ಬಳಕೆದಾರನ ತಾಯಿ ಸಲಹೆಯಂತೆ ಇನ್ಮುಂದೆ ಬ್ಲಿಂಕಿಟ್‌ನಲ್ಲಿ ಕೊತ್ತಂಬರಿ ಸೊಪ್ಪು ಉಚಿತ!

By Chethan Kumar  |  First Published May 16, 2024, 4:28 PM IST

ಕೊತ್ತಂಬರಿ ಸೊಪ್ಪಿಗೂ ಪಾವತಿ ಮಾಡಿ ನನ್ನ ತಾಯಿಗೆ ಲಘು ಹೃದಯಾಘಾತವಾಗದೆ. ಕೊತ್ತಂಬರಿ ಸೊಪ್ಪು ಉಚಿತವಾಗಿ ನೀಡಬೇಕು ಎಂದು ಸಲಹೆ ನೀಡಿದ್ದಾಳೆ ಅನ್ನೋ ಟ್ವೀಟ್‌ನ್ನು ಗಂಭೀರವಾಗಿ ಪರಿಗಣಿಸಿದ ಬ್ಲಿಂಕಿಟ್, ಇದೀಗ ತರಕಾರಿ ಖರೀದಿಸುವ ಬ್ಲಿಂಕಿಟ್ ಬಳಕೆದಾರರಿಗೆ ಕೊತ್ತಂಬರಿ ಸೊಪ್ಪು ಉಚಿತವಾಗಿ ಸಿಗಲಿದೆ.
 


ನವದೆಹಲಿ(ಮೇ.16) ನಿಮಗೆ ಗೊತ್ತಿರುವ ಅಥವಾ ಹತ್ತಿರದ ಸಣ್ಣ ಅಂಗಡಿಯಲ್ಲಿ ಒಂದಿಷ್ಟು ತರಕಾರಿಗಳನ್ನು ಕೊಂಡರೆ ಕೊತ್ತಂಬರಿ ಸೊಪ್ಪು ಉಚಿತವಾಗಿ ನೀಡುತ್ತಾರೆ. ಆದರೆ ಮಾಲ್, ಸೂಪರ್ ಮಾರ್ಕೆಟಿಂಗ್ ಅಥವಾ ಆನ್‌ಲೈನ್ ಮೂಲಕ ಆರ್ಡರ್ ಮಾಡಿದಾಗ ಕೊತ್ತಂಬರಿ ಸೊಪ್ಪಿಗೆ ಪಾವತಿ ಮಾಡಬೇಕು. ಹೀಗೆ ಬ್ಲಿಂಕಿಟ್ ಮೂಲಕ ತರಕಾರಿ ಆರ್ಡರ್ ಮಾಡಿದ ಬಳಕೆದಾರನ ತಾಯಿಗೆ ಕೊತ್ತಂಬರಿ ಸೊಪ್ಪಿಗೂ ಪಾವತಿ ಮಾಡಬೇಕು ಅನ್ನೋದು ತೀವ್ರ ನೋವು ತರಿಸಿದೆ. ಇಷ್ಟು ಖರೀದಿಸಿದರೂ ಕನಿಷ್ಠ ಕೊತ್ತಂಬರಿ ಸೊಪ್ಪನ್ನೂ ಉಚಿತವಾಗಿ ನೀಡಿಲ್ಲ ಅನ್ನೋ ಬೇಸರ. ಇದೀಗ ಬಳಕೆದಾರನ ತಾಯಿಯ ಸಲಹೆಯಂತೆ ಬ್ಲಿಂಕಿಟ್ ಬಳಕೆದಾರರು ಇನ್ಮುಂದೆ ತರಕಾರಿ ಖರೀದಿಸಿದರೆ ಕೊತ್ತಂಬರಿ ಸೊಪ್ಪನ್ನು ಉಚಿತವಾಗಿ ಪಡೆಯಬಹುದು.

ಬ್ಲಿಂಕಿಟ್ ಸಿಇಒ ಅಲ್ಬಿಂದರ್ ದಿಂದ್ಸಾ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಬ್ಲಿಂಕಿಟ್ ಬಳೆಕೆದಾರರು ಕೊತ್ತಂಬರಿ ಸೊಪ್ಪು ಉಚಿತವಾಗಿ ಪಡೆಯಬಹುದು. ಈ ಸೇವೆ ಮುಂದಿನ ಕೆಲ ದಿನಗಳಲ್ಲಿ ಮತ್ತಷ್ಟು ಉತ್ತಮಪಡಿಸಲಾಗುತ್ತದೆ ಎಂದು ದಿಂದ್ಸಾ ಹೇಳಿದ್ದಾರೆ. ಇದೇ ವೇಳೆ ಎಲ್ಲರೂ ಅಂಕಿತ್ ತಾಯಿಗೆ ಧನ್ಯವಾದ ಹೇಳಿ ಎಂದು ಸೂಚಿಸಿದ್ದಾರೆ. 

Latest Videos

undefined

ಕ್ರಿಯೆಟಿವಿಟಿಗೆ ಸಿಕ್ತು ಮೆಚ್ಚುಗೆ, ಬ್ಲಿಂಕಿಟ್ ಮೂಲಕ ಉದ್ಯೋಗಕ್ಕಾಗಿ ರೆಸ್ಯೂಮ್ ಕಳುಹಿಸಿದ ಅಭ್ಯರ್ಥಿ!

ಬ್ಲಿಂಕಿಟ್ ಕೊತ್ತಂಬರಿ ಸೊಪ್ಪು ಉಚಿತವಾಗಿ ನೀಡಲು ಮುಖ್ಯ ಕಾರಣ ಅಂಕಿತ್ ತಾಯಿ. ಬ್ಲಿಂಕಿಟ್‌ನಲ್ಲಿ ಅಂಕಿತ್ ತರಕಾರಿಗಳನ್ನು ಆರ್ಡರ್ ಮಾಡಿದ್ದಾರೆ. ತಾಯಿ ಸೂಚನೆಯಂತೆ ಕೆಲ ತರಕಾರಿ ಪಟ್ಟಿ ಮಾಡಿ ಆರ್ಡರ್ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಕೊತ್ತಂಬರಿ ಸೊಪ್ಪು ಕೂಡ ಇತ್ತು. ಆದರೆ ಒಂದಷ್ಟು ತರಕಾರಿ ಖರೀದಿಸಿದರೂ ಕೊತ್ತಂಬರಿ ಸೊಪ್ಪು ಉಚಿತವಾಗಿ ನೀಡಲಿಲ್ಲ ಅನ್ನೋದು ಅಂಕಿತ್ ತಾಯಿಯ ಬೇಸರಕ್ಕೆ ಕಾರಣಾಗಿದೆ. ನಾವು ಅಂಗಡಿಯಲ್ಲಿ ಖರೀದಿಸಿದರೆ ಕೊತ್ತಂಬರಿ ಸೊಪ್ಪು ಉಚಿತವಾಗಿ ನೀಡುತ್ತಿದ್ದರು ಅನ್ನೋದು ತಾಯಿಯ ಅಳಲಾಗಿತ್ತು.

 

It’s live! Everyone please thank Ankit’s mom 💛

We will polish the feature in next couple of weeks. https://t.co/jYm2hGm67a pic.twitter.com/5uiyCmSER6

— Albinder Dhindsa (@albinder)

 

ಇಂತಿಷ್ಟು ಹಣದ ತರಕಾರಿಗಳನ್ನು ಖರೀದಿಸುವ ಗ್ರಾಹಕರಿಗೆ ಬ್ಲಿಂಕಿಟ್ ಉಚಿತವಾಗಿ ಕೊತ್ತಂಬರಿ ಸೊಪ್ಪು ನೀಡಬೇಕು ಎಂದು ಅಂಕಿತ್ ತಾಯಿ ಗೊಣಗಿದ್ದಾರೆ. ತಾಯಿ ಮಾತುಗಳನ್ನು ಅಂಕಿತ್ ಟ್ವೀಟ್ ಮೂಲಕ ಪೋಸ್ಟ್ ಮಾಡಿದ್ದಾರೆ. ಬ್ಲಿಂಕಿಟ್‌ನಲ್ಲಿ ಕೊತ್ತಂಬರಿ ಸೊಪ್ಪಿಗೂ ಪಾವತಿ ಮಾಡಬೇಕು ಎಂದು ನನ್ನ ತಾಯಿಗೆ ಲಘು ಹೃದಯಾಘಾತವಾಗಿದೆ. ಇಂತಿಷ್ಟು ಹಣದಲ್ಲಿ ತರಕಾರಿ ಆರ್ಡರ್ ಮಾಡುವ ಬಳಕೆದಾರರಿಗೆ ಕೊತ್ತಂಬರಿ ಸೊಪ್ಪು ಉಚಿತವಾಗಿ ನೀಡಬೇಕು ಅನ್ನೋದು ನನ್ನ ತಾಯಿಯ ಸಲಹೆ ಎಂದು ಬ್ಲಿಂಕಿಟ್ ಸಿಇಒಗೆ ಟ್ಯಾಗ್ ಮಾಡಿದ್ದರು.

ಉದ್ಯಾನ ನಗರಿಗೆ ಬಂತು ಹೊಸ ಹೆಸರು, ಕೇಕ್ ರಾಜಧಾನಿ ಪಟ್ಟಕಟ್ಟಿದ ಬೆಂಗಳೂರಿಗರು!

ಈ ಟ್ವೀಟ್‌ ಗಂಭೀರವಾಗಿ ಪರಿಗಣಿಸಿದ ಬ್ಲಿಂಕಿಟ್ ಇದೀಗ ಕೊತ್ತಂಬರಿ ಸೊಪ್ಪು ಉಚಿತವಾಗಿ ನೀಡುವ ನಿರ್ಧಾರ ಘೋಷಿಸಿದೆ. ಇದೀಗ ಬ್ಲಿಂಕಿಟ್ ಮೂಲಕ ತರಕಾರಿ ಖರೀದಿಸುವ ಗ್ರಾಹಕರಿಗೆ ಉಚಿತವಾಗಿ ಕೊತ್ತಂಬರಿ ಸೊಪ್ಪು ಸಿಗಲಿದೆ.
 

click me!