ಫೇವರೇಟ್ ಸಾಂಗ್ ಪ್ಲೇ ಮಾಡಿಲ್ಲ: ಮಂಟಪ ಹತ್ತಲ್ಲ ಎಂದ ವಧು

Published : Aug 26, 2021, 07:53 PM ISTUpdated : Aug 26, 2021, 08:05 PM IST
ಫೇವರೇಟ್ ಸಾಂಗ್ ಪ್ಲೇ ಮಾಡಿಲ್ಲ: ಮಂಟಪ ಹತ್ತಲ್ಲ ಎಂದ ವಧು

ಸಾರಾಂಶ

ಫೇವರೇಟ್ ಸಾಂಗ್ ಪ್ಲೇ ಮಾಡದ್ದಕ್ಕೆ ಮದುಮಗಳ ಬೇಸರ ಮುದ್ದಾದ ವಧು ಮಂಟಪಕ್ಕೇ ಬರಲ್ಲ ಎಂದು ಹಠ ಪಿಂಕ್ ಲೆಹಂಗಾ ಚೆಲುವೆಯ ವಿಡಿಯೋ ಸಖತ್ ವೈರಲ್

ವಧು ಅದ್ಧೂರಿಯಾಗಿ ಮಂಟಪಕ್ಕೆ ಎಂಟ್ರಿ ಕೊಡುವಾಗ ಆಕೆಯ ಫೇವರೇಟ್ ಹಾಡನ್ನು ಪ್ಲೇ ಮಾಡದ್ದಕ್ಕೆ ಸಿಟ್ಟಾಗಿದ್ದು ಮುದ್ದು ವಧುವಿನ ಕೋಪ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಫೇವರೇಟ್ ಸಾಂಗ್ ಪ್ಲೇ ಮಾಡದ್ದಕ್ಕೆ ಹಠ ಮಾಡಿದ ವಧುವನ್ನು ನೀವು ದೂಷಿಸುತ್ತೀರಾ ? ಇನ್‌ಸ್ಟಾ ಮಂದಿ ಮಾತ್ರ ಮೆಚ್ಚಿಕೊಂಡಿದ್ದಾರಪ್ಪ.

ಆಗಸ್ಟ್ 15 ರಂದು ಶಿವಾನಿ ಪಿಪ್ಪೆಲ್ ಅವರು ವಿಡಿಯೋವನ್ನು ಹಂಚಿಕೊಂಡಿದ್ದು, ತನಗೆ ಬೇಕಾದ ಸಾಂಗ್ ಪ್ಲೇ ಮಾಡದ್ದಕ್ಕೆ ಆಕೆ ತನ್ನ ವಿವಾಹದ ಸ್ಥಳವನ್ನು ಪ್ರವೇಶಿಸಲು ನಿರಾಕರಿಸಿದ್ದಾರೆ. ಪಾಪ ವಧು ತನ್ನ ನೆಚ್ಚಿನ ಹಾಡಿಗೆ ಡ್ಯಾನ್ಸ್ ಕೂಡಾ ಪ್ರಾಕ್ಟೀಸ್ ಮಾಡಿ ಬಂದಿದ್ದರು.

ಕಿರುಕುಳ ಕೊಟ್ಟವನ ಜೊತೆ ಪ್ರೀತಿಗೆ ಬಿದ್ದ ಸೋನಂ ತಂಗಿ

ಅವನಿಗೆ ಆ ಹಾಡನ್ನು ಹಾಕಲು ಹೇಳಿ. ನಾನು ಅವನಿಗೆ ಹೇಳಿದ್ದೆ ಎಂದು ಕಿರಿಕಿರಿಗೊಂಡ ವಧು ಹೇಳುವುದನ್ನು ಕಾಣಬಹುದು. ಸ್ನೇಹಿತರು ಮತ್ತು ಕುಟುಂಬ ಸದಸ್ಯರು ವಧುವನ್ನು ಶಾಂತಗೊಳಿಸಲು ಪ್ರಯತ್ನಿಸುವುದನ್ನು ಕಾಣಬಹುದು. ವಧು ಗುಲಾಬಿ ಬಣ್ಣದ ಲೆಹೆಂಗಾ ಧರಿಸಿ ಅಳುವ ಧ್ವನಿಯಲ್ಲಿ ಇದನ್ನೇ ಮತ್ತೆ ಮತ್ತೆ ಹೇಳೋದನ್ನು ಕೇಳಬಹುದು.

ಈ ವೀಡಿಯೊವನ್ನು ಈ ತಿಂಗಳ ಆರಂಭದಲ್ಲಿ ಶಿವಾನಿ ಪಿಪ್ಪಲ್ ಹಂಚಿಕೊಂಡಾಗಿನಿಂದ ಇನ್‌ಸ್ಟಾಗ್ರಾಮ್‌ನಲ್ಲಿ 2 ದಶಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಇದು 1.2 ಲಕ್ಷಕ್ಕೂ ಹೆಚ್ಚು 'ಲೈಕ್‌ಗಳು' ಕಾಮೆಂಟ್‌ಗಳನ್ನು ಪಡೆದಿದೆ. ಅಯ್ಯೋ ಆಕೆಯ ಒಂದು ಸಲವಲ್ಲವೇ ಮದ್ವೆಯಾಗೋದು, ಆಕೆಯ ಇಷ್ಟದ ಹಾಡು ಪ್ಲೇ ಮಾಡಿ ಎಂದಿದ್ದಾರೆ ನೆಟ್ಟಿಗರು. ಹುಡುಗಿಯರದ್ದಂತೂ ಫುಲ್ ಸಪೋರ್ಟ್.

ಇನ್ನೂ ಕೆಲವರು ಈ ರೀತಿ ಚಿಕ್ಕ ಕಾರಣಕ್ಕೆ ರಂಪ ಮಾಡುವುದು ಸರಿ ಅಲ್ಲ ಎಂದಿದ್ದಾರೆ. ಮದುವೆಯಂತ ದೊಡ್ಡ ಸಮಾರಂಭದಲ್ಲಿ ಈ ರೀತಿ ಮಾಡಭಾರದು ಎಂದು ಬುದ್ಧಿ ಹೇಳಿದ್ದಾರೆ.

ಕೊನೆಯಲ್ಲಿ, ವಧು ತನ್ನ ಕನಸಿನಂತೆ ಬ್ರೈಡಲ್ ಎಂಟ್ರಿ ಪಡೆದಿದ್ದಾರೆ. ತನ್ನ ನೆಚ್ಚಿನ ಹಾಡಿನ ಟ್ಯೂನ್‌ಗಳಿಗೆ ಹೆಜ್ಜೆ ಹಾಕಿದ್ದಾರೆ. ಮುಂದಿನ ವೀಡಿಯೊದಲ್ಲಿ, ಡಿಜೆ ತನ್ನ ಹಾಡನ್ನು ಪ್ಲೇ ಮಾಡಿದ್ದು ವಧುವಿನ ಮುಖದ ಮೇಲೆ ಒಂದು ದೊಡ್ಡ ನಗುವನ್ನು ಕಾಣಬಹುದು. ಸಂಭ್ರಮದಿಂದ ಮದುವೆಯ ಸ್ಥಳವನ್ನು ಪ್ರವೇಶಿಸಿದ್ದಾರೆ ವಧು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ