಅನ್ನು ವೈಎಸ್‌ಆರ್ ಪಕ್ಷದ ಚುನಾವಣೆಗೆ ವೆಚ್ಚ ಮಾಡಿದ್ದರು. ಚೇವಿ ರೆಡ್ಡಿ ಭಾಸ್ಕರ್ ರೆಡ್ಡಿ ಮೂಲಕ ಈ ಕಾರ್ಯ ಮಾಡಿದ್ದರು. ಅಕ್ರಮದ ಹಣದಲ್ಲಿ ದುಬೈ, ಆಫ್ರಿಕಾದಲ್ಲಿ ಜಾಗ, ಚಿನ್ನ ಮತ್ತು ಐಷಾರಾಮಿ ವಸ್ತುಗಳ ಖರೀದಿಸಲಾಗಿತ್ತು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ