
ನವದೆಹಲಿ (ಸೆ.11) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬ್ರಿಕ್ಸ್ (BRICS Summit 2026) ಶೃಂಗಸಭೆ ನಡೆಯುತ್ತಿದೆ. ಸೆಪ್ಟೆಂಬರ್ 12 ಹಾಗೂ 13ರಂದು ಪ್ರಮುಖ ದೇಶಗಳ ನಾಯಕರು, ನಿಯೋಗ ಸಭೆ ಸೇರುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಪ್ರಮುಖ ನಾಯಕರು ದೆಹಲಿಯಲ್ಲಿ ಸಭೆ ಸೇರುತ್ತಿದ್ದಾರೆ. ಹೀಗಾಗಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಬ್ರಿಕ್ಸ್ ಶೃಂಗಸಭೆ ಹಿನ್ನಲೆಯಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಭಾರತೀಯ ರೈಲ್ವೇ ಇಲಾಖೆ ಮಹತ್ವದ ಮಾಹಿತಿ ನೀಡಿದೆ. ಬ್ರಿಕ್ಸ್ ಶೃಂಗಸಭೆಯಿಂದ ಬರೋಬ್ಬರಿ 120ಕ್ಕೂ ಹೆಚ್ಚು ರೈಲುಗಳ ಸೇವೆಯಲ್ಲಿ ವಿಳಂಬ, ಹಲವು ರದ್ದು, ಮತ್ತೆ ಕೆಲವು ರೈಲುಗಳ ಮಾರ್ಗ ಬದಲಾವಣೆಯಾಗುತ್ತಿದೆ.
ಸೆಪ್ಟೆಂಬರ್ 11 ರಿಂದ 13ರ ವರೆಗೆ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ರೈಲ್ವೇ ಇಲಾಖೆ ಹೇಳಿದೆ. ಪ್ರಮುಖ ನಾಯಕರು ಸೆಪ್ಟೆಂಬರ್ 11 ರಂದು ದೆಹಲಿಗೆ ಆಗಮಿಸುತ್ತಿದ್ದಾರೆ. ದೆಹಲಿ ಡಿವಿಶನ್ ರೈಲು ಕಾರ್ಯನಿರ್ವಹಣೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ನವ ದೆಹಲಿ ರಾಂಚಿ ರಾಜಧಾನಿ ಎಕ್ಸ್‌ಪ್ರೆಸ್, ನವದೆಹಲಿ ದಿಬ್ರುಗಡ ರಾಜಧಾನಿ ಎಕ್ಸ್‌ಪ್ರೆಸ್, ನವದೆಹಲಿ ಸೆಲ್ದಾ ರಾಜಧಾನಿ ಎಕ್ಸ್‌ಪ್ರೆಸ್, ದೆಹಲಿ ಹೌರಾ ರಾಜಧಾನಿ ಎಕ್ಸ್‌ಪೆಸ್, ನವ ದೆಹಲಿ ಭುವನೇಶ್ವರ್ ರಾಜಧಾನಿ ಎಕ್ಸ್‌ಪ್ಸೆಸ್, ಮುಂಬೈ ತೇಜಸ್ ರಾಜಧಾನಿ, ನವದೆಹಲಿ ರಾಜೇಂದ್ರ ನಗರ ಟರ್ಮಿನಲ್, ವಂದೇ ಭಾರತ್ ಎಕ್ಸ್‌ಪ್ರೆಸ್, ನವ ದೆಹಿ ಹೌರ ಪೂರ್ವ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಬ್ರಿಕ್ಸ್ ಶೃಂಗಸಭೆಯಿಂದ ಪ್ರೀಮಿಯಂ ಹಾಗೂ ಸೂಪರ್‌ಫಾಸ್ಟ್ ರೈಲು ಮಾರ್ಗಗಳ ಬದಲಾವಣೆ ಮಾಡಲಾಗಿದೆ. ದೆಹಲಿ ಜಂಕ್ಷನ್, ದೆಹಲಿ ಶಹದರ, ಶಾಹೀಬಾದ್, ತಿಲಕ್ ಬ್ರಿಡ್ಜ್, ಹಜ್ರತ್ ನಿಜಾಮುದ್ದಿನ್ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದೆ. ಈ ಮಾರ್ಗದಲ್ಲಿ ಸಂಚರಿವು ರೈಲುಗಳ ಮಾರ್ಗಗಳು ಬದಲಾಗಲಿದೆ. ಹೀಗಾಗಿ ಸಂಪೂರ್ಣ ಕ್ರಾಂತಿ ಎಕ್ಸ್‌ಪ್ರೆಸ್, ಗೋಮಿತಿ ಎಕ್ಸ್‌ಪ್ರೆಸ್, ಮಗ್ದ್ ಎಕ್ಸ್‌ಪ್ರೆಸ್, ಶಿವ ಗಂಗಾ, ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ರೈಲು ಮಾರ್ಗ ಬದಲಾವಣೆ ಮಾಡಲಾಗಿದೆ.
ಶೃಂಗಸಭೆ ಹಿನ್ನಲೆಯಲ್ಲಿ ಹಲವು ಮಾರ್ಗ ಬದಲಾವಣೆ ಮಾಡಲಾಗಿದೆ. ಕೆಲ ರೈಲುಗಳು ರದ್ದು ಮಾಡಲಾಗಿದೆ. ಇನ್ನು ಗ್ರ್ಯಾಂಡ್ ಟ್ರಂಕ್ ಎಕ್ಸ್‌ಪ್ರೆಸ್, ತೇಜಸ್ ರಾಜಧಾನಿ, ಪಶ್ಚಿಮ ಎಕ್ಸ್‌ಪ್ಸೆ, ನ್ಯೂ ಡೆಲ್ಲಿ ಹೈದರಾಬಾದ್ ಎಕ್ಸ್‌ಪ್ರೆಸ್ ರೈಲುಗಳು ವಿಳಂಬವಾಗಲಿದೆ ಎಂದು ರೈಲ್ವೇ ಇಲಾಖೆ ಹೇಳಿದೆ. 15 ರಿಂದ ಗರಿಷ್ಠ 2 ಗಂಟೆ ವರೆಗೆ ವಿಳಂಬವಾಗುವ ಸಾಧ್ಯತೆ ಇದೆ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ