ಮದುವೆ ಮಂಟಪಕ್ಕೆ ವಧುವನ್ನು ಅಂಗೈಯಲ್ಲಿ ನಡೆಸಿಕೊಂಡು ಬಂದ ಸಹೋದರರು... ಭಾವುಕ ವಿಡಿಯೋ

Suvarna News   | Asianet News
Published : Jan 30, 2022, 01:24 PM IST
ಮದುವೆ ಮಂಟಪಕ್ಕೆ ವಧುವನ್ನು ಅಂಗೈಯಲ್ಲಿ ನಡೆಸಿಕೊಂಡು ಬಂದ ಸಹೋದರರು... ಭಾವುಕ ವಿಡಿಯೋ

ಸಾರಾಂಶ

ಸಹೊದರಿಯನ್ನು ಅಂಗೈ ಮೇಲೆ ನಡೆಸಿಕೊಂಡು ಬಂದ ಸಹೋದರರು ಸಹೋದರರ ಈ ಭಾವುಕ ಕಾರ್ಯಕ್ಕೆ ನೆಟ್ಟಿಗರು ಫಿದಾ ಇಂಟರ್‌ನೆಟ್‌ನಲ್ಲಿ ವಿಡಿಯೋ ವೈರಲ್‌

ಮದುವೆ ಎಂದ ಮೇಲೆ ಅಲ್ಲಿ ಸಾಕಷ್ಟು ಸಂಭ್ರಮವಿರುತ್ತೆ. ಆದರೆ ಹೆಣ್ಣು ಹೆತ್ತವರಿಗೆ ವಧುವಿನ ಸಹೋದರರಿಗೆ ಅದು ಸ್ವಲ್ಪ ಸಿಹಿ ಸ್ವಲ್ಪ ಕಹಿಯ ಕ್ಷಣ. ಏಕೆಂದರೆ ಇಷ್ಟೊಂದು ದಿನ ತಮ್ಮೊಂದಿಗೆ ಇದ್ದು ತಮ್ಮ ಕಷ್ಟ ಸುಖಗಳನ್ನು ಆಲಿಸುತ್ತಿದ್ದ ಸಹೋದರಿಯನ್ನು ಮತ್ತೊಂದು ಮನೆಗೆ ಶಾಶ್ವತವಾಗಿ ಕಳುಹಿಸಿ ಕೊಡುವ ದಿನ ಅದು. ಹೀಗಾಗಿ ಇದೊಂದು ಖುಷಿಯ ಜೊತೆ ತುಂಬಾ ಭಾವುಕವಾದ ಕ್ಷಣ. ಇಲ್ಲೊಂದು ಕಡೆ ಸಹೋದರರೆಲ್ಲಾ ಜೊತೆಗೂಡಿ ತಮ್ಮ ಪ್ರೀತಿಯ ಸಹೋದರಿಯ ಮದುವೆಯಲ್ಲಿ ಏನು ಮಾಡಿದರು ನೋಡಿ. 

ಹೌದು ಸಹೋದರರೆಲ್ಲಾ ಸೇರಿ ತಮ್ಮ ಸಹೋದರಿಯನ್ನು ಅಂಗೈ ಮೇಲೆ ನಡೆಸಿಕೊಂಡು ಮದುವೆ ಮಂಟಪಕ್ಕೆ ಕರೆ ತಂದಿದ್ದಾರೆ.  ವಿಡಿಯೋದಲ್ಲಿ ಸಹೋದರರೆಲ್ಲಾ ಸಾಲಾಗಿ ಅಂಗೈಯನ್ನು ಚಾಚಿ ಕುಳಿತಿದ್ದಾರೆ. ಜೊತೆಗೆ ಸುತ್ತಲಿರುವ ಕೆಲವರು ಆಕೆಯ ಮೇಲೆ ಹೂವಿನ ದಳಗಳನ್ನು ಉದುರಿಸುತ್ತಿದ್ದು, ವಧು ತನ್ನ ಸಹೋದರರ ಅಂಗೈ ಮೇಲೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆದು ಬರುತ್ತಾಳೆ. ಮದುವೆ ಮಂಟಪದ ದ್ವಾರದಿಂದ ವೇದಿಕೆಯವರೆಗೂ ಹೀಗೆಯೇ ವಧುವನ್ನು ಆಕೆಯ ಸಹೋದರರು ನಡೆಸಿಕೊಂಡು ಹೋಗುತ್ತಾರೆ. ಈ ಮೂಲಕ ತಮ್ಮ ಪುಟ್ಟ ಸಹೋದರಿಯ ಮದುವೆಯನ್ನು ಸಹೋದರರು ವಿಶಿಷ್ಟವಾಗಿಸಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

 

ಈ ವಿಡಿಯೋವನ್ನು ವಿಟ್ಟಿ ವೆಡ್ಡಿಂಗ್‌ (witty_wedding) ಎಂಬ ಇನ್ಸ್ಟಾಗ್ರಾಮ್‌ ಖಾತೆಯಿಂದ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋದ ಹಿನ್ನೆಲೆಯಲ್ಲಿ 'ಮೇರಾ ಬಾಯಿ ತೂ' ಎಂಬ ಹಿಂದಿ ಹಾಡು ಕೇಳಿ ಬರುತ್ತಿದೆ. ಇತ್ತ ವಧು ಸುಂದರವಾದ ಕೆಂಪು ಬಣ್ಣದ ಲೆಹೆಂಗಾವನ್ನು ತೊಟ್ಟಿದ್ದು, ಜೊತಗೆ ಭಾರಿ ಆಭರಣದೊಂದಿಗೆ ಸುಂದರವಾಗಿ ಕಾಣಿಸುತ್ತಿದ್ದಾರೆ. ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ವಧುವಿನ ಸಹೋದರರ ಈ ಕಾರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.  ಒಟ್ಟಿನಲ್ಲಿ ಇತ್ತೀಚೆಗೆ ಮದುವೆಯ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ತಮ್ಮ ಮದುವೆಯನ್ನು ಎಲ್ಲ ಮದುವೆಗಳಿಗಿಂತ ವಿಭಿನ್ನ ವಿಶಿಷ್ಟವಾಗಿಸಲು ಜನ ವಧುವರರು ಯತ್ನಿಸುವುದು ಈಗ ಸಾಮಾನ್ಯವಾಗಿದೆ.

ಎಲೆಯಿಂದ ಹಪ್ಪಳ ಕದ್ದ ವರ... ವಧು ಏನ್ಮಾಡಿದ್ಲು ನೋಡಿ...

ಕಳೆದ ವರ್ಷ ಸಿಆರ್‌ಪಿಎಫ್ ಯೋಧರು(CRPF jawans) ಹುತಾತ್ಮ ಯೋಧನ ಮನೆಗೆ ಬಂಧು ಆತನ ಸಹೋದರಿಯ ಮದುವೆಯಲ್ಲಿ ಭಾಗಿಯಾಗಿ ಸಹೋದರನ ಕರ್ತವ್ಯ ನಿರ್ವಹಿಸಿದ ಭಾವುಕ ಘಟನೆ ಉತ್ತರಪ್ರದೇಶದ ರಾಯ್‌ ಬರೇಲಿಯಲ್ಲಿ ನಡೆದಿತ್ತು.  ಹುತಾತ್ಮನಾದ ತಮ್ಮ ಸಹೋದ್ಯೋಗಿ ಕಾನ್‌ಸ್ಟೆಬಲ್ ಶೈಲೇಂದ್ರ ಪ್ರತಾಪ್ ಸಿಂಗ್ ಅವರ ಗೌರವಾರ್ಥವಾಗಿ, ಹಲವಾರು ಸಿಆರ್‌ಪಿಎಫ್ ಜವಾನರು ಉತ್ತರ ಪ್ರದೇಶ(Uttar Pradesh)ದ ರಾಯ್ ಬರೇಲಿ(Rae Bareli)ಗೆ ಬಂದು ಶೈಲೇಂದ್ರ ಪ್ರತಾಪ್ ಸಿಂಗ್ ಅವರ ಸಹೋದರಿ ಜ್ಯೋತಿಯ ವಿವಾಹದಲ್ಲಿ ಭಾಗವಹಿಸಿದ್ದರು. ಸಹೋದರಿಯ ಮದುವೆಯಲ್ಲಿ ಸಹೋದರ ನಡೆಸಿಕೊಡಬೇಕಾದ ಎಲ್ಲಾ ಜವಾಬ್ದಾರಿ ಎಲ್ಲಾಸಂಪ್ರದಾಯಗಳನ್ನು ಅವರು ಮಾಡಿದ್ದರು.

ಸಿನಿಮಾ ಸ್ಟೈಲ್‌ನಲ್ಲಿ ಮದುವೆ ಹಾಲ್‌ಗೆ ಎಂಟ್ರಿ ಕೊಟ್ಟ ವಧು..

ಈ ಸಿಆರ್‌ಪಿಎಫ್ ಯೋಧರು ಕಳೆದ ಡಿಸೆಂಬರ್ 13 ರಂದು ಉತ್ತರ ಪ್ರದೇಶದ ರಾಯ್ ಬರೇಲಿಗೆ ಅವರ ಸಹೋದರಿ ಜ್ಯೋತಿಯ ವಿವಾಹದಲ್ಲಿ ಭಾಗವಹಿಸಲು ಪ್ರಯಾಣಿಸಿದ್ದರು. 2020 ರ ಅಕ್ಟೋಬರ್‌ನಲ್ಲಿ ಕಾಶ್ಮೀರದ ಪುಲ್ವಾಮಾ( Pulwama)ದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಕಾನ್‌ಸ್ಟೆಬಲ್ ಶೈಲೇಂದ್ರ ಪ್ರತಾಪ್ ಸಿಂಗ್ ಹುತಾತ್ಮರಾಗಿದ್ದರು. 

ಭಾರತೀಯ ಯೋಧರು ಈ ಹಿಂದೆಯೂ ಹಲವು ಅನಾಹುತಗಳ ಸಂದರ್ಭದಲ್ಲಿ ಮಾನವೀಯ ಕಾರ್ಯ ನಡೆಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?